January22, 2026
Thursday, January 22, 2026
spot_img

ನ.30ರಂದು ದಕ್ಷಿಣ ಭಾರತದ ಕರಾವಳಿಗೆ ಬರ್ತಿದೆ ‘ದಿತ್ವಾ’ ಚಂಡಮಾರುತ: IMD ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳ ಕೊಲ್ಲಿಯಲ್ಲಿ ತನ್ನ ವೇಗವನ್ನು ಬಲಪಡಿಸುತ್ತಿರುವ ‘ದಿತ್ವಾ’ ಚಂಡಮಾರುತವು ದಕ್ಷಿಣ ಭಾರತದ ಕರಾವಳಿ ಪ್ರದೇಶಗಳಿಗೆ ಆತಂಕ ಮೂಡಿಸಿದೆ. ಶ್ರೀಲಂಕಾ ಸಮೀಪ ರೂಪುಗೊಂಡಿರುವ ಈ ಚಂಡಮಾರುತವು ಉತ್ತರ ಹಾಗೂ ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದ್ದು, ನವೆಂಬರ್ 30ರಂದು ತಮಿಳುನಾಡಿನ ಉತ್ತರ ಭಾಗ, ಪುದುಚೇರಿ ಹಾಗೂ ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ಚಂಡಮಾರುತವು ಕಾರೈಕಲ್‌ನಿಂದ ಸುಮಾರು 320 ಕಿಲೋಮೀಟರ್ ಆಗ್ನೇಯಕ್ಕೆ, ಪುದುಚೇರಿಯಿಂದ 430 ಕಿಲೋಮೀಟರ್ ಆಗ್ನೇಯಕ್ಕೆ ಹಾಗೂ ಚೆನ್ನೈನಿಂದ 530 ಕಿಲೋಮೀಟರ್ ದಕ್ಷಿಣಕ್ಕೆ ಸಕ್ರಿಯವಾಗಿದೆ. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಇದು ಇನ್ನಷ್ಟು ಬಲ ಪಡೆಯುವ ಸೂಚನೆಗಳಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 60ರಿಂದ 80 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.

Must Read