ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಡಿಸೆಂಬರ್ 8 ರಂದು ತಮಿಳುನಾಡು, ಪುದುಚೆರಿಗೆ ಮ್ಯಾಂಡಸ್ ಚಂಡಮಾರುತ ಅಪ್ಪಳಿಸಲಿದೆ.
ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳಲಿದ್ದು, ಚಂಡಮಾರುತದ ಅಬ್ಬರದಿಂದ ರಕ್ಷಿಸಲು ಎನ್‌ಡಿಆರ್‌ಎಫ್ ತಂಡಗಳು, ಸೇನೆ, ನೌಕಾಪಡೆ ಸಜ್ಜುಗೊಂಡಿದೆ.
ಇಂದು ಸಂಜೆ ವೇಳೆಗೆ ವಾಯುಭಾರ ಕುಸಿತ ತೀವ್ರತೆ ಕಾಣಲಿದ್ದು, ನಾಳೆ ಬೆಳಗ್ಗೆ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ.
ಮ್ಯಾಂಡಸ್ ಹೆಸರಿನ ಈ ಚಂಡಮಾರುತ ಭಾರೀ ಮಳೆ ಜೊತೆ ಗುಡುಗು ಮಿಂಚನ್ನೂ ತರಲಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.