ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದತ್ತ ಮೊಂಥಾ ಚಂಡಮಾರುತ ಎಂಟ್ರಿಕೊಟ್ಟಿದ್ದು, ಇದರ ಪರಿಣಾಮವಾಗಿ ಇಂದು ಭೂಕುಸಿತ ಉಂಟಾಗಿದೆ. ಹೀಗಾಗಿ ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 32 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಅಕ್ಟೋಬರ್ 27ರಂದು 2 ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.
ಸೋಮವಾರ ರದ್ದಾದ ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಹೊರತುಪಡಿಸಿ, ಉಳಿದ 30 ವಿಮಾನಗಳು ಅಕ್ಟೋಬರ್ 27ರಂದು ಕಾರ್ಯಾಚರಣೆ ನಡೆಸಿದ್ದವು. ಇದೀಗ ಎಲ್ಲಾ ವಿಮಾನ ಹಾರಾಟ ರದ್ದುಗೊಂಡಿದೆ.
ವಿಜಯವಾಡ ವಿಮಾನ ನಿಲ್ದಾಣ ಕೂಡ ಇಂದು 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

