ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಕೆ ಶಿವಕುಮಾರ್ ಸಿನಿಮಾ ನಟರಿಗೆ ವಾರ್ನಿಂಗ್ ಕೊಟ್ಟರೆ ಯಾರೂ ಹೆದರಿ ಕೂರೋದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಹೇಳಿಕೆ ಕಲಾವಿದರು, ನಿರ್ಮಾಪಕ, ನಿರ್ದೇಶಕರು, ಟೆಕ್ನೀಷನ್ಸ್ಗಳ ಮನಸಿಗೆ ನೋವಾಗಿದೆ. ಕಾಂಗ್ರೆಸ್ ಅವರು ಚುನಾವಣೆ ಸಮಯದಲ್ಲಿ ಈ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಅದು ರಾಜಕೀಯ ಪ್ರೇರಿತ ಪಾದಯಾತ್ರೆ. ರಾಜಕೀಯ ಪಾದಯಾತ್ರೆಯಲ್ಲಿ ಭಾಗವಹಿಸೋದು ಸೂಕ್ತ ಅಲ್ಲ ಎಂದು ಭಾಗಿಯಾಗಿಲ್ಲ. ಯಾರಿಗೂ ನೀವು ಕಟ್ಟುನಿಟ್ಟಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ತಾಕೀತು ಮಾಡಿದ್ರೂ ಯಾರು ಕೇಳೋರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.