ಮಡದಿ ಮನೆಯಲ್ಲೇ ‘ದಚ್ಚು’ ಫುಲ್ ರಿಲ್ಯಾಕ್ಸ್, ಮಗನ ಬರ್ತ್​ಡೇ ಸೆಲೆಬ್ರೇಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ. ಜೈಲಿನಿಂದ ಹೊರಬಂದ ನಂತರ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಇಂದು ಮಗ ವಿನೀಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಸರಿಯಾಗಿ ಅವರು ಮನೆಗೆ ಬಂದಿದ್ದಾರೆ.

ಇಂದು ವಿನೀಶ್ ಹುಟ್ಟುಹಬ್ಬ. ರಾತ್ರಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಗಿದೆ. ಅವರು ತಮ್ಮ ಮಗನೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಬಳಿಕ ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ. ಹಲವು ತಿಂಗಳುಗಳ ನಂತರ, ಅವರು ಬೆಡ್​ನಲ್ಲಿ ಅವರು ಹಾಯಾಗಿ ನಿದ್ರಿಸಿದ್ದಾರೆ.

ದರ್ಶನ್ ಬಿಡುಗಡೆಗೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವೆಡೆ ಪಟಾಕಿಗಳನ್ನೂ ಕೂಡ ಸಿಡಿಸಲಾಗಿದೆ. ಸದ್ಯಕ್ಕೆ ಇದು ತಾತ್ಕಾಲಿಕ ರಿಲೀಫ್. ಆರು ವಾರಗಳಲ್ಲಿ ಅವರು ಮತ್ತೆ ಜೈಲು ಸೇರಲಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!