ದಿನಭವಿಷ್ಯ: ಆತುರದ ತೀರ್ಮಾನ, ಒತ್ತಡಗಳಿಗೆ ಸಿಕ್ಕಿಹಾಕಿಕೊಳ್ಳದೇ ಎಚ್ಚರಿಕೆಯಿಂದಿರಿ, ಆಸ್ತಿಯಿಂದ ಲಾಭ

ಮೇಷ.
ನಿಮ್ಮ ಸ್ವಾರ್ಥಕ್ಕೆ ಅತಿ ಆದ್ಯತೆ ನೀಡಿ ಇತರರನ್ನು ಕಡೆಗಣಿಸದಿರಿ. ಕುಟುಂಬಸ್ಥರ ಹಿತಾಸಕ್ತಿ ಗಮನಿಸಿ. ಉದ್ಯೋಗದಲ್ಲಿ ಕಿರುಕುಳ ಎದುರಿಸುವಿರಿ.
ವೃಷಭ
ನಿಮಗಿಂದು ವೃತ್ತಿಯಲ್ಲಿ ಉದಾಸೀನತೆ ಕಾಡಬಹುದು. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಲಾಭ.  ಸಾಂಸಾರಿಕ ಸಂಘರ್ಷ.
ಮಿಥುನ
ಪ್ರತಿಕೂಲ ಸನ್ನಿವೇಶ ಒದಗಿದರೆ ಸ್ಥಿಮಿತ ಕಳಕೊಳ್ಳದಿರಿ. ಸಮಾಧಾನ ದಿಂದ ಪರಿಸ್ಥಿತಿ ನಿಭಾಯಿಸಿ. ಆತ್ಮೀಯರ ಸೂಕ್ತ ನೆರವು ಲಭಿಸಲಿದೆ.
ಕಟಕ
ಕಾರ್ಯ ಸಾಧನೆಗೆ ಹೆಚ್ಚುವರಿ ಪರಿಶ್ರಮ ಬೇಕು. ವೃತ್ತಿಯಲ್ಲಿ ಇತರರ ಅಸಮಾಧಾನ ಎದುರಿಸುವಿರಿ. ಹೊಂದಾಣಿಕೆ ಮುಖ್ಯ.
ಸಿಂಹ
ಯಾವುದೋ ವಿಷಯಕ್ಕೆ ಹಠ ಹಿಡಿದು ಇತರರ ವಿರೋಧ ಕಟ್ಟಿಕೊಳ್ಳಬೇಡಿ. ಪರಿಸ್ಥಿತಿಗೆ ತಕ್ಕಂತೆ ನಿಭಾಯಿಸಿ. ಆಪ್ತರ ಹಿತ ಕಾಯಿರಿ.
ಕನ್ಯಾ
ಸಮಸ್ಯೆ ಬಗೆಹರಿಸುವ ನಿಮ್ಮ ಈಗಿನ ಯೋಜನೆ ಸೂಕ್ತ ಫಲ ನೀಡದು. ಪರ್ಯಾಯ ಮಾರ್ಗ ಹುಡುಕುವುದು ಒಳ್ಳೆಯದು.
ತುಲಾ
ಕೌಟುಂಬಿಕ ಒತ್ತಡ ಅನಿರೀಕ್ಷಿತವಾಗಿ ನಿಮ್ಮ ನೆಮ್ಮದಿ ಕಲಕುವುದು. ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸಲು ಕಲಿತರೆ ಬದುಕು ಸುಗಮ.
ವೃಶ್ಚಿಕ
ನಿಮ್ಮ ಗುರಿ ಸಾಧನೆಗೆ ಭಿನ್ನ ದಾರಿ ಹಿಡಿಯಿರಿ. ಹಳೆಯ ವಿಧಾನ ಫಲ ನೀಡದು. ದುಂದುವೆಚ್ಚ ಕಡಿಮೆ ಮಾಡಿ ಉಳಿತಾಯಕ್ಕೆ ಗಮನ ಕೊಡಿ.
ಧನು
ವಿವಾಹಕ್ಕೆ ಸಂಬಂಽಸಿ ಶುಭ ಸುದ್ಧಿ. ನೆಂಟಸ್ಥಿಕೆ ಕೂಡಿಬಂದೀತು. ಕೌಟುಂಬಿಕ ಬಿಕ್ಕಟ್ಟು ಸೌಹಾರ್ದಯುತ ಪರಿಹಾರ ಕಾಣುವುದು.
ಮಕರ
ಆಪ್ತರ ಹಿತವಚನ ಪಾಲಿಸಿ. ಹಿರಿಯರ ಮಾತಿಗೆ ಎದುರಾಡದಿರಿ. ಆರೋಗ್ಯ ಸಮಸ್ಯೆ ಸಂಭವ. ಹೆಚ್ಚಿನ ಕಾಳಜಿ ವಹಿಸಿರಿ.
ಕುಂಭ
ಆತ್ಮೀಯರ  ವರ್ತನೆ ನಿಮ್ಮ ನೆಮ್ಮದಿ ಕಲಕಲಿದೆ. ಅವರನ್ನು ತಿದ್ದುವ ಪ್ರಯತ್ನ ಫಲ ನೀಡದು. ಆರ್ಥಿಕ ಬಿಕ್ಕಟ್ಟು ನಿಧಾನ ಪರಿಹಾರ ಕಾಣಲಿದೆ.
ಮೀನ
ಮಾನಸಿಕ ಒತ್ತಡ ಉಂಟು ಮಾಡುವ  ವಿಷಯ ಯೋಚಿಸದಿರಿ. ಸದ್ಯಕ್ಕೆ ಅದುವೇ ಚಿಂತೆಗೆ ಪರಿಹಾರ. ಆತ್ಮೀಯರ ಜತೆ ಜಗಳ ನಿವಾರಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!