ಮೇಷ
ವೃತ್ತಿಯಲ್ಲಿ ಮೇಲಿನವರ ಅವಕೃಪೆಗೆ ಗುರಿಯಾಗುವಿರಿ. ಸಾವಧಾನವಾಗಿ ಕಾರ್ಯ ನಿರ್ವಹಿಸಿ. ಭಾವನಾತ್ಮಕ ಏರುಪೇರು.
ವೃಷಭ
ಸಮಸ್ಯೆಯು ತಾನಾಗಿ ಪರಿಹಾರ ಕಾಣುವುದು ಎಂದು ಸುಮ್ಮನೆ ಕೂರಬೇಡಿ. ನಿಮ್ಮ ಪ್ರಯತ್ನವೂ ಬೇಕು. ಕೌಟುಂಬಿಕ ಅಸಹಕಾರ.
ಮಿಥುನ
ವೃತ್ತಿಯಲ್ಲಿ ಸಮಸ್ಯೆ ಎದುರಿಸುವಿರಿ. ಅಸಹಕಾರ ಹೆಚ್ಚು. ಕೌಟುಂಬಿಕ ಭಿನ್ನಮತ. ಸಂಗಾತಿ ಜತೆಗೆ ಹೊಂದಾಣಿಕೆ ಮುಖ್ಯ. ಸಂಯಮವೂ ಮುಖ್ಯ.
ಕಟಕ
ನಿಮ್ಮ ಸುತ್ತ ಕೆಲವು ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಿ. ಅನವಶ್ಯ ಖರ್ಚು ನಿಯಂತ್ರಿಸಿ. ಸಂಸಾರದಲ್ಲಿ ವಾಗ್ವಾದ.
ಸಿಂಹ
ಉದ್ಯೋಗದಲ್ಲಿ ನಿಮಗೆ ಪೂರಕ ಪರಿಸ್ಥಿತಿ. ಉದ್ವಿಗ್ನತೆ ನಿವಾರಣೆ. ಕುಟುಂಬದಲ್ಲಿ ಭಿನ್ನಮತ ಉಂಟಾದೀತು. ಸಹಕಾರ ಮನೋಭಾವ ಒಳಿತು.
ಕನ್ಯಾ
ಅಽಕ ಒತ್ತಡ. ಹೆಚ್ಚು ಕಾರ್ಯ. ಮನಸ್ಸು ವಿಚಲಿತ. ಯಾವುದೋ ವಿಷಯದಲ್ಲಿ ತಲ್ಲಣ ಬಾಽಸಲಿದೆ. ಕೌಟುಂಬಿಕ ಮನಸ್ತಾಪ ಸಂಭವ.
ತುಲಾ
ನಿಮ್ಮ ಪಾಲಿಗೆ ಸಾಧಾರಣ ದಿನ. ಸಹೋದ್ಯೋಗಿಗಳ ಅಸಹಕಾರ. ವಾಗ್ವಾದಕ್ಕೆ ಆಸ್ಪದ ನೀಡಬೇಡಿ. ಸಹನೆಯಿಂದ ನಿಭಾಯಿಸಿ.
ವೃಶ್ಚಿಕ
ವೃತ್ತಿಯಲ್ಲಿ ಒತ್ತಡ ಹೆಚ್ಚಾದರೂ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಹೊಂದಿಕೊಳ್ಳುವ ಸ್ವಭಾವ ನೆರವಿಗೆ ಬರಲಿದೆ.
ಧನು
ಕೆಲಸದ ಒತ್ತಡ ಕಡಿಮೆ. ಇಂದಿನ ನಿಮ್ಮ ನಿರ್ಧಾರ ಉತ್ತಮ ಫಲ ನೀಡಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿವಾರಣೆ. ಧನವ್ಯಯ ಹೆಚ್ಚು.
ಮಕರ
ಕಠಿಣ ಪರಿಸ್ಥಿತಿ ಎದುರಿಸಬಲ್ಲ ದೃಢ ಮನೋಭಾವ ಪ್ರದರ್ಶಿಸುವಿರಿ.ಅದರಿಂದ ಕಾರ್ಯ ಸ-ಲತೆ. ವಿರೋಽಗಳ ಸೋಲು.
ಕುಂಭ
ಕೆಲವು ವಿಷಯದ ಕುರಿತು ಅತಿಯಾಗಿ ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುವಿರಿ. ಸಮಸ್ಯೆಗೆ ಪರಿಹಾರ ಇಲ್ಲವೆಂಬ ಹತಾಶೆ.
ಮೀನ
ನೀವು ಎಣಿಸಿದಂತೆ ಯಾವುದೂ ಸಾಗುತ್ತಿಲ್ಲ ಎಂಬ ಹತಾಶೆ. ದೊಡ್ಡ ಮಟ್ಟದ ಹೂಡಿಕೆ ಮಾಡಬೇಡಿ. ನಿರೀಕ್ಷಿತ ಫಲ ದೊರಕದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ