ದಿನಭವಿಷ್ಯ: ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನ ಮಾಡಿಕೊಳ್ಳಿ, ಬಂಧುಗಳ ಅನಿರೀಕ್ಷಿತ ಭೇಟಿ

ಮೇಷ
ಅತಿಯಾದ ಸುತ್ತಾಟ ಆರೋಗ್ಯದ ಮೇಲೆ ಪರಿಣಾಮ ಬೀರೀತು. ಕುಟುಂಬ ಸದಸ್ಯರೊಬ್ಬರ ನೋವು ನಿವಾರಿಸಲು ಗಮನ ಕೊಡಿ.
ವೃಷಭ
ಆಪ್ತರಲ್ಲಿ ಮನದ ಭಾವನೆ ವ್ಯಕ್ತಪಡಿಸಲು  ಹಿಂಜರಿಕೆ ಬೇಕಿಲ್ಲ. ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಹಣದ ವ್ಯವಹಾರದಲ್ಲಿ ಲಾಭ.
ಮಿಥುನ
ಕೌಟುಂಬಿಕ ಅಥವಾ ಹಣಕಾಸು ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಿ. ಪರಿಹಾರ ದೊರಕೀತು.ಆರೋಗ್ಯ ಸಮಸ್ಯೆ ಪರಿಹಾರ ಕಾಣಲಿದೆ.
ಕಟಕ
ಕುಟುಂಬ ಸದಸ್ಯರ ಜತೆ ಇಂದು ಆತ್ಮೀಯ ಕಾಲಕ್ಷೇಪ. ಯಾವುದೇ ವಾದವಿವಾದಕ್ಕೆ ಆಸ್ಪದ ಕೊಡಬೇಡಿ. ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಿ.
ಸಿಂಹ
ಅನಿರೀಕ್ಷಿತ ಧನಲಾಭ. ಆತ್ಮೀಯರ ಜತೆಗಿನ ವೈಮನಸ್ಸು ಪರಿಹಾರ. ಸೌಹಾರ್ದ ವೃದ್ಧಿ. ಹಿರಿಯರಿಗೆ ಸೊಂಟನೋವು ಸಂಭವ.
ಕನ್ಯಾ
ನೀವಿಂದು ದೃಢ ಮನಸ್ಸು ತೋರುವಿರಿ. ಅದರಿಂದಾಗಿ ನಿಮ್ಮ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ. ಹಣದ ಪೂರೈಕೆ ಅಭಾದಿತ.
ತುಲಾ
ಹೆಚ್ಚು ಹೊಣೆಗಾರಿಕೆ, ಅಽಕ ಒತ್ತಡ. ಇದರ ಮಧ್ಯೆಯೂ ನಿಮ್ಮ ಹವ್ಯಾಸಕ್ಕೆ ಸಮಯ ಕೊಡಿ. ಅದುವೇ ನಿಮಗೆ ನೆಮ್ಮದಿ ತರುವುದು.
ವೃಶ್ಚಿಕ
ವೃತ್ತಿಯಲ್ಲಿ ಉತ್ತಮ ದಿನವಲ್ಲ. ಅಸಹನೀಯ ಬೆಳವಣಿಗೆ. ವ್ಯವಹಾರದಲ್ಲಿ  ಹಣದ ಕೊರತೆ. ಕೆಟ್ಟ ಆಹಾರದಿಂದ ಹೊಟ್ಟೆ ಕೆಡುವ ಸಂಭವ.
ಧನು
ಆರ್ಥಿಕ ಉನ್ನತಿ. ಪಡೆದ ಸಾಲ ತೀರಿಸಲು ಶಕ್ತರಾಗುವಿರಿ. ಪ್ರವಾಸದ ಅವಕಾಶ. ಕಠೋರ ಮಾತು ಕೌಟುಂಬಿಕ ನೆಮ್ಮದಿ ಕೆಡಿಸೀತು.
ಮಕರ
ವೃತ್ತಿಗೆ ಸಂಬಂಽಸಿದ ವಿಚಾರದಲ್ಲಿ ಎಚ್ಚರದಿಂದ ವ್ಯವಹರಿಸಿ. ಇತರರ ತಪ್ಪಿಗೆ ನೀವು ಹೊಣೆಗಾರರಾಗದಿರಿ. ವ್ಯವಹಾರದಲ್ಲಿ ಸಂಘರ್ಷ.
ಕುಂಭ
ಸಂಗಾತಿ ಜತೆಗೆ, ಸ್ನೇಹಿತರ ಜತೆಗೆ ಇಂದು ಉತ್ತಮ ಹೊಂದಾಣಿಕೆ. ಅಪಪ್ರಚಾರದ ಕುರಿತು ಎಚ್ಚರವಿರಲಿ. ಆರ್ಥಿಕವಾಗಿ ಉನ್ನತಿ.
ಮೀನ
ಯಾವುದೇ ವಿಚಾರದಲ್ಲಿ  ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಪರಿಸ್ಥಿತಿ ನಿಮಗೆ ಪ್ರತಿಕೂಲ ಆದೀತು. ಖರ್ಚು ಹೆಚ್ಚಳ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!