April 6, 2026
Monday, April 6, 2026
spot_img

ದಿನಭವಿಷ್ಯ: ಹೆಂಡತಿ ಜೊತೆ ಜಗಳ ಆಡ್ಬೇಡಿ, ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರ್ಲಿ

ಮೇಷ
ವೈಯಕ್ತಿಕವಾಗಿ ಅನಿರೀಕ್ಷಿತ ಬೆಳವಣಿಗೆ ಸಂಭವ. ಅದಕ್ಕೆ ಹೊಂದಿಕೊಳ್ಳಿ. ಮನೆಯಲ್ಲಿ ಸಂಘರ್ಷದ ಸನ್ನಿವೇಶ. ಸಹನೆಯಿಂದ ವರ್ತಿಸಿ.
ವೃಷಭ
ಭಾವನಾತ್ಮಕ ಪರಿಸ್ಥಿತಿ ಏರ್ಪಡಬಹುದು. ಸಂಗಾತಿ ಜತೆ ವೈಮನಸ್ಸು. ಹೊಂದಾಣಿಕೆ ಸಾಧಿಸಿ. ಧನಹಾನಿ ಉಂಟಾದೀತು. ಆರೋಗ್ಯದ ಬಗ್ಗೆ ಚಿಂತೆ.
ಮಿಥುನ
ದಿನವಿಡೀ ಏನಾದರೊಂದು ಒತ್ತಡ. ಬಂಧು ಜತೆ ವೈಮನಸ್ಸು ಉಂಟಾದೀತು. ಸಮಸ್ಯೆ ತರುವ ವಿಷಯ ಬೇಗ ಇತ್ಯರ್ಥಪಡಿಸಿ.
ಕಟಕ
ಪ್ರಗತಿಯ ದಿನ. ಬಯಸಿದ ಫಲ ಸಿಗಲಿದೆ. ಇತರರ ಗಮನ ಸೆಳೆಯುವ ಸಾಧನೆ ತೋರುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಸಿಂಹ
ಕಾರ್ಯದಲ್ಲಿ ಇಂದು ಹಿನ್ನಡೆ ಕಾಣುವಿರಿ. ಅಪೂರ್ಣ ಕೆಲಸ, ಅಸಹಕಾರ ಎದುರಿಸುವಿರಿ. ಮುಖ್ಯ ವಿಷಯದಲ್ಲಿ ಸಂವಹನದ ಕೊರತೆ.
ಕನ್ಯಾ
ಇಂದು ಕಠಿಣ ನಿರ್ಧಾರ ತಾಳಬೇಕಾದ ಪ್ರಸಂಗ ಒದಗೀತು. ಯಾರಿಗೋ ನೋವು ಆದೀತೆಂದು ಮೃದು ನಿಲುವು ತಳೆಯದಿರಿ.
ತುಲಾ
ಬಯಸಿದ ಕಾರ್ಯ ಪೂರ್ಣ. ಹಣ ಗಳಿಕೆಯ ಹಾದಿ ಸುಗಮ. ತುಸು ಆರೋಗ್ಯದ ಸಮಸ್ಯೆ ಕಾಡಬಹುದು. ಬಂಧು ಜತೆ ವಿರಸ ಕಟ್ಟಿಕೊಳ್ಳದಿರಿ.
ವೃಶ್ಚಿಕ
ಪ್ರತಿಯೊಂದು ವ್ಯವಹಾರದಲ್ಲೂ ಇಂದು ಸಹನೆ ಕಾಯ್ದುಕೊಳ್ಳಿ. ಮಹತ್ವದ ನಿರ್ಧಾರ ತಾಳಬೇಡಿ. ಒತ್ತಡದಿಂದ ತಲೆನೋವು ಬಾಧಿಸೀತು.
ಧನು
ಸಹನೆ ಕೆಡಿಸುವ ಪ್ರಸಂಗ ಎದುರಿಸುವಿರಿ. ಪೂರ್ತಿಯಾಗದ ಕೆಲಸ, ಇನ್ನಿತರ ಬೆಳವಣಿಗೆ ಇದಕ್ಕೆ ಕಾರಣ. ಮನಸ್ಸು ಇತರೆಡೆ ಹರಿಯದಿರಲಿ.
ಮಕರ
ವೃತ್ತಿಯಲ್ಲಿ ಪ್ರಗತಿ. ಉತ್ಸಾಹ ಹೆಚ್ಚಿಸುವ ಸನ್ನಿವೇಶ. ನಿಮ್ಮ ಚಿಂತನೆಗೆ ಇತರರ ಮನ್ನಣೆ. ಆರ್ಥಿಕ ಗುರಿ ಸಾಧಿಸುವಿರಿ. ದೈಹಿಕ ಶ್ರಮದಿಂದ ಬಳಲಿಕೆ.
ಕುಂಭ
ಗ್ರಹಗತಿ ಇಂದು ನಿಮಗೆ ಪೂರಕ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಪ್ರಗತಿ. ಪ್ರೀತಿಯಲ್ಲಿ ಸಮಾಧಾನಕರ ಬೆಳವಣಿಗೆ. ಧನಪ್ರಾಪ್ತಿ.
ಮೀನ
ನಿಮ್ಮ ಆಕಾಂಕ್ಷೆ ಈಡೇರುವ ದಿನ. ಆಪ್ತರ ಜತೆ ಆತ್ಮೀಯ ಸಂಬಂಧ ಕಾಯ್ದುಕೊಳ್ಳಿ. ಏಕಾಂಗಿಗಳಿಗೆ ಸಂಗಾತಿ ಸಿಗುವರು. ಧನಲಾಭ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !