October 11, 2026
Sunday, October 11, 2026
spot_img

ಪಿಎಸ್‌ಎಲ್‌ ಲೀಗ್ ನಲ್ಲಿ ಚೆಂಡು ವಿರೂಪ ಪ್ರಕರಣ: ಪಾಕಿಸ್ತಾನ ಆಟಗಾರ ಫಖರ್ ಜಮಾನ್ ಬ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಖರ್ ಜಮಾನ್ ಗೆ ನಿಷೇಧ ವಿಧಿಸಲಾಗಿದೆ.

ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಲಾಹೋರ್ ಖಲಂದರ್ಸ್‌ ಆಟಗಾರ ಫಖರ್‌ ಜಮಾನ್‌ಗೆ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.

ಪಂದ್ಯದ ಸಮಯ ಲಾಹೋರ್ ನಾಯಕ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್‌ ರೌಫ್ ಜೊತೆ ಮಾತನಾಡುತ್ತ ಜಮಾನ್ ಚೆಂಡನ್ನು ಕೈಯಿಂದ ಬಲವಾಗಿ ಒತ್ತಿದ್ದು, ಕೂಡಲೇ ಅಂಪೈರ್‌ಗಳು ಪರಿಶೀಲನೆ ನಡೆಸಿ, ಚೆಂಡು ವಿರೂಪಗೊಳಿಸಿದ್ದು ಪತ್ತೆ ಹಚ್ಚಿದ್ದಾರೆ.

ಪಂದ್ಯದ ಬಳಿಕ ಜಮಾನ್‌ರನ್ನು ವಿಚಾರಣೆ ನಡೆಸಿದಾಗ ಆರೋಪ ನಿರಾಕರಿಸಿದ್ದು, ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆಯಲ್ಲಿ ಅವರು ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಹೀಗಾಗಿ, 2 ಪಂದ್ಯಗಳ ನಿಷೇಧ ಹೇರಲಾಗಿದೆ.

Must Read