March 19, 2026
Thursday, March 19, 2026
spot_img

ದಿನಭವಿಷ್ಯ: ಕುಟುಂಬದವರ ಜೊತೆಗಿನ ವಿರಸ ಮಂಗಮಾಯ, ಕೋಪದ ಕೈಗೆ ಬುದ್ಧಿ ಕೊಡ್ಬೇಡಿ

ಮೇಷ
ಭರವಸೆಯ ದಿನ. ಶುಭ ಸಂಕೇತಗಳು ಕಾಣುತ್ತಿವೆ. ವೈಯಕ್ತಿಕ ಸಮಸ್ಯೆ ಪರಿಹಾರದ ದಾರಿ ತೋರಲಿದೆ. ಚಿಂತಿತ ಮನಸ್ಸಿಗೆ ಶಮನ.
ವೃಷಭ
ಮೌನವಾಗಿ ಕಠಿಣ ಕಾರ್ಯ ನಿರ್ವಹಿಸಿ. ಸಫಲತೆ ನಿಮ್ಮದಾಗಲಿದೆ. ಮೆಚ್ಚುಗೆಯೂ ಸಿಗಲಿದೆ. ಕುಟುಂಬಸ್ಥರ ಜತೆ ಸಂತೋಷದ ಕಾಲಕ್ಷೇಪ.
ಮಿಥುನ
ಹರ್ಷೋಲ್ಲಾಸ. ಕೌಟುಂಬಿಕ ಸಮಾಗಮ. ಹಣದ ಬಿಕ್ಕಟ್ಟು ಪರಿಹಾರ. ಖರ್ಚು ತುಸು ಹೆಚ್ಚಿದರೂ ಅದು ಇಂದು ಮಹಾ ಅನ್ನಿಸದು.
ಕಟಕ
ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ಪುಟ್ಟ ಪ್ರವಾಸಕ್ಕೆ ಸಿದ್ಧರಾಗಿ. ದೈನಂದಿನ ರಗಳೆ ಮರೆತು ವ್ಯವಹರಿಸಿ. ಬಂಧು ಜತೆಗಿನ ವಿರಸ ಮಾಯ.
ಸಿಂಹ
ಹಠಮಾರಿ ವರ್ತನೆ ಇತರರ ಟೀಕೆಗೆ ಗುರಿಯಾದೀತು. ವಿನಯ ಪ್ರದರ್ಶಿಸಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಹೊಂದಾಣಿಕೆ ಒಳಿತು.
ಕನ್ಯಾ
ನಿಮ್ಮ ವ್ಯವಹಾರದಲ್ಲಿ ಒಳ್ಳೆ ಅವಕಾಶ ಸಿಕ್ಕರೆ ತಿರಸ್ಕರಿಸಬೇಡಿ. ಹಿಂಜರಿಕೆ ತ್ಯಜಿಸಿ. ಆತ್ಮೀಯರ ಸಂಗದಲ್ಲಿ ಸಂತೋಷ ಕಾಣುವಿರಿ. ಧನಪ್ರಾಪ್ತಿ.
ತುಲಾ
ನಿಮ್ಮ ಕುರಿತಂತೆಯೆ ಸಿನಿಕತನ ಬೇಡ. ಎಲ್ಲವನ್ನು ಆಶಾವಾದದಿಂದ ಸ್ವೀಕರಿಸಿ. ಜಗದ ಜಂಜಡಕ್ಕೆ ಮನಸು ಹಾಳು ಮಾಡಿಕೊಳ್ಳದಿರಿ. ಒಳ್ಳೆ ಕಾಲ ಬರಲಿದೆ.
ವೃಶ್ಚಿಕ
ವ್ಯವಹಾರದಲ್ಲಿ ಮುತುವರ್ಜಿ ವಹಿಸಿ. ಬೇಕಾಬಿಟ್ಟಿ ಧೋರಣೆ ಒಳಿತಲ್ಲ. ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಬೇಕಾದ ಪ್ರಸಂಗ.
ಧನು
ಎಲ್ಲರ ನಡುವೆ ನಿಮ್ಮ ಪಾತ್ರವೇನು ಎಂದು ಪರಾಮರ್ಶಿಸಿ. ಅದರಂತೆ ವರ್ತಿಸಿ. ಎಲ್ಲರಿಂದ ಬೇರೆಯಾಗಿ ನಿಲ್ಲಬೇಡಿ. ಹೊಂದಾಣಿಕೆ ಮುಖ್ಯ.
ಮಕರ
ಶಾಂತ ಮನಸ್ಸು. ದುಗುಡ ನಿವಾರಣೆ. ಇತರರ ಮೇಲ್ಪಂಕ್ತಿ ಅನುಸರಿಸಿ. ಮುಖ್ಯ ಬೇಡಿಕೆಯೊಂದು ಇಂದು ಈಡೇರುವುದು.
ಕುಂಭ
ಒತ್ತಡಗಳಿಲ್ಲದ ವಿರಾಮ ದಿನ. ಬಂಧು ಬಳಗದ ಭೇಟಿ. ಮನೆಯಲ್ಲಿ ಹರ್ಷದ ವಾತಾವರಣ. ಖರೀದಿ ಹುಮ್ಮಸ್ಸು.
ಮೀನ
ಆರ್ಥಿಕ ಉನ್ನತಿ. ಆಕಾಂಕ್ಷೆ ಈಡೇರಿಕೆ. ಆಪ್ತರ ಜತೆ ಭಾವುಕ ಸನ್ನಿವೇಶ ಎದುರಿಸುವಿರಿ. ಮನೋದಾರ್ಢ್ಯ ಪ್ರದರ್ಶಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !