March 15, 2026
Sunday, March 15, 2026
spot_img

ದಿನಭವಿಷ್ಯ: ಅನ್ಯರ ಟೀಕೆಗೆ ಗಮನ ಕೊಡಬೇಡಿ, ನಿಮ್ಮ ಪೂರ್ಣ ಪ್ರಯತ್ನ ಹಾಕಿ

ಮೇಷ
ಬಂಧುಗಳ ಅನಿರೀಕ್ಷಿತ ಭೇಟಿ. ಬಾಕಿ ಇರುವ ಹೊಣೆಗಾರಿಕೆ ಪೂರೈಸಿ. ಕೌಟುಂಬಿಕ ಪರಿಸರ ಉಲ್ಲಾಸಕಾರಿ. ಶಾಪಿಂಗ್ ಸಂಭ್ರಮ.
ವೃಷಭ
ಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ.
ಮಿಥುನ
ಮುಕ್ತವಾಗಿ ಮಾತಾಡಿ, ಸಂಬಂಧ ಹಗುರಗೊಳಿಸಿ. ಇದು ನಿಮಗೆ ಇಂದಿನ ಸಲಹೆ. ಅನಾರೋಗ್ಯ ಇದ್ದರೆ ಕಡೆಗಣಿಸಬೇಡಿ.
ಕಟಕ
ನಿಮ್ಮ ಪೂರ್ಣ ಪ್ರಯತ್ನ ಹಾಕಿ, ಯಶಸ್ಸು ಸಿಗುವುದನ್ನು ಕಾಣಿರಿ. ಅನ್ಯರ ಟೀಕೆಗೆ ಗಮನ ಕೊಡಬೇಡಿ. ಬಾಂಧವ್ಯ ಕೆಡದಂತೆ ಎಚ್ಚರ ವಹಿಸಿ.
ಸಿಂಹ
ಸಂತೋಷವೆಂಬುದು ಮನಸ್ಸಿನ ಸ್ಥಿತಿ. ಅದನ್ನು ಬೇರೆಲ್ಲೋ ಹುಡುಕಬೇಡಿ. ದ್ವೇಷ, ವೈರ ಬಿಟ್ಟು ಹೊಂದಾಣಿಕೆಯ ದಾರಿ ಹಿಡಿಯಿರಿ. ಧನವ್ಯಯ.
ಕನ್ಯಾ
ನಿಮ್ಮ ಅದೃಷ್ಟದ ದಿನ. ಎಲ್ಲ ಕಾರ್ಯದಲ್ಲೂ ಯಶಸ್ಸು. ಇಷ್ಟಾರ್ಥ ಪೂರೈಕೆ. ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ. ಧನಪ್ರಾಪ್ತಿಯಾದೀತು.
ತುಲಾ
ವೈರುಧ್ಯಮಯ ಭಾವಗಳ ಸಂಘರ್ಷ. ಹೆಚ್ಚುವರಿ ಹೊಣೆ. ತಾಳ್ಮೆ ಅವಶ್ಯ. ಚಿಂತನೆಯಲ್ಲಿ ಸ್ಪಷ್ಟತೆಯಿರಲಿ. ಮಾತು ಹದ ಮೀರದಿರಲಿ.
ವೃಶ್ಚಿಕ
ದಂಪತಿಗೆ ಶುಭ ಬೆಳವಣಿಗೆ. ಹಣಕಾಸು ಸ್ಥಿರ. ಆರೋಗ್ಯ ಚಿಂತೆ ಪರಿಹಾರ. ಆಪ್ತರ ಜತೆ ಪ್ರವಾಸದ ಅವಕಾಶ. ಆದಾಯದಲ್ಲಿ ಉನ್ನತಿ.
ಧನು
ಯಾವುದೇ ಕೆಲಸ ಇಂದು ವೈಫಲ್ಯ ಕಾಣದು. ಆದರೆ ಕೌಟುಂಬಿಕ ಸೌಹಾರ್ದತೆಗೆ ಭಂಗ ಬಂದೀತು. ದುಡುಕಿನ ವರ್ತನೆ ನಿವಾರಿಸಿ.
ಮಕರ
ರಹಸ್ಯ ವೈರಿಗಳು ನಿಮ್ಮ ಬೆನ್ನ ಹಿಂದೆ ಇದ್ದಾರೆ. ಅವರ ಹಿಡಿತಕ್ಕೆ ಸಿಗದಂತೆ ಎಚ್ಚರ ವಹಿಸಿ. ಭಾವನೆಗಳ ಸಂಘರ್ಷ ಎದುರಿಸುವಿರಿ. ಆರ್ಥಿಕ ಬಿಕ್ಕಟ್ಟು.
ಕುಂಭ
ಕೆಲಸದ ಒತ್ತಡ ಇಂದು ಕಡಿಮೆ ಆಗಲಿದೆ. ಆ ಮೂಲಕ ಮನಸ್ಸಿಗೆ ನಿರಾಳತೆ. ಬಾಂಧವ್ಯದಲ್ಲಿ ಸಣ್ಣ ಕುಂದು ಕಂಡೀತು. ಅದನ್ನು ನಿರ್ಲಕ್ಷಿಸಿ.
ಮೀನ
ಕೆಲಸದಲ್ಲಿ ಪೂರ್ಣ ತಲ್ಲೀನ. ಭವಿಷ್ಯದ ಗುರಿಯತ್ತ ಹೆಚ್ಚು ಗಮನ ಕೊಡಿ. ಕುಟುಂಬದ ಸಂತೋಷಕ್ಕೆ ಹೆಚ್ಚು ಹಣ ವ್ಯಯಿಸುವಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !