September 30, 2026
Wednesday, September 30, 2026
spot_img

Coffee | ಬನಾನಾ ಕೋಲ್ಡ್ ಕಾಫಿ ಕುಡಿದಿದ್ದೀರಾ? ಹೊಸ ರುಚಿ ಒಂದ್ಸಲ ಟ್ರೈ ಮಾಡಿ

ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಶಕ್ತಿಯನ್ನೂ ತುಂಬುವ ಒಂದು ರುಚಿಯಾದ ಪಾನೀಯ ಈ ಬನಾನಾ ಕೋಲ್ಡ್ ಕಾಫಿ. ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಈ ಪಾನೀಯವನ್ನು ಬೆಳಗ್ಗೆ, ಸಂಜೆ ಸಮಯದಲ್ಲೂ ಸವಿಯಬಹುದು.

ಬೇಕಾಗುವ ಪದಾರ್ಥಗಳು

ಬಾಳೆಹಣ್ಣು – 1 ದೊಡ್ಡದು
ತಣ್ಣನೆಯ ಹಾಲು – 1 ಕಪ್
ಕಾಫಿ ಪುಡಿ – 1 ಟೀ ಸ್ಪೂನ್
ಸಕ್ಕರೆ ಅಥವಾ ಜೇನುತುಪ್ಪ – 1 ರಿಂದ 2 ಟೀ ಸ್ಪೂನ್
ಐಸ್ ಕ್ಯೂಬ್‌ಗಳು – 4 ರಿಂದ 5
ಸ್ವಲ್ಪ ಚಾಕೊಲೇಟ್ ಪುಡಿ (ಐಚ್ಛಿಕ)

ಮಾಡುವ ವಿಧಾನ

ಮೊದಲು ಮಿಕ್ಸಿ ಜಾರಿಗೆ ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಿ. ಅದಕ್ಕೆ ತಣ್ಣನೆಯ ಹಾಲು, ಕಾಫಿ ಪುಡಿ, ಸಕ್ಕರೆ ಅಥವಾ ಜೇನು ಮತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ.

ಇದನ್ನು ಚೆನ್ನಾಗಿ ಸ್ಮುತ್ ಆಗಿ ರುಬ್ಬಿ. ನಂತರ ಗ್ಲಾಸ್‌ಗೆ ಹಾಕಿ, ಮೇಲಿಂದ ಸ್ವಲ್ಪ ಕಾಫಿ ಪುಡಿ ಅಥವಾ ಚಾಕೊಲೇಟ್ ಪುಡಿ ಹಾಕಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ.

ತಂಪಾಗಿ ಸರ್ವ್ ಮಾಡಿದರೆ ರುಚಿಯಾದ ಬಾಳೆಹಣ್ಣು ಕೋಲ್ಡ್ ಕಾಫಿ ಸಿದ್ಧ.

Must Read