ದಿನಭವಿಷ್ಯ: ಪುಣ್ಯ ಸ್ಥಳಗಳಿಗೆ ಹೋಗುವ ಕನಸು ಭಗ್ನ, ಬಂಧುಮಿತ್ರರ ಜೊತೆ ಕಲಹ ಸಾಧ್ಯತೆ

ಮೇಷ
ಯಾವುದೋ ವಿಷಯದ  ಕುರಿತಂತೆ ಅನಿಶ್ಚಿತತೆ. ಮನಸ್ಸಿಗೆ ವ್ಯಾಕುಲ. ಚಿಂತೆ ಬೇಡ, ಅನುಕೂಲ ಪರಿಸ್ಥಿತಿ ಶೀಘ್ರವೇ ಬರಲಿದೆ.
ವೃಷಭ
ಚಿಪ್ಪಿನಿಂದ ಹೊರಗೆ ಬನ್ನಿ. ಹೊರಗಿನ ಸಂತೋಷ ಸವಿಯಿರಿ.    ಖಾಸಗಿ ಸಮಸ್ಯೆ ನಿರ್ಲಕ್ಷ್ಯ ಮಾಡದಿರಿ. ಕೂಡಲೇ ಬಗೆಹರಿಸುವುದು ಒಳಿತು.
ಮಿಥುನ
ಇತರರ ಜತೆ ಹೊಂದಾಣಿಕೆ ಇರಲಿ. ನೀವು ಹೇಳಿದ್ದೇ ಸರಿ ಎಂಬ ಜಿಗುಟು ನಿಲುವು ಬಿಡಿ. ಕುಟುಂಬದ ಹಿತಾಸಕ್ತಿಗೆ ಗಮನ ಕೊಡಿ.
ಕಟಕ
ವಾದವಿವಾದದಿಂದ ದೂರವಿರಿ. ವ್ಯವಹಾರದಲ್ಲಿ ಒತ್ತಡ ಬಂದರೂ ಸಂಜೆ ವೇಳೆಗೆ ಶಮನ. ಮಾನಸಿಕ ಕ್ಲೇಶ ನಿವಾರಣೆ. ಬಂಧುಗಳಿಂದ ಸಹಕಾರ.
ಸಿಂಹ
ಕುಟುಂಬ ಸದಸ್ಯರ ಜತೆ ತಪ್ಪಭಿಪ್ರಾಯ ಉಂಟಾಗದಂತೆ ನೋಡಿ ಕೊಳ್ಳಿ. ಹೊಂದಾಣಿಕೆಯ ವ್ಯವಹಾರ ನಡೆಸಿ. ಧನವ್ಯಯ ಹೆಚ್ಚು.
ಕನ್ಯಾ
ಬೇಡದ ಉಸಾಬರಿಗೆ ಹೋಗಬೇಡಿ. ಅದು ನಿಮಗೇ ಪ್ರತಿಕೂಲ ಆದೀತು. ನಿಮ್ಮ ಖಾಸಗಿ ವಿಷಯಕ್ಕಷ್ಟೆ ಗಮನ ಕೊಟ್ಟರೆ ಸಾಕು.
ತುಲಾ
ನಿರಾಳ ಮನಸ್ಥಿತಿ. ಸುಗಮ ಕಾರ್ಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಿರಿ. ಒಂದೊಂದಾಗಿ ತೊಡಕು ನಿವಾರಿಸಿಕೊಳ್ಳುವಿರಿ. ದೈವಾನುಗ್ರಹವೂ ಇದೆ.
ವೃಶ್ಚಿಕ
ಅನ್ಯರ ಕೆಟ್ಟ ನಡೆ ನಿಮ್ಮ ನೆಮ್ಮದಿ ಕೆಡಿಸದಂತೆ ದೃಢವಾಗಿರಿ. ಅತಿರೇಕದ ಪ್ರತಿಕ್ರಿಯೆ ತೋರದಿರಿ. ನಿಮ್ಮ ಸರಿಯಾದ ದಾರಿಯಲ್ಲಿ ನಡೆಯಿರಿ.
ಧನು
ಹೊಣೆಯರಿತು ವರ್ತಿಸಿ. ನಿಮ್ಮ ನಡೆನುಡಿ ತಪ್ಪರ್ಥ ಮೂಡಿಸದಂತೆ ಎಚ್ಚರ ವಹಿಸಿ. ಪ್ರಮುಖ  ಕೆಲಸಕ್ಕೆ ವಿಘ್ನ ಬಂದೀತು. ಅಽಕ ಖರ್ಚು.
ಮಕರ
ಆರ್ಥಿಕ ಸ್ಥಿರತೆ ಕಾಪಾಡಲು ಗಮನ ಕೊಡಿ. ಅರಿಯದ ವಿಷಯದಲ್ಲಿ ಹೂಡಿಕೆ ಬೇಡ. ಅನ್ಯರಿಂದ ಒತ್ತಡ ಎದುರಿಸುವಿರಿ.
ಕುಂಭ
ಆದಾಯ ಹೆಚ್ಚು, ಇದು ಕುಟುಂಬದಲ್ಲಿ ಬಿಕ್ಕಟ್ಟು ಸೃಷ್ಟಿಸೀತು. ಆಪ್ತ ಬಂಧುವಿನ ಭೇಟಿಯಿಂದ    ಸಂತೋಷ.
ಮೀನ
ಕಠಿಣ ಕಾರ್ಯದಲ್ಲಿ ಸಫಲತೆ. ಮಾನಸಿಕ ಒತ್ತಡ ನಿವಾರಣೆ. ಧನಪ್ರಾಪ್ತಿ.ಕೌಟುಂಬಿಕ ಸಮಾಗಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!