ಮೇಷ
ವೃತ್ತಿಯಲ್ಲೂ ಖಾಸಗಿಯಾಗಿಯೂ ನಿಮ್ಮ ಹಿತಾಸಕ್ತಿಗೆ ಧಕ್ಕೆ ಒದಗಲಿದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ದುಡುಕಿನ ವರ್ತನೆ ತೋರದಿರಿ.
ವೃಷಭ
ವೈಯಕ್ತಿಕವಾಗಿ ಅನಿರೀಕ್ಷಿತ ಸನ್ನಿವೇಶ. ವೃತ್ತಿ ಸಂಬಂಧಿತ ಪ್ರಯಾಣ ಸುಖಕರ, ಉದ್ದೇಶ ಸಾಧನೆ. ಆಪ್ತರೊಬ್ಬರು ಮುನಿಸು ತೋರಿಯಾರು.
ಮಿಥುನ
ಕೆಲ ವಿಷಯದಲ್ಲಿ ಅತಿರೇಕದ ಉತ್ಸುಕತೆ ತೋರದಿರಿ. ಬಳಿಕ ನಿರಾಶೆ ಆದೀತು. ಆಹಾರದಲ್ಲಿ ಹಿತಮಿತ ಸಾಧಿಸಿ. ಧನವ್ಯಯ ನಿಯಂತ್ರಣ.
ಕಟಕ
ಅಹಿತಕರ ಭಾವ. ಮಾಡುವ ಕೆಲಸದಲ್ಲಿ ಅನಿಶ್ಚಿತತೆ. ಅಧಿಕ ಕೆಲಸದ ಒತ್ತಡ. ಆತುರ ತೋರದೆ ಸಮಾಧಾನದಿಂದ ವ್ಯವಹರಿಸಿ.
ಸಿಂಹ
ನಿಮ್ಮ ಕಾರ್ಯಶೈಲಿಗೆ ಇನ್ನಷ್ಟು ಹೊಸತನ ಅಳವಡಿಸಿ. ಕೆಲಸದಲ್ಲಿ ಸದಾ ಧಾವಂತ ತೋರುವ ನೀವು ಸ್ವಲ್ಪ ನಿಧಾನಗತಿ ತೋರುವುದು ಒಳಿತು.
ಕನ್ಯಾ
ನಿರ್ವಹಣೆಯಿಂದ ಇತರರನ್ನು ಮೆಚ್ಚಿಸುವ ಪ್ರಯತ್ನ ಫಲ ನೀಡಲಿದೆ. ಆದರೆ ವಿನಯ ಬಿಡದಿರಿ. ಅಹಂಭಾವದ ವರ್ತನೆ ಟೀಕೆಗೆ ಗುರಿಯಾದೀತು.
ತುಲಾ
ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ. ಬುದ್ಧಿವಂತಿಕೆಯಿಂದ ಹಣ ವ್ಯಯಿಸಿರಿ. ಆತ್ಮೀಯರ ಸಂಗದಲ್ಲಿ ಹರುಷ. ಖರ್ಚು ನಿಯಂತ್ರಣ.
ವೃಶ್ಚಿಕ
ಹೆಚ್ಚು ಹೊಣೆ. ನೆರವು ಯಾಚಿಸಲು ಹಿಂಜರಿಕೆ ಬೇಡ. ಅವಿವಾಹಿತರಿಗೆ ಸಂಗಾತಿ ಹುಡುಕಾಟ ಕಷ್ಟವೆನಿಸಲಿದೆ. ದೇವರ ಪ್ರಾರ್ಥನೆ ಮಾಡಿರಿ.
ಧನು
ಅಧಿಕ ಕೆಲಸದ ನಡುವೆಯೂ ಸಂತೋಷ ಆಚರಣೆಯ ಅವಕಾಶ. ಪ್ರೀತಿಯಲ್ಲಿ ಯಶಸ್ಸು. ಕೌಟುಂಬಿಕ ಸಾಮರಸ್ಯ. ಆಪ್ತರಿಂದ ಧನಪ್ರಾಪ್ತಿ.
ಮಕರ
ಆಪ್ತರ ಸಾಮಿಪ್ಯದಲ್ಲಿ ಖುಷಿ ಕಾಣುವಿರಿ. ಆದರೆ ಅವರ ಮೇಲೆ ಅಧಿಪತ್ಯ ಸಾಧಿಸುವ ಪ್ರಯತ್ನ ಬೇಡ. ಸೌಹಾರ್ದದಿಂದ ಕಾರ್ಯ ಸಾಧಿಸಿರಿ.
ಕುಂಭ
ಆತ್ಮವಿಶ್ವಾಸ ಮತ್ತು ಸಮರ್ಥ ನಿರ್ವಹಣೆ ನಿಮ್ಮ ಕುರುಹಾಗಲಿದೆ. ಅನ್ಯರ ದೌರ್ಬಲ್ಯವನ್ನು ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುವಿರಿ.
ಮೀನ
ಏರುಪೇರು ಇಲ್ಲದ ಸಾಧಾರಣ ದಿನ. ಹಾಗಾಗಿ ದೊಡ್ಡ ಕಾರ್ಯಕ್ಕೆ ಕೈ ಹಾಕದಿರಿ. ವಿವಾಹಿತರಿಗೆ ಶುಭ ಬೆಳವಣಿಗೆ. ಆರ್ಥಿಕ ಪ್ರಗತಿಗೆ ಅಡ್ಡಿ ತೋರಲಿದೆ.



