October 16, 2026
Friday, October 16, 2026
spot_img

ಬೇಯುತ್ತಿದ್ದ ರಾಜಧಾನಿ ಬೆಂಗಳೂರು ಈಗ ಕೂಲ್‌ ಕೂಲ್‌, ಬಿರುಗಾಳಿ ಸಹಿತ ಜೋರು ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ವರುಣದೇವ ಕೃಪೆ ತೋರಿದ್ದು, ಇಂದು ಸಂಜೆ ಧೋ ಎನ್ನುವ ಮಳೆ ಸುರಿದಿದೆ.

ಆಫೀಸ್‌ನಿಂದ ಮನೆಗೆ ಬರುವ ಜನರಿಗೆ ಮಾತ್ರ ಈ ಮಳೆಯಿಂದ ಸಮಸ್ಯೆ ಉಂಟಾಗಿದೆ. ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವು ಏರಿಯಾಗಳಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ.

ಪೂರ್ವ ಮುಂಗಾರಿನ ಕಾರಣದಿಂದಾಗಿ ಮಳೆ ಸುರಿಯುತ್ತಿದ್ದು, ಬೆಂಗಳೂರಿನ ವಿಜಯನಗರ, ಹೊಸಹಳ್ಳಿ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಇನ್ನೂ ಒಂದು ವಾರ ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Must Read