ಮೇಷ
ಆರ್ಥಿಕ ಸ್ಥಿತಿ ಸ್ಥಿರತೆ ಕಾಣಲಿದೆ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ನಿಮ್ಮ ಕರ್ತವ್ಯ ನಿಭಾಯಿಸುವಲ್ಲಿ ಸಫಲತೆ ಕಾಣುವಿರಿ.
ವೃಷಭ
ಖಾಸಗಿ ಬದುಕಲ್ಲಿ ಪೂರಕ ಬೆಳವಣಿಗೆ. ಪ್ರೀತಿಯ ವಿಚಾರದಲ್ಲಿ ಯಶ. ಸ್ವಂತ ಉದ್ಯೋಗ ಹೊಂದಿದವರಿಗೆ ಲಾಭ, ವಿಘ್ನ ನಿವಾರಣೆ.
ಮಿಥುನ
ಮಾನಸಿಕ ಒತ್ತಡ, ಇನ್ನಿತರ ವಿಷಯದ ಬಗ್ಗೆ ಗಮನ ಹರಿಯದು. ಶಾಂತಚಿತ್ತರಾಗಿ ಯೋಚಿಸಿ ಕಾರ್ಯ ಎಸಗಬೇಕಾದ ಅಗತ್ಯವಿದೆ.
ಕಟಕ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಂಬಂಧ ಸುಧಾರಣೆ. ಮನಸ್ತಾಪ ಅಂತ್ಯ. ಹಣಕಾಸು ಪರಿಸ್ಥಿತಿ ಸ್ಥಿರ. ಆರೋಗ್ಯ ಸಮಸ್ಯೆ ನಿವಾರಣೆ.
ಸಿಂಹ
ಸಂಬಂಧದಲ್ಲಿ ಅಪಸ್ವರ. ಆಪ್ತರ ಜತೆಗಿನ ವರ್ತನೆಯಲ್ಲಿ ಅದು ಪ್ರತಿಫಲಿಸಲಿದೆ. ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನ ಅವಶ್ಯ.
ಕನ್ಯಾ
ಸಂಗಾತಿ ಜತೆಗೆ ಅಹಂ ಸಂಘರ್ಷ. ಇಬ್ಬರಿಗೂ ಬಿಗುಮಾನ ಬಿಡದು. ಒಬ್ಬರಾದರೂ ತಗ್ಗಿದರೆ ಸಂಬಂಧ ಸುಲಲಿತ. ಯೋಚಿಸಿ.
ತುಲಾ
ಹಣದ ವಿಚಾರದಲ್ಲಿ ತೃಪ್ತಿಕರ. ಕುಟುಂಬ ಸದಸ್ಯರ ಜತೆ ಅನ್ಯೋನ್ಯತೆ. ಹೊಣೆ ಹೆಚ್ಚಿದರೂ ಅದು ನಿಮಗೆ ಬಾಧಿಸದು. ಕೆಲಸದಲ್ಲಿ ಸಂತೃಪ್ತರು ನೀವು
ವೃಶ್ಚಿಕ
ಕುಟುಂಬಸ್ಥರ ಜತೆ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಮುಚ್ಚುಮರೆ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸುವಿರಿ.
ಧನು
ಪರಿಹಾರವಾಗದೆ ಉಳಿದಿದ್ದ ಬಿಕ್ಕಟ್ಟು ಇಂದು ಅಂತ್ಯ ಕಂಡೀತು. ಆದರೆ ನೀವೂ ಸ್ವಲ್ಪ ಮಟ್ಟಿನ ಹಾನಿ ಅನುಭವಿಸುವಿರಿ. ಹೊಂದಾಣಿಕೆ ಒಳಿತು.
ಮಕರ
ಹಣಕಾಸಿಗೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳಲು ಸೂಕ್ತ ಕಾಲ. ಹೊಸ ಯೋಜನೆ ಫಲ ನೀಡಲಿದೆ. ಬಂಧುಗಳ ಸಹಕಾರ.
ಕುಂಭ
ಉತ್ಸಾಹದ ದಿನ. ವಾಗ್ವಾದದಲ್ಲಿ ತೊಡಗಿ ದಿನ ಕೆಡಿಸಿಕೊಳ್ಳದಿರಿ. ಮೋಜು ಮಾಡಲು ಹೋಗಿ ಹಣ ಕಳಕೊಂಡೀರಿ, ಎಚ್ಚರಿಕೆ. ಖರ್ಚಿಗೆ ಕಡಿವಾಣವಿರಲಿ.
ಮೀನ
ಆರ್ಥಿಕ ಪರಿಸ್ಥಿತಿ ಉನ್ನತಿ ಕಾಣುವುದು. ಉದ್ಯೋಗದಲ್ಲಿ ಹೊಸ ಅವಕಾಶ ತೆರೆಯಲಿದೆ. ಇತರರ ಸಂತೋಷದಲ್ಲಿ ತೃಪ್ತಿ ಕಾಣುವಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ