March 1, 2026
Sunday, March 1, 2026
spot_img

ದಿನಭವಿಷ್ಯ: ಯೋಚಿಸಿದ ಕಾರ್ಯದಲ್ಲಿ ಸಫಲತೆ, ಮುಖದಲ್ಲಿ ಸದಾ ನಗುವಿರಲಿ

ಮೇಷ
ಇತರರ ಜತೆ ವ್ಯವಹರಿಸುವಲ್ಲಿ ಸಫಲತೆ ಕಾಣುವಿರಿ. ಕೌಟುಂಬಿಕ ಸಂಬಂಧ ಕೆಡದಂತೆ ನೋಡಿಕೊಳ್ಳಿ. ಲಘು ಅನಾರೋಗ್ಯವಾದೀತು.
ವೃಷಭ
ಸಂಬಂಧದಲ್ಲಿ ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಕ್ಷುಲ್ಲಕ ವಿಷಯವೆಂದು ಕಡೆಗಣನೆ ಬೇಡ. ಸಂಘರ್ಷಕ್ಕೆ ಇಳಿಯಬೇಡಿ.
ಮಿಥುನ
ವೈಯಕ್ತಿಕ ಗುರಿ ಸಾಧಿಸಲು ಹೆಚ್ಚು ಶ್ರಮ ಹಾಕುವಿರಿ. ಸ್ವಲ್ಪ ಮಟ್ಟಿನ ಹತಾಶೆ, ಅಸಹನೆ ಉಂಟಾದೀತು. ಹಣದ ಕೊರತೆ ಕಾಡಬಹುದು.
ಕಟಕ
ಸಾಧನೆಯ ದಿನ. ಕೆಲಸದಲ್ಲಿ ಪರಿಪೂರ್ಣತೆ. ಒತ್ತಡ ನಿವಾರಣೆ. ಯೋಚಿಸಿದ ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಇಷ್ಟಾರ್ಥ ಪೂರೈಸಲಿದೆ.
ಸಿಂಹ
ಸಂತೋಷದ ದಿನ. ಖಾಸಗಿ ಬದುಕಿನಲ್ಲಿ ಪ್ರೀತಿ, ಸಾಮರಸ್ಯ. ವೃತ್ತಿ ವ್ಯವಹಾರ ಸುಲಲಿತ. ಕೇಳಿದವರಿಗೆ ಸಾಲ ಕೊಡಲು ಹೋಗಬೇಡಿ.
ಕನ್ಯಾ
ಕ್ಲಿಷ್ಟಕರ ಪರಿಸ್ಥಿತಿ ಉದ್ಭವಿಸಿದರೂ ಬಳಿಕ ಶಮನವಾಗಲಿದೆ. ಕೆಲಸದಲ್ಲಿ ನಿಮ್ಮ ಕೌಶಲ್ಯ ಅನಾವರಣ. ಶ್ಲಾಘನೆ ಪಡೆಯುವಿರಿ. ಪ್ರೀತಿಯಲ್ಲಿ ಯಶಸ್ಸು.
ತುಲಾ
ದಿನವಿಡೀ ಕೆಲಸದ ಒತ್ತಡ. ಸಣ್ಣ ವಿಷಯಕ್ಕೂ ಹೆಚ್ಚು ಗಮನ ಕೊಡಿ. ಸಣ್ಣ ಲೋಪ ಗಂಭೀರ ಪರಿಣಾಮ ಬೀರೀತು. ಕೌಟುಂಬಿಕ ಒತ್ತಡ.
ವೃಶ್ಚಿಕ
ಖಾಸಗಿ ಬದುಕಲ್ಲಿ ಒತ್ತಡ ನಿವಾರಣೆ. ಯಾವುದೇ ಸಮಸ್ಯೆ ತಾತ್ಕಾಲಿಕ ಎಂಬುದು ಅರಿವಿರಲಿ. ಮುಖದಲ್ಲಿ ಸದಾ ನಗುವಿರಲಿ.
ಧನು
ಕೆಲಸ ಸುಗಮವಾಗಿ ಸಾಗದು. ಅಡ್ಡಿಗಳು, ಮಾನಸಿಕ ಒತ್ತಡ, ಅಸಹನೆ ಕಾಡುವುದು. ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರ ತಾಳದಿರಿ.
ಮಕರ
ಕೆಲಸದ ಪ್ರಗತಿ ಬಗ್ಗೆ ಕೆಲವು ಚಿಂತೆ ಕಾಡುವುದು. ಬೆಂಬಲದ ಕೊರತೆ. ಅನ್ಯರ ಮೇಲಿನ ದ್ವೇಷ ಬಿಡಿ, ಸಹಕಾರಕ್ಕೆ ಮನ ಮಾಡಿ. ಕೌಟುಂಬಿಕ ಉದ್ವಿಗ್ನತೆ.
ಕುಂಭ
ನಿರಾಳ ಮನಸ್ಸು. ಹೊಸ ಯೋಜನೆಗೆ ಕೈಹಚ್ಚಲು ಕಾಲ ಸೂಕ್ತ. ಕೆಲಸದಲ್ಲಿ ಬಡ್ತಿ ಸಂಭವ. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ.
ಮೀನ
ಗುಣಾತ್ಮಕ ಬೆಳವಣಿಗೆಯ ದಿನ. ಖಾಸಗಿ ಬದುಕಲ್ಲಿ ನೀವು ಇಚ್ಛಿಸಿದ ಕಾರ್ಯ ಸಿದ್ಧಿ. ವೃತ್ತಿಯಲ್ಲೂ ಸಫಲತೆ. ಇಷ್ಟ ವಸ್ತು ಖರೀದಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !