ಮೇಷ
ಗ್ರಹಗತಿ ಪೂರಕ. ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯ ತೋರುವಿರಿ. ವಿವಾಹಕಾಂಕ್ಷಿಗಳಿಗೆ ಸಂಗಾತಿ ಲಭ್ಯ. ಹಣದ ಸಮಸ್ಯೆ ಪರಿಹಾರ.
ವೃಷಭ
ನಿಮ್ಮ ಕೆಲಸ ಸಾಧಿಸಲು ಹೆಚ್ಚಿನ ಪ್ರಯತ್ನ ಬೇಕು. ಆರ್ಥಿಕ ಉನ್ನತಿಯ ದಾರಿ ತೋರಲಿದೆ. ಪ್ರೀತಿಯಲ್ಲಿ ಹಿನ್ನಡೆ ಉಂಟಾದೀತು.
ಮಿಥುನ
ಇಂದು ದುಡುಕು ಬಿಟ್ಟು ತಾಳ್ಮೆಯಿಂದ ವ್ಯವಹರಿಸಿ. ಕಾರ್ಯ ಸುಲಲಿತ. ಮಹತ್ವದ ನಿರ್ಣಯ ಇಂದು ತಾಳಬೇಡಿ. ಸ್ವಲ್ಪ ಕಾಯಿರಿ.
ಕಟಕ
ವೃತ್ತಿಯಲ್ಲಿ ಯಶ. ಎಲ್ಲರು ಮೆಚ್ಚುವ ನಿರ್ವಹಣೆ. ಕುಟುಂಬದ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ತುಸು ಬೇಸರದ ಭಾವ ಆವರಿಸಲಿದೆ.
ಸಿಂಹ
ಈ ದಿನ ಉತ್ತಮ ಫಲ ತರಲಿದೆ. ಮಹತ್ವದ ನಿರ್ಧಾರ ಫಲದಾಯಕ. ಏಕಾಂಗಿಗಳಿಗೆ ಪ್ರೀತಿಯಲ್ಲಿ ಯಶಸ್ಸು. ಉದ್ಯೋಗ ಅವಕಾಶ ಉಜ್ವಲ.
ಕನ್ಯಾ
ವಿಶ್ವಾಸ ವೃದ್ಧಿಯ ದಿನ. ಕಠಿಣ ಕಾರ್ಯವೂ ಇಂದು ಸುಗಮವಾಗಿ ಸಾಗಲಿದೆ. ಹಣ ಗಳಿಕೆ. ಸಾಂಸಾರಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.
ತುಲಾ
ಕೈಗೆ ಎಟುಕದ ಆಕಾಂಕ್ಷೆ ಬಿಡಿ. ನಿಮ್ಮ ಮಿತಿಯಲ್ಲೆ ವ್ಯವಹರಿಸಿ. ಎಲ್ಲರ ಜತೆ ಆತ್ಮೀಯವಾಗಿ ವರ್ತಿಸಿ. ಕೋಪತಾಪ ವಿರಸ ಸೃಷ್ಟಿಸಬಹುದು.
ವೃಶ್ಚಿಕ
ಇಂದು ಕಠಿಣ ಪರಿಸ್ಥಿತಿ ಎದುರಿಸಿದರೂ ಆಪ್ತರಿಂದ ಬೆಂಬಲ. ಹಣ ಗಳಿಕೆ ಹೆಚ್ಚಳ. ಹಿರಿಯರಿಗೆ ಬೆನ್ನು ನೋವಿನಿಂದ ನಿರಾಳತೆ.
ಧನು
ಅದೃಷ್ಟದ ದಿನ. ನೀವು ಬಯಸಿದ ಪ್ರಗತಿ ಸಾಧಿತ. ಮನೆಯಲ್ಲಿ ಹೆಚ್ಚು ಹೊಣೆಗಾರಿಕೆ. ದೈಹಿಕ ಬಸವಳಿಕೆ ಕಾಡಬಹುದು. ವಿಶ್ರಾಂತಿಗೆ ಗಮನಕೊಡಿ.
ಮಕರ
ಕೌಟುಂಬಿಕ ಸಮ್ಮಿಲನ. ವ್ಯವಹಾರದಲ್ಲಿ ಯಶಸ್ಸು. ಇತರರ ಚುಚ್ಚುಮಾತಿಗೆ ತಲೆ ಕೆಡಿಸಿಕೊಳ್ಳದಿರಿ. ಆರ್ಥಿಕ ಒತ್ತಡ ಅಧಿಕ.
ಕುಂಭ
ವೃತ್ತಿ ಸಂಬಂಧ ದೂರ ಪ್ರಯಾಣ ಸಾಧ್ಯತೆ. ಕಾರ್ಯ ಸಫಲ. ಸಾಂಸಾರಿಕ ಒತ್ತಡ ಹೆಚ್ಚು. ಧಾರ್ಮಿಕ ಚಟುವಟಿಕೆಯಿಂದ ಮನಸ್ಸಿಗೆ ನಿರಾಳತೆ.
ಮೀನ
ಬಿಕ್ಕಟ್ಟು ಉಂಟಾದರೆ ಕ್ಷಿಪ್ರವಾಗಿ ಕಾರ್ಯಾಚರಿಸಿ. ಗುರಿ ಸಾಧನೆ ನಿಮಗೆ ಕಷ್ಟವಲ್ಲ. ಆದರೆ ಹಲವರ ವಿರೋಧ ಕಟ್ಟಿಕೊಳ್ಳುವಿರಿ. ತುಸು ಆರ್ಥಿಕ ನಷ್ಟ.



