March 2, 2026
Monday, March 2, 2026
spot_img

ದಿನಭವಿಷ್ಯ: ಆರೋಗ್ಯದ ಬಗ್ಗೆ ಗಮನ ಕೊಡಿ, ಕಾಡುವ ಚಿಂತೆಯೊಂದಕ್ಕೆ ಪರಿಹಾರ ಸಿಗಲಿದೆ

ಮೇಷ
ನಿಮ್ಮ ಪಾಲಿಗೆ ಶುಭ ಸಂಕೇತ ತೋರಿ ಬರಲಿದೆ. ಸದ್ಯದಲ್ಲೆ ಚಿಂತೆಯೊಂದು ಪರಿಹಾರ ಕಾಣಲಿದೆ. ವೃತ್ತಿಯಲ್ಲಿ ಉನ್ನತಿಗೆ ಪೂರಕ ಸನ್ನಿವೇಶ ಸೃಷ್ಟಿ.
ವೃಷಭ
ಸಂವಹನ ಕಲೆಯನ್ನು ಸರಿಯಾಗಿ ಬಳಸಿ. ಆ ಮೂಲಕ ಭಿನ್ನಮತ ನಿವಾರಿಸಿ. ಪರಿಸ್ಥಿತಿ ನಿಭಾಯಿಸಲು ಶಕ್ತರಾಗುವಿರಿ.
ಮಿಥುನ
ಸಣ್ಣದೆಂದು ಭಾವಿಸಿದ ಸಮಸ್ಯೆ ದೊಡ್ಡದಾಗಿ ಕಾಡೀತು. ಅದಕ್ಕೆ ಅವಕಾಶ ಕೊಡದಿರಿ. ಆತ್ಮೀಯರ ವಿರೋಧ ಕಟ್ಟಿಕೊಳ್ಳದಿರಿ.
ಕಟಕ
ವೃತ್ತಿಯಲ್ಲಿ ಕೆಲವು ಅನುಚಿತ ಬೆಳವಣಿಗೆ ಸಂಭವ. ಆರೋಗ್ಯದ ಬಗ್ಗೆ ಗಮನ ಕೊಡಿ. ಅತಿಯಾಗಿ ಎಣ್ಣೆ ತಿನಿಸು ಸೇವಿಸದಿರಿ.
ಸಿಂಹ
ನಿಮ್ಮ ಬದುಕಿನ ಮೇಲೆ ತಕ್ಷಣ ಪರಿಣಾಮ ಬೀರಬಲ್ಲ ವಿಷಯದತ್ತ ಹೆಚ್ಚು ಗಮನ ಹರಿಸಿ. ಅನ್ಯರ ಟೀಕೆ ಕೇಳುವಿರಿ. ಕೌಟುಂಬಿಕ ಸಾಮರಸ್ಯ.
ಕನ್ಯಾ
ವೃತ್ತಿಯಲ್ಲಿ ಎಲ್ಲ ಸುಸೂತ್ರ. ಮೇಲಿನವರ ಪ್ರಶಂಸೆ. ಕೆಲ ವಿಷಯದಲ್ಲಿ ಅತೃಪ್ತಿ ಇದ್ದರೂ ಇಂದು ಖುಷಿಯಿಂದ ಕಳೆಯಿರಿ. ದೂರದ ಬಂಧು ಭೇಟಿ.
ತುಲಾ
ಬಯಸಿದ ಕಾರ್ಯ ಕೈಗೂಡದೆ ಹೋದೀತು. ನಿರಾಶೆ ಪಡದಿರಿ. ಆಶಾವಾದ ಇಟ್ಟುಕೊಳ್ಳಿ. ಸಂಬಂಧದಲ್ಲಿ ಋಣಾತ್ಮಕ ಚಿಂತನೆ ನುಸುಳಬಹುದು.
ವೃಶ್ಚಿಕ
ವಿವಾದದಿಂದ ದೂರವಿರಿ. ನೀವು ಬಯಸದಿದ್ದರೂ ಕೆಲವರು ತಮ್ಮ ಬಿಕ್ಕಟ್ಟಿನಲ್ಲಿ ನಿಮ್ಮನ್ನು ಎಳೆಯಬಹುದು. ಮಾನಸಿಕ ಒತ್ತಡ ಅಧಿಕ.
ಧನು
ನೀವು ಉದ್ದೇಶಿಸಿದ ಕಾರ್ಯ ಇಂದು ಸಾಧ್ಯ ಆಗದಿರಬಹುದು. ಹತಾಶೆ ಬೇಡ, ನಾಳೆಯೆಂಬುದು ಇದ್ದೇ ಇದೆ. ಮರಳಿ ಪ್ರಯತ್ನವ ಮಾಡಿರಿ.
ಮಕರ
ಯಾವುದೋ ವಿಚಾರ ಬೇಸರ ಸೃಷ್ಟಿಸಲಿದೆ. ಅದನ್ನು ನಿವಾರಿಸಲು ಯತ್ನಿಸಿ. ನಿಮ್ಮನ್ನು ಪೂರ್ಣವಾಗಿ ಅರಿತವರ ನೆರವು ಪಡೆಯಿರಿ. ಧನವ್ಯಯ.
ಕುಂಭ
ಯಾವುದೇ ಕೊರತೆ ಇಂದು ಬಾಧಿಸದು. ನೀವು ಇಚ್ಛಿಸಿದಂತೆ ಆಗಲಿದೆ. ಆದರೂ ನಿಮ್ಮಲ್ಲಿ ಅಸಂತೃಪ್ತಿ. ಹೇಳಲಾಗದ ಬೇಸರ ಕಾಡುವುದು.
ಮೀನ
ಅಸೂಯೆ ನೆಮ್ಮದಿ ಕೆಡಿಸಬಲ್ಲುದು. ಅನ್ಯರ ಏಳಿಗೆಗೆ ಮತ್ಸರ ಪಡಬೇಡಿ. ಮನಸ್ಸು ಕೆಡಿಸುವ ಯೋಚನೆ ಮಾಡಲು ಹೋಗಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !