ಮೇಷ
ನಿಮ್ಮ ಸುತ್ತಲಿನ ಕೆಲವರ ವರ್ತನೆಯಲ್ಲಿ ಬದಲಾವಣೆ ಕಂಡೀತು. ಅದು ನಿಮಗೆ ಪೂರಕವೋ ವಿರೋಽಯೋ ಎಂದು ವಿಮರ್ಶಿಸಿ ನೋಡಿ.
ವೃಷಭ
ಅಸ್ಥಿರತೆ ನಿವಾರಣೆ. ಸ್ಥಿರ ಬದುಕಿನ ಸಂಕೇತ ತೋರುತ್ತಿವೆ. ಹೆಚ್ಚು ವಾಗ್ವಾದಕ್ಕೆ ಇಳಿಯದಿರಿ. ಅದು ಸಮಸ್ಯೆಯನ್ನು ಹೆಚ್ಚಿಸಬಹುದಷ್ಟೆ.
ಮಿಥುನ
ವೃತ್ತಿಯಲ್ಲಿ ಮತ್ತು ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ನಡೆ ಪ್ರಯೋಗಿಸಿದಲ್ಲಿ ನಿಮಗೆ ಮೇಲುಗೈ ನಿಶ್ಚಿತ.
ಕಟಕ
ನಿಮ್ಮ ಪ್ರಯತ್ನ ಸರಿಯಾದ ದಿಕ್ಕಿನಲ್ಲಿ ಸಾಗುವುದು. ಅದರ -ಲ ಸಿಕ್ಕೇ ಸಿಗಲಿದೆ. ನಿಮ್ಮ ವಿರೋಽಗಳನ್ನು ಸಂಧಾನದಿಂದ ಮಣಿಸಿರಿ.
ಸಿಂಹ
ಆತ್ಮೀಯರೇ ಇಂದು ನಿಮ್ಮನ್ನು ಟೀಕಿಸಬಹುದು. ಅವರನ್ನು ದೂರದಿರಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ತನ್ನಿ. ಸ್ನೇಹಿತರ ಜತೆ ಕಾಲಕ್ಷೇಪ.
ಕನ್ಯಾ
ಕೆಲವರು ನಿಮ್ಮಿಂದ ಅತಿಯಾದುದನ್ನು ಅಪೇಕ್ಷಿಸುವರು. ಅವರ ಬೇಡಿಕೆ ಈಡೇರಿಸಲು ಕಷ್ಟಪಡುವಿರಿ. ಖರ್ಚಿನ ಮೇಲೆ ನಿಯಂತ್ರಣವಿಡಿ.
ತುಲಾ
ಹೊಸ ವ್ಯವಹಾರ ಆರಂಭಕ್ಕೆ ಸುದಿನ. ಸಂಘಟಿತ ಪ್ರಯತ್ನದಿಂದ ಯಶಸ್ಸು. ಶೇರು ಹೂಡಿಕೆಯಿಂದ ಲಾಭ. ಕೌಟುಂಬಿಕ ಸಮಾಧಾನ.
ವೃಶ್ಚಿಕ
ನಿಮಗೆ ಒದಗಿರುವ ಅಡ್ಡಿಗಳನ್ನು ಸಮರ್ಥವಾಗಿ ನಿವಾರಿಸುವಿರಿ. ನೀವು ಅಪೇಕ್ಷಿಸಿದ ವಿಷಯದಲ್ಲಿ ಉನ್ನತಿ.
ಧನು
ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಹೆಚ್ಚುವರಿ ಹೊಣೆ ಬಿದ್ದರೆ ಅದನ್ನು ತಪ್ಪಿಸಿಕೊಳ್ಳಬೇಡಿ. ಅದು ಉನ್ನತಿಗೆ ದಾರಿಯಾಗಲಿದೆ.
ಮಕರ
ಕೆಲ ವಿಷಯಗಳನ್ನು ಲಘುವಾಗಿ ಪರಿಗಣಿಸದಿರಿ. ಅದು ಗಂಭೀರ ಪರಿಣಾಮ ಉಂಟು ಮಾಡೀತು.ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಗಮನ ಕೊಡಿ.
ಕುಂಭ
ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸಲಿದೆ. ಸಣ್ಣ ವಿಷಯದಲ್ಲೂ ಲೋಪ ಕಂಡುಹಿಡಿಯಬೇಡಿ. ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ.
ಮೀನ
ನಿಮ್ಮ ಕಾರ್ಯದಲ್ಲಿ ಪ್ರಗತಿ. ಸಹನೆಯಿಂದ ಜನರನ್ನು ಗೆಲ್ಲಿ. ಭಾವಾವೇಶದ ಪ್ರತಿಕ್ರಿಯೆ ಬೇಡ. ಹಣದ ವಿಚಾರ ಎಚ್ಚರದಿಂದ ನಿಭಾಯಿಸಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ