February 4, 2026
Wednesday, February 4, 2026
spot_img

ದಿನಭವಿಷ್ಯ: ಬೇಡದ ಯೋಚನೆಗೆ ವಿದಾಯ ಹೇಳಿ, ಭಿನ್ನಾಭಿಪ್ರಾಯ ದೂರ ಮಾಡಿ.. ಆರೋಗ್ಯವಾಗಿರಿ!

ಮೇಷ
ಖಾಸಗಿ ಬದುಕಲ್ಲಿ ಹೊಸ ಸಮಸ್ಯೆ. ಕುಟುಂಬ ದಲ್ಲಿ ಸೌಹಾರ್ದತೆ ಕಾಪಾಡಿ. ದುಡುಕಿನಿಂದ ಪ್ರತಿಕ್ರಿಯಿಸಬೇಡಿ.   ಆರ್ಥಿಕ ಒತ್ತಡ ಹೆಚ್ಚು.    
ವೃಷಭ
ಮನಸ್ಸಿನಿಂದ ಅನವಶ್ಯ ಆಲೋಚನೆ ತೊಡೆದು ಹಾಕಿ. ಇಲ್ಲದ ವಿಷಯದಲ್ಲಿ ಚಿಂತೆ ಮಾಡುವಿರಿ. ಧ್ಯಾನ ನಿಮಗೆ ಸಹಕಾರಿಯಾದೀತು.      
ಮಿಥುನ
ನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ. ಪ್ರೀತಿಯಲ್ಲಿ ಯಶಸ್ಸು. ಪ್ರವಾಸ ಹೊರಟವರಿಗೆ ಪೂರಕ ವಾತಾವರಣ. ಮಕ್ಕಳಿಂದ ಸಂತೋಷ.        
ಕಟಕ
   ನಿರಾಳವಾಗಿರಲು ಅವಕಾಶ ಸಿಗದು. ಅನವಶ್ಯ ಚಿಂತೆ. ದೃಢವಾಗಿ ವರ್ತಿಸಿದರೆ ಎಲ್ಲವನ್ನು ನಿಭಾಯಿಸುವಿರಿ.  ಆರೋಗ್ಯ ಸುಸ್ಥಿರ.                
ಸಿಂಹ
 ಪ್ರತಿಕೂಲ ಪರಿಸ್ಥಿತಿ ಇದ್ದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಕೌಟುಂಬಿಕ ಭಿನ್ನಾಭಿಪ್ರಾಯ ಸಂಭವ. ಪ್ರಬುದ್ಧವಾಗಿ ವರ್ತಿಸಿ.    
ಕನ್ಯಾ
ಗುರಿ ಸಾಧನೆಗೆ ಪೂರಕ ದಿನ. ಸಂಬಂಧ ದಲ್ಲಿ ಒಡಕು ಮೂಡದಂತೆ ಎಚ್ಚರದಿಂದ ನಡಕೊಳ್ಳಿ. ಹಿರಿಯರು ಆಹಾರದಲ್ಲಿ ಎಚ್ಚರ ವಹಿಸಿ.    
ತುಲಾ
ನಿಮ್ಮ ಕಾರ್ಯದಲ್ಲಿ ದಿನವಿಡೀ ವ್ಯಸ್ತ. ಆದರೂ ಇನ್ನಿತರ ವಿಷಯದತ್ತ ಗಮನ ಹರಿಸಬೇಕಾದ ಅನಿವಾರ್ಯತೆ. ಮೆಚ್ಚಿನ ಹವ್ಯಾಸದಲ್ಲಿ ತೃಪ್ತಿ.              
ವೃಶ್ಚಿಕ
ಬಿಡುವಿರದ ದಿನ. ಹೆಚ್ಚು ಹೊಣೆಗಾರಿಕೆ. ಸಂಬಂಧದಲ್ಲಿ ಮೂಡಿದ ಸಮಸ್ಯೆ ಬಗೆಹರಿಸಲು ಹೆಚ್ಚು ಸಮಯ ವ್ಯಯಿಸುವಿರಿ.    
ಧನು
ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ಉಂಟಾದೀತು. ಗುಣಾತ್ಮಕ ಪ್ರಗತಿ. ಸಂಬಂಧ ಗಟ್ಟಿಗೊಳ್ಳಲಿದೆ. ದೈಹಿಕ ಶ್ರಮ ಅತಿಯಾಗಿಸಬೇಡಿ.          
ಮಕರ
ಏನೋ ಕಳಕೊಂಡ ಭಾವನೆ. ಹತಾಶೆ. ಹಳೆಯ ಚಿಂತೆ ಮರೆತು ಮುಂದೆ ಸಾಗುವುದು ಒಳಿತು. ಒತ್ತಡವನ್ನು ನಿಭಾಯಿಸುವ ಕಲೆ ಅರಿಯಿರಿ.  
ಕುಂಭ
 ಕುಟುಂಬ, ಸ್ನೇಹಿತರ ಜತೆ ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ. ಆದರೂ ಯಾವುದೋ ಕೊರಗು ಮನದೊಳಗೆ
ಕಾಡುತ್ತಿರುತ್ತದೆ.                      
 ಮೀನ
ಸಣ್ಣ ವಿಷಯಕ್ಕೂ ಅತಿರೇಕದ ಪ್ರತಿಕ್ರಿಯೆ ತೋರದಿರಿ. ಸಮಾಧಾನದ ನಡೆ ಅವಶ್ಯ.  ಇತರರ ಜತೆ ಅನ್ಯೋನ್ಯತೆ ಸಾಽಸಿ, ಅದರಿಂದ ಕಾರ್ಯಸಿದ್ಧಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !