ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಇಂದು ಸಾಮಾಜಿಕ ಮತ್ತು ಕೌಟುಂಬಿಕ ಬದ್ಧತೆ ಈಡೇರಿಸಲು ಆದ್ಯತೆ ಕೊಡುವಿರಿ. ಹೆಚ್ಚುವರಿ ಹೊಣೆಗಾರಿಕೆ ತಪ್ಪಿಸಲು ಯತ್ನಿಸಬೇಡಿ.    ಧನವ್ಯಯ ಅಧಿಕ.

ವೃಷಭ
ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಅವರ ಸಂಗದಲ್ಲಿ ಸಂತೋಷ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಸ್ನೇಹಿತರ ಮುನಿಸು ದೂರವಾಗುವುದು.

ಮಿಥುನ
ಖಾಸಗಿ ಬದುಕಿನಲ್ಲಿ ಮಹತ್ವದ ನಿರ್ಧಾರ ತಾಳಬೇಕಾದೀತು.ಅಳೆದು ತೂಗಿ ನಿರ್ಧರಿಸಿ. ಆರೋಗ್ಯ ಸಮಸ್ಯೆಯಿದ್ದರೆ ಕೂಡಲೇ ಪರಿಹರಿಸಿ.

ಕಟಕ
ವ್ಯವಹಾರದಲ್ಲಿ ಸಫಲತೆ. ವಿಘ್ನಗಳು ನಿವಾರಣೆ.  ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಕಾಣುವುದು. ಆತ್ಮೀಯರಿಂದ ಉತ್ತಮ ಸಹಕಾರ.

ಸಿಂಹ
ಕೆಲಸ ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಧಿಸಿ. ಯಾವುದೇ ಒಂದನ್ನು ಕಡೆಗಣಿಸುವುದು ಸರಿಯಲ್ಲ. ಖರ್ಚು ಹೆಚ್ಚುವುದು.

ಕನ್ಯಾ
ಯಾವುದೇ ವಿಷಯದಲ್ಲಿ ಆತುರದ ತೀರ್ಮಾನ ತಳೆಯಬೇಡಿ. ಯಾವುದೋ ಒಂದು ವಿಚಾರಕ್ಕೆ ವಿಭಿನ್ನ ಮುಖಗಳಿರಬಹುದು. ಪರಾಮರ್ಶಿಸಿ.

ತುಲಾ
ಸಮಸ್ಯೆ ಕಾಡುತ್ತದೆ. ಇದರಿಂದಾಗಿ ಸರಿಯಾಗಿ ಚಿಂತಿಸಲು ನಿಮ್ಮಿಂದಾಗದು. ತಪ್ಪು ನಿರ್ಧಾರ ಉಂಟಾದೀತು. ಸಂಯಮವಿರಲಿ.

ವೃಶ್ಚಿಕ
ಅಪೇಕ್ಷಿತ ಕಾರ್ಯ ಸಾಧನೆ. ಇತರರ ಟೀಕೆಗಳನ್ನು ಕ್ರೀಡಾ
ಸ್ಫೂರ್ತಿಯಿಂದ ಸ್ವೀಕರಿಸಿ. ನಿಮ್ಮ ನಿರ್ವಹಣೆ ಉತ್ತಮ ಪಡಿಸಲು ಗಮನ ಕೊಡಿ.

ಧನು
ಎಲ್ಲೆಡೆಗಳಿಂದಲೂ ನಿಮ್ಮ ಮೇಲೆ ಒತ್ತಡ. ಇದರ ಮಧ್ಯೆ ಆದಾಯ ಹೆಚ್ಚಳದ ಗುರಿ ಸಾಧಿಸುವಿರಿ. ಕೌಟುಂಬಿಕ ಸಂತೋಷ. ಆರೋಗ್ಯ ಸುಸ್ಥಿರ.

ಮಕರ
ನಿಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಲು ಯತ್ನಿಸುವರು. ಅದಕ್ಕೆ ಅವಕಾಶ ಕೊಡದಿರಿ.  ಕೌಟುಂಬಿಕ ವ್ಯವಹಾರ ಪೂರ್ಣಗೊಳಿಸುವಿರಿ.

ಕುಂಭ
ಪಾಸಿಟಿವ್ ಚಿಂತನೆ ಬೆಳೆಸಿಕೊಳ್ಳಿ. ಸಣ್ಣ ಹಿನ್ನಡೆಗಳಿಗೆ ಧೈರ್ಯಗುಂದುವ ಅಗತ್ಯವಿಲ್ಲ. ಆತ್ಮೀಯ ಬಂಧುಗಳಿಂದ ಸಹಕಾರ.  ಧನಲಾಭ.

ಮೀನ
ಕುಟುಂಬ ಸದಸ್ಯರ ಜತೆ ಇಂದು ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ. ಸಣ್ಣ ವಿಚಾರ  ನೆಮ್ಮದಿ ಕೆಡಿಸಲು ಆಸ್ಪದ ಕೊಡಬೇಡಿ. ಹೊಂದಾಣಿಕೆ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!