ಮೇಷ
ನಿಮ್ಮ ಕಾರ್ಯವನ್ನು ಸಮರ್ಥವಾಗಿ ಮಾಡುವಿರಿ.ಮೆಚ್ಚುಗೆ ಗಳಿಸುವಿರಿ. ಆದರೆ ಕೌಟುಂಬಿಕ ಸಮಸ್ಯೆ ಮನಸ್ಸಿನ ಶಾಂತಿ ಹಾಳು ಮಾಡುವುದು.
ವೃಷಭ
ನಿರಾಳತೆಯಿಂದ ದಿನ ಕಳೆಯುವ ಅವಕಾಶ ಲಭ್ಯ. ದೈನಂದಿನ ಗೋಜಲುಗಳು ಬಾಧಿಸುವುದಿಲ್ಲ. ಆಪ್ತರ ಸಾಹಚರ್ಯೆ ಖುಷಿ ಕೊಡುವುದು.
ಮಿಥುನ
ಭವಿಷ್ಯದ ಕುರಿತಾದ ನಿಮ್ಮ ಯೋಜನೆ ಉತ್ತಮ ಫಲ ನೀಡುವ ಸಾಧ್ಯತೆಯಿದೆ.ಕೆಲವು ವಿಷಯಗಳಲ್ಲಿ ಅತಿಯಾದ ಭಾವುಕತೆ ಒಳ್ಳೆಯದಲ್ಲ.
ಕಟಕ
ನಿಮ್ಮ ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಲು ಅಹಂ ಬೇಡ. ಅವರಿಂದ ಪರಿಹಾರ ಸಿಗಬಹುದು. ಹಣದ ಕೊರತೆ ಕಾಡಬಹುದು.ಸಾಲಕ್ಕೆ ಕೈ ಚಾಚಬೇಡಿ.
ಸಿಂಹ
ಪ್ರಮುಖ ನಿರ್ಧಾರ ತಾಳುವುದರಿಂದ ಇಂದು ದೂರವಿರಿ.ಏಕೆಂದರೆ ಎಲ್ಲವೂ ನಿಮಗೆ ಅನುಕೂಲಕರವಾಗಿ ಸಾಗದು. ಕಾದು ನೋಡುವುದು ಉತ್ತಮ.
ಕನ್ಯಾ
ಅತಿಯಾದ ಉತ್ಸಾಹ ನಿಮ್ಮ ಕೆಲಸ ಹಾಳು ಮಾಡೀತು. ಇದನ್ನು ನೀವಿಂದು ನೆನಪಲ್ಲಿ ಇಟ್ಟುಕೊಳ್ಳಬೇಕು. ಅತೃಪ್ತಿ, ಅಸಮಾಧಾನ ಕಾಡಬಹುದು.
ತುಲಾ
ಇಂದಿನ ದಿನ ನಿಮಗೆ ಆಶಾವಾದಿಯಾಗಿದೆ.ಕಾರ್ಯಗಳೆಲ್ಲ ಪೂರ್ಣ. ಮುಖ್ಯ ವಿಚಾರಗಳಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಕೌಟುಂಬಿಕ ಸಹಕಾರ.
ವೃಶ್ಚಿಕ
ಏಕತಾನತೆಯ ಬೇಸರ.ಜೀವನದಲ್ಲಿ ವೈವಿಧ್ಯತೆ ಇಲ್ಲವೆಂಬ ಕೊರಗು. ಇದಕ್ಕೆ ಪರಿಹಾರ ನಿಮ್ಮಲ್ಲೇ ಇದೆ.ಹೊಸ ಯೋಜನೆ ಹಾಕಿಕೊಳ್ಳಿ, ಪ್ರವಾಸ ಹೊರಡಿ.
ಧನು
ಹೂಡಿಕೆಗೆ ಉತ್ತಮ ದಿನ. ಸೂಕ್ತ ಪ್ರತಿಫಲ ದೊರಕುವುದು. ಸಾಲ ಪಡೆಯುವ ಅಥವಾ ಕೊಡುವ ಕಾರ್ಯಕ್ಕೆ ಮುಂದಾಗದಿರಿ.ಅದು ಒಳಿತು ತಾರದು.
ಮಕರ
ವೃತ್ತಿಯಲ್ಲಿ ಸಫಲ ದಿನ.ಸಮಸ್ಯೆಗಳು ಕಾಡಲಾರವು. ಮನಸ್ಸಿನಿಂದ ದೂರವಾಗಿದ್ದ ವ್ಯಕ್ತಿ ಮತ್ತೆ ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು.
ಕುಂಭ
ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಿ.ಇಲ್ಲವಾದರೆ ಮುಜುಗರದ ಪ್ರಸಂಗ ಎದುರಿಸುವಿರಿ.ಸಣ್ಣ ಹಿನ್ನೆಡೆಗೆ ಎದೆಗುಂದದಿರಿ.
ಮೀನ
ಕೆಲಸದ ಒತ್ತಡ. ನಿಮ್ಮ ಮನಶ್ಯಾಂತಿ ಕಲಕುವುದು.ಆರಾಮವಾಗಿ ಇರಲು ಅವಕಾಶ ಸಿಗುವುದಿಲ್ಲ. ಮನೆಯಲ್ಲಿ ಮಾತಿನ ಸಂಘರ್ಷ ನಡೆದೀತು.