ಮೇಷ
ಬೇಸರದ ಮನಸ್ಥಿತಿ. ಇದಕ್ಕೆ ನಿಮ್ಮ ಮನೋಭಾವವೇ ಕಾರಣ ಹೊರತು ಬೇರೇನಲ್ಲ. ನಿರಾಳವಾಗಿರಲು ಪ್ರಯತ್ನಿಸಿ. ಸಣ್ಣ ವಿಷಯಕ್ಕೂ ಖುಷಿ ಪಡಿ.
ವೃಷಭ
ನಿಮಗೆ ಹೆಚ್ಚು ಪೂರಕವಾದ ದಿನವಲ್ಲ. ಕಾರ್ಯಫಲ ದೊರಕುವುದಾದರೂ ತುಂಬಾ ನಿಧಾನವಾಗಿ. ಎಣ್ಣೆ ತಿಂಡಿ ಸೇವಿಸಿದರೆ ಆರೋಗ್ಯಕ್ಕೆ ಪ್ರತಿಕೂಲ.
ಮಿಥುನ
ಮನೆಯವರ ಜತೆ ಇಂದು ಹೆಚ್ಚು ಕಾಲ ಕಳೆಯುವ ಅವಕಾಶ. ಬಂಧುಗಳ ಭೇಟಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ಅಧಿಕ ಧನವ್ಯಯ.
ಕಟಕ
ಯಶಸ್ವಿ ದಿನ. ಉದ್ದೇಶ ಸಫಲ. ಯಾವುದೇ ಕಾರ್ಯ ಉತ್ತಮ ಫಲ ನೀಡುವುದು. ಉಳಿತಾಯ ಹೆಚ್ಚಳ. ಕುಟುಂಬಸ್ಥರ ಮಧ್ಯೆ ಸೌಹಾರ್ದತೆ.
ಸಿಂಹ
ಹಣ ಗಳಿಕೆ, ವೆಚ್ಚ ಇವೆರಡರ ಮಧ್ಯೆ ಸಮತೋಲನ ಸಾಧಿಸಲು ಸಫಲರಾಗುವಿರಿ. ಕೌಟುಂಬಿಕ ವಲಯದಲ್ಲಿ ಸಂತೋಷ. ಆರೋಗ್ಯ ಸ್ಥಿತಿ ಸುಸ್ಥಿರ.
ಕನ್ಯಾ
ಕೌಟುಂಬಿಕ ತೃಪ್ತಿ. ಬದುಕಿನಲ್ಲಿ ಸ್ಥಿರತೆ ಮತ್ತು ಶಾಂತಿ ಕಂಡುಕೊಂಡ ನೆಮ್ಮದಿಯ ಭಾವ. ಆತ್ಮೀಯರ ಭೇಟಿ ಸಾರ್ಥಕತೆ ಮೂಡಿಸುವುದು.
ತುಲಾ
ನೀವು ಮಾಡುವ ಕಾರ್ಯದಲ್ಲಿ ಹೆಚ್ಚು ಶ್ರದ್ಧೆ ವಹಿಸಿ. ಕಾಟಾಚಾರದ ಕೆಲಸ ಫಲ ನೀಡದು. ಇಂದು ಖರ್ಚು ಹೆಚ್ಚುವುದು. ಖರೀದಿಯೂ ಅಧಿಕ.
ವೃಶ್ಚಿಕ
ಹೊಸ ಜನರ ಸಂಪರ್ಕ. ಅವರಿಂದ ನಿಮ್ಮ ಕಾರ್ಯಸಿದ್ಧಿ. ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಕೌಟುಂಬಿಕ ಪರಿಸರ ನೆಮ್ಮದಿದಾಯಕ.
ಧನು
ಹೆಚ್ಚು ಭಾವುಕರಾಗುವ ಪ್ರಸಂಗ ಒದಗೀತು. ಭಾವನೆಯ ಮೇಲೆ ಹಿಡಿತ ಸಾಧಿಸಿ. ಇತರರ ಮುಂದೆ ಮುಜುಗರಕ್ಕೆ ಒಳಗಾಗದಿರಿ. ವಾಗ್ವಾದಕ್ಕೆ ಇಳಿಯದಿರಿ.
ಮಕರ
ಪ್ರತಿಕೂಲ ಪರಿಸ್ಥಿತಿಯನ್ನು ನಾಜೂಕಿನಿಂದ ನಿಭಾಯಿಸಿ. ಕೌಟುಂಬಿಕ ಭಿನ್ನಮತವನ್ನು ಸೌಹಾರ್ದದಿಂದ ಪರಿಹರಿಸಿಕೊಳ್ಳಿ. ಖರ್ಚು ಹೆಚ್ಚಬಹುದು.
ಕುಂಭ
ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ನಿಮ್ಮ ಸ್ವಭಾವದಿಂದಾಗಿ ಆಪ್ತರ ಜತೆ ವಾಗ್ವಾದ ನಡೆದೀತು. ಸಂಯಮ ತಂದುಕೊಳ್ಳಿ.
ಮೀನ
ಖರ್ಚು ಹೆಚ್ಚಳ. ಆದರೆ ಉತ್ತಮ ಉದ್ದೇಶಕ್ಕಾಗಿ ಖರ್ಚು ಮಾಡಿದ ಸಮಾಧಾನ. ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿರಿ.