ಮೇಷ
ಸ್ಪರ್ಧೆಯಲ್ಲಿ , ಪೈಪೋಟಿ ಯಲ್ಲಿ ನಿಮಗೆ ಯಾರೂ ಸಾಟಿಯಾಗಲಾರರು. ಆದರೆ ಇದರಿಂದ ಕೌಟುಂಬಿಕ ಭಿನ್ನಮತ ಉಂಟಾದೀತು. ವಾದಕ್ಕೆ ಇಳಿಯದಿರಿ.
ವೃಷಭ
ಶುಭಸುದ್ದಿಗೆ ಕಾಯುತ್ತಿದ್ದರೆ ಅದು ಇಂದು ಸಿಗಲಿದೆ. ವೃತ್ತಿಯಲ್ಲಿ ಮುನ್ನಡೆ. ಸಮಸ್ಯೆಗಳು ಪರಿಹಾರ, ಆರ್ಥಿಕ ವಿಚಾರ ತೃಪ್ತಿ ತರುವುದು.
ಮಿಥುನ
ಭಾವನಾತ್ಮಕ ವಿಷಯವೊಂದು ಮನಸ್ಸಿನಲ್ಲಿ ದ್ವಂದ್ವ ಮೂಡಿಸಬಹುದು. ಇತರರ ಪಕ್ಷ ವಹಿಸು ವಾಗ ವಿವೇಚನೆಯಿಂದ ನಡಕೊಳ್ಳಿ.
ಕಟಕ
ಕೆಲವು ಸಮಸ್ಯೆಗಳು ಬಂದರೂ ಆ ಸಮಸ್ಯೆಗೆ ಸೂಕ್ತ ಪರಿಹಾರವೂ ನಿಮ್ಮಲ್ಲಿದೆ. ಹಾಗಾಗಿ ಎಲ್ಲವೂ ಸುಗಮವಾಗಿ ಸಾಗಲಿದೆ. ಕೌಟುಂಬಿಕ ಸಮಾಧಾನ.
ಸಿಂಹ
ಸಮಾನಮನಸ್ಕರ ಜತೆ ಸ್ನೇಹ ವೃದ್ಧಿ. ಯಾವುದೋ ವಿಚಾರದಲ್ಲಿ ನಿಮ್ಮ ನಂಬಿಕೆ ಬಲಪಡಿಸುವ ಬೆಳವಣಿಗೆ ಸಂಭವಿಸಬಹುದು.
ಕನ್ಯಾ
ಮನಸ್ಸು ಅತ್ತಿತ್ತ ಸೆಳೆಯಲು ಹಲವು ಕಾರಣಗಳು ಇದ್ದರೂ ಗುರಿಯಿಂದ ವಿಚಲಿತರಾಗದಿರಿ. ಕೆಲ ವಿಚಾರದಲ್ಲಿ ದ್ವಂದ್ವ ಕಾಡಬಹುದು.
ತುಲಾ
ಪ್ರಮುಖ ವಿಚಾರದಲ್ಲಿ ಮಹತ್ವದ ಬೆಳವಣಿಗೆ. ನಿಮಗೆ ಅದರಿಂದ ನಷ್ಟವಾದೀತು. ಹಣ ಗಳಿಕೆಯಲ್ಲಿ ಸಮಸ್ಯೆ ಎದುರಿಸುವಿರಿ. ಕೌಟುಂಬಿಕ ಅಸಹಕಾರ
ವೃಶ್ಚಿಕ
ನಿಭಾಯಿಸಲು ಕಠಿಣವಾದ ಸವಾಲು ಎದುರಾಗಬಹುದು. ಆದರೆ ದಿನದಂತ್ಯಕ್ಕೆ ಎಲ್ಲವೂ ಸರಳವಾಗಿ ಕೊನೆಗೊಳ್ಳುವುದು. ಸೂಕ್ತ ಸಹಕಾರ ಲಭ್ಯ.
ಧನು
ನಿರೀಕ್ಷಿತ ಪ್ರಸಂಗ ಎದುರಿಸುವಿರಿ. ಅದು ನಿಮ್ಮ ಬದುಕಿಗೆ ಮುಖ್ಯವಾಗಬಹುದು. ಹಾಗಾಗಿ ಅದನ್ನು ನಿಮಗೆ ಪೂರಕವಾಗಿ ಬದಲಿಸಿಕೊಳ್ಳಿ.
ಮಕರ
ಇಂದಿನ ದಿನ ಯಾವುದೇ ಸೋಲು, ಹಿನ್ನಡೆ ನಿಮ್ಮನ್ನು ಬಾಧಿಸದು. ಆದರೆ ಏಕತಾನತೆ ಕಾಡಬಹುದು. ವಿಭಿನ್ನ ಕಾರ್ಯದಲ್ಲಿ ತೊಡಗಲು ಯತ್ನಿಸಿ.
ಕುಂಭ
ಆರ್ಥಿಕ ವಿಚಾರದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಭಾವುಕ ಸನ್ನಿವೇಶವೊಂದು ಮನಸ್ಸು ಕಲಕಬಹುದು. ಕೌಟುಂಬಿಕ ತುಮುಲ ಉಂಟಾದೀತು.
ಮೀನ
ನಿಮ್ಮ ಖಾಸಗಿ ಸಮಸ್ಯೆಗಳ ಕಾರಣದಿಂದಾಗಿ ಉದ್ವಿಗ್ನತೆ. ಇದರಿಂದ ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಮೊಳೆಯಬಹುದು.