ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮನ್ನು ವಿರೋಧಿಸುವ  ಕೆಲವರು ನಿಮ್ಮ ಅವನತಿಗೆ ಯೋಜನೆ ಹಾಕಿಯಾರು, ಎಚ್ಚರವಿರಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ವೃಷಭ
ಉದ್ಯೋಗದಲ್ಲಿ ಯಶಸ್ವಿ ವ್ಯವಹಾರ. ಅಡ್ಡಿಗಳ ನಿವಾರಣೆ. ಸಂಗಾತಿಗಳ ನಡುವಿನ ಭಿನ್ನಮತ ಪರಿಹಾರ. ಆರ್ಥಿಕವಾಗಿ ಹೆಚ್ಚುವರಿ ಗಳಿಕೆ. ಒಟ್ಟಿನಲ್ಲಿ ಶುಭ ದಿನ.

ಮಿಥುನ
ಸಣ್ಣ ವಿಷಯಕ್ಕೆ ಸಂಗಾತಿಗಳ ಮಧ್ಯೆ ತಿಕ್ಕಾಟ ನಡೆದೀತು. ಸಂಯಮದ ವರ್ತನೆ ಅಗತ್ಯ. ವ್ಯವಹಾರ ಸಂಬಂಧ ದೂರ ಪ್ರಯಾಣ ಸಾಧ್ಯತೆ.

ಕಟಕ
ಕೆಲಸದ ಕ್ಷೇತ್ರದಲ್ಲಿ ಒತ್ತಡ ನಿವಾರಣೆ. ಇದರಿಂದ ಸುಗಮವಾಗಿ ಕಾರ್ಯ ನಿರ್ವಹಿಸಲು ಅನುಕೂಲ. ವಿವಾಹಿತರ ಪಾಲಿಗೆ ಶುಭಕರ ಬೆಳವಣಿಗೆ.

ಸಿಂಹ
ಮನದೊಳಗೆ ತಾಕಲಾಟ.  ಅದರಿಂದ ಹೊರಬರಲು ನಿಮ್ಮ ಇಷ್ಟದ ಹವ್ಯಾಸದಲ್ಲಿ ತೊಡಗಿ. ವ್ಯಕ್ತಿಯೊಬ್ಬರು ಕೌಟುಂಬಿಕ ಶಾಂತಿ ಕೆಡಿಸುವರು.

ಕನ್ಯಾ
ನಿಮ್ಮ ಜತೆಗಿನ ವ್ಯಕ್ತಿಗಳ ವರ್ತನೆ ಅಸಹನೀಯ ಎನಿಸಬಹುದು. ಆದರೆ ಅವರ ಜತೆ ಹೊಂದಿ ಬಾಳುವುದು ಮುಖ್ಯ. ಇತರರ ಭಾವನೆಯನ್ನು ಗೌರವಿಸಿ.

ತುಲಾ
ಕೌಟುಂಬಿಕ ವ್ಯವಹಾರ ದಲ್ಲಿ ಕಿರಿಕಿರಿ. ಅದನ್ನು ಸಮಾಧಾನದಿಂದ ನಿಭಾಯಿಸಿ. ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರದಂತೆ  ನೋಡಿಕೊಳ್ಳಿ.

ವೃಶ್ಚಿಕ
ನಿಮ್ಮ ಬದುಕಲ್ಲಿ  ಬಂದಿರುವ ವ್ಯಕ್ತಿಗಳನ್ನು  ಅವರು ಇರುವಂತೆಯೆ ಸ್ವೀಕರಿಸಿ. ಅವರನ್ನು ಸಂಪೂರ್ಣ ಬದಲಿಸುವ ಪ್ರಯತ್ನ ಬಿಡಿ. ಅದರಿಂದ ಸಂಘರ್ಷವಾದೀತು.

ಧನು
ಯಾವುದೋ ಕೊರಗು ಮನಸ್ಸನ್ನು ಕಾಡುವುದು. ಅದರಿಂದ ಸದ್ಯಕ್ಕೆ ಮುಕ್ತಿ ಸಿಗಲಾರದು. ಸ್ವಲ್ಪ ಕಾಲ ಕಾಯಬೇಕು. ಬಳಿಕ ಸಮಸ್ಯೆ ತಾನಾಗಿ ನಿವಾರಣೆಯಾಗಲಿದೆ.

ಮಕರ
ನಿಮ್ಮ ಸುತ್ತಲಿನ ಬದಲಾವಣೆಗಳು ನಿಮಗೆ ಪೂರಕವಾಗುವವು. ಹಾಗಾಗಿ ಬದಲಾವಣೆಗೆ ವಿರೋಧ ತೋರದಿರಿ. ಹೊಂದಾಣಿಕೆ ಮಾಡಿಕೊಳ್ಳಿರಿ.

ಕುಂಭ
ನೀವು ತೋರುವ ಪ್ರೀತಿ, ಕಾಳಜಿಗೆ ಅದೇ ಬಗೆಯ ಸ್ಪಂದನೆ ದೊರಕದೆ ಇರಬಹುದು. ಅದರಿಂದ ಎದೆಗುಂದದಿರಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ.

ಮೀನ
ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಬಂಧುಗಳಿಂದ ಹಿತ ತರುವ ಸುದ್ದಿ. ಆರ್ಥಿಕ ಲಾಭವೂ ಉಂಟಾದೀತು. ತೃಪ್ತಿಕರ ದಿನವಿದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!