ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಮನಸ್ಸು ವಿಚಲಿತ ಗೊಳಿಸುವ ಪ್ರಸಂಗ ನಡೆದೀತು. ಹಿನ್ನಡೆಗೆ ಅಂಜದೆ ಧೈರ್ಯದಿಂದ ಮುಂದುವರಿಯಿರಿ. ಕೌಟುಂಬಿಕ ಅಸಮಾಧಾನ.
ವೃಷಭ
ಕೆಲಸದ ಒತ್ತಡ ಹೆಚ್ಚು. ಉದ್ವಿಗ್ನತೆ ಹೆಚ್ಚಿಸುವ ಬೆಳವಣಿಗೆ. ಪ್ರತಿಕೂಲ ಪರಿಸ್ಥಿತಿಯಿಂದ ಆರೋಗ್ಯ ಸಮಸ್ಯೆ ಸಂಭವ. ಶಾಂತ ಮನಸ್ಥಿತಿ ಮುಖ್ಯ.
ಮಿಥುನ
ವೃತ್ತಿಯಲ್ಲಿ ತೊಡಕು ಸಂಭವ. ನಿಮ್ಮ ನಿಲುವು ಸ್ಪಷ್ಟವಿರಲಿ. ಡೋಲಾಯಮಾನ  ಪ್ರದರ್ಶಿಸಬೇಡಿ.   ಬಂಧುಗಳ ಅಸಹಕಾರ.
ಕಟಕ
ಅವಿರತ ಕೆಲಸ. ವಿರಾಮಕ್ಕೆ ಅವಕಾಶ ಸಿಗದು. ನಿಮ್ಮ ಕಾರ್ಯ ವೈಖರಿ ಬಗ್ಗೆ ನಿಮಗೇ ತೃಪ್ತಿ ಮೂಡುವುದಿಲ್ಲ. ಕುಟುಂಬಸ್ಥರ ಅಸಹಕಾರ.
ಸಿಂಹ
ಕೌಟುಂಬಿಕ ವಿಷಯಕ್ಕೆ ಆದ್ಯತೆ ಕೊಡಿ. ಎಲ್ಲರ ಜತೆ ಸಹನೆಯಿಂದ ವರ್ತಿಸಿ.  ವಾಗ್ವಾದ ತಪ್ಪಿಸಿರಿ. ಆರೋಗ್ಯಕ್ಕೂ ಗಮನ ಕೊಡಿ.
ಕನ್ಯಾ
ಕುಟುಂಬದ ಕುರಿತು ಕಾಳಜಿ ವಹಿಸ ಬೇಕಾದ ಪ್ರಸಂಗ. ಸಮಸ್ಯೆ ಸಣ್ಣದಾದರೂ ನಿಮಗೆ ಅದು ದೊಡ್ಡ ಚಿಂತೆಗೆ ಕಾರಣವಾಗುವುದು.
ತುಲಾ
ದೊಡ್ಡ ಕಾರ್ಯಕ್ಕೆ ಅಣಿಯಾಗುವಿರಿ. ವಿರೋಧ ಲೆಕ್ಕಿಸದಿರಿ. ಅಂತ್ಯದಲ್ಲಿ ಎಲ್ಲರೂ ನಿಮ್ಮ ಜತೆ ಕೈಜೋಡಿಸುವರು. ಸಾಂಸಾರಿಕ ಸೌಹಾರ್ದ.
ವೃಶ್ಚಿಕ
ಶುಭದಿನ. ಅಽಕ ಆದಾಯ. ಬಂಧುಗಳ ಜತೆಗಿನ ಸಂಬಂಧ ಉತ್ತಮ. ಪ್ರಮುಖ ವಿಷಯದಲ್ಲಿ ಮೂಡಿದ್ದ ಗೊಂದಲ ಪರಿಹಾರ .
ಧನು
ಸಮಸ್ಯೆಗಳು ಮುಗಿಯುವುದಿಲ್ಲ ಎಂಬ ಕೊರಗು. ಹತಾಶರಾಗದಿರಿ. ಅದು ಸಹಜ ಜೀವನ. ಸಮಸ್ಯೆಯನ್ನೆ ಸವಾಲಾಗಿ ಸ್ವೀಕರಿಸಿ.
ಮಕರ
ಅನ್ಯರ ವ್ಯವಹಾರ ದಲ್ಲಿ ನೀವು ತಲೆ ಹಾಕಬೇಡಿ. ಅದರಿಂದ ನಿಮಗೇ ಪ್ರತಿಕೂಲ. ಆಪ್ತರ ಜತೆ ಭಿನ್ನಮತ ಉಂಟಾದೀತು.
ಕುಂಭ
ಇಷ್ಟವಿಲ್ಲದ  ವಿಚಾರದಿಂದ ದೂರ ಇರಿ. ವ್ಯವಹಾರದಲ್ಲಿ ಸ್ಪಷ್ಟತೆ ಇರಲಿ. ಗೊಂದಲವಿಲ್ಲದೆ ವ್ಯವಹರಿಸಿ. ಕಾಡುತ್ತಿದ್ದ ಸಮಸ್ಯೆ ಪರಿಹಾರ.
ಮೀನ
ಎಲ್ಲಾ ವಿಷಯದಲ್ಲೂ ನಿಮಗಿಂದು ಯಶ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಪ್ರೀತಿಯಲ್ಲಿ ಸಫಲತೆ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!