ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಮಾನಮನಸ್ಕ ವ್ಯಕ್ತಿಗಳ ಜತೆ ವಿಚಾರ ವಿನಿಮಯ ನಿಮಗೆ ಲಾಭ ತರಲಿದೆ. ಕಾರ್ಯ ಸಫಲತೆ.ಶೀತ, ಜ್ವರದಂತಹ ಅನಾರೋಗ್ಯ ಸಂಭವ.  ಎಚ್ಚರಿಕೆ ವಹಿಸಿರಿ.

ವೃಷಭ
ಮನೆಯಲ್ಲಿ ಅಭಿಪ್ರಾಯ ಭೇದದಿಂದ ಜಗಳ ಉಂಟಾದೀತು. ಸಮಾಧಾನದಿಂದ ವರ್ತಿಸಿರಿ. ಎಣ್ಣೆ ತಿಂಡಿ ಹೆಚ್ಚು ಸೇವಿಸದಿರಿ. ಆರೋಗ್ಯ ಕೆಟ್ಟೀತು.

ಮಿಥುನ
ಅಹಿತಕರ ಪ್ರಸಂಗದಿಂದ ನಿಮ್ಮ ವಿಶ್ವಾಸ ಕುಂದುವುದು. ಮಾಡಬೇಕಾದ ಕೆಲಸ  ಧೈರ್ಯದಿಂದ ಮಾಡಿ ಮುಗಿಸಿ. ಇತರರ ಅವಲಂಬನೆ ಬೇಡ.

ಕಟಕ
ಕೌಟುಂಬಿಕ ಪರಿಸರ ಸೌಹಾರ್ದದಾಯಕ. ಮನೆಯವರ ಜತೆ ಆತ್ಮೀಯ ಕಾಲಕ್ಷೇಪ. ವೃತ್ತಿಯಲ್ಲಿ ನಿಮಗೆ ಅನುಕೂಲಕರವಾದ ವಾತಾವರಣ.

ಸಿಂಹ
ಬಂಧುಗಳ ಜತೆ ವ್ಯವಹರಿಸುವಾಗ ಜಾಣತನದಿಂದ ವರ್ತಿಸಿ. ನಿಮ್ಮ ನಡೆನುಡಿ ವೈಮನಸ್ಸಿಗೆ ಕಾರಣವಾಗದಂತೆ ನೋಡಿಕೊಳ್ಳಿ.

ಕನ್ಯಾ
ಕುಟುಂಬ ಸದಸ್ಯರಿಂದ ದೂರ ಸರಿಯದಿರಿ. ನೀವಾಗಿ ಏಕಾಂತ ಬಯಸುವಿರಿ. ಅದರ ಬದಲು ಅವರ ಜತೆ ಬೆರೆತು ವ್ಯವಹರಿಸಿ. ವೃತ್ತಿಯಲ್ಲಿ ಯಶ.

ತುಲಾ
ನಿಮ್ಮ ವ್ಯವಹಾರದಲ್ಲಿ ಮನಸ್ಸಾಕ್ಷಿಯಂತೆ ನಡಕೊಳ್ಳಿ. ಇತರರ ಸಲಹೆಗೆ ಕಾಯದಿರಿ. ನಿಮಗೆ ಒಳಿತಾಗಲಿದೆ. ನಡೆನುಡಿಯಲ್ಲಿ  ವಿನಯವಿರಲಿ.

ವೃಶ್ಚಿಕ
ಸಾಂಸಾರಿಕ ಬದುಕು ನೆಮ್ಮದಿದಾಯಕ. ಕೆಲವರ ಚಾಡಿಮಾತುಗಳಿಗೆ ಕಿವಿಕೊಡದಿರಿ. ಉದ್ಯೋಗದಲ್ಲಿ  ನಿಮ್ಮ ಆಶಯ ಈಡೇರಿಕೆ. ಧನಲಾಭ.

ಧನು
ಇತರರ ಜತೆ ವ್ಯವಹರಿಸುವಾಗ ಆಕ್ರಮಣಕಾರಿ ಧೋರಣೆ ಬಿಡಿ. ಅದರಿಂದ ಕಾರ್ಯ ಸಾಧಿಸದು. ನಯವಿನಯ ಒಳಿತು.

ಮಕರ
ಪ್ರತಿ ಕೆಲಸವನ್ನು ಪರಿಪೂರ್ಣವಾಗಿ ಮಾಡಲು ಆದ್ಯತೆ ಕೊಡುವಿರಿ. ಅರೆಬರೆ ಕೆಲಸ ನಿಮಗಾಗದು. ಸಾಲ ಮರುಪಾವತಿಗೆ ಸಕಾಲ.

ಕುಂಭ
ಬಿಡುವಿಲ್ಲದ ದಿನ. ಹಾಗಾಗಿ ನಿಮ್ಮ ಪೂರ್ವನಿರ್ಧರಿತ ಕೆಲಸ ಪೂರ್ಣಗೊಳ್ಳದು. ಮನೆಯ ಅಶಾಂತ ವಾತಾವರಣ ತಿಳಿಯಾಗಲಿದೆ.

ಮೀನ
ಚಿಂತೆ, ಕೊರಗು ಕಾಡುತ್ತದೆ. ದೊಡ್ಡ ವಿಷಯವಲ್ಲದಿದ್ದರೂ ಮನಸ್ಸಿನಲ್ಲಿ ಅಸಮಾಧಾನ. ಇದೆಲ್ಲ ನೀವಾಗಿ ಸೃಷ್ಟಿಸಿಕೊಂಡ ಸಮಸ್ಯೆಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!