ಮೇಷ
ಗ್ರಹಗತಿ ನಿಮಗೆ ಪೂರಕವಾಗಿದೆ. ಆರ್ಥಿಕ ಉನ್ನತಿ. ನಿರ್ಧಾರಗಳು ಉತ್ತಮ ಫಲ ನೀಡುವವು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು.
ವೃಷಭ
ಸಂಯಮದಿಂದ ಇಂದು ವರ್ತಿಸಿ. ಸಣ್ಣ ವಿಷಯಕ್ಕೆ ಅತಿಯಾದ ಪ್ರತಿಕ್ರಿಯೆ ತೋರಬೇಡಿ. ಇತರರ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ.
ಮಿಥುನ
ಚಿಂತೆಯೊಂದು ಕಾಡುತ್ತದೆ. ಅದರ ಪರಿಹಾರಕ್ಕೆ ದಾರಿ ತೋಚದ ಪರಿಸ್ಥಿತಿ. ಹತಾಶೆ ಬೇಡ, ಸಮಸ್ಯೆಯಿಂದ ಬೇಗ ಹೊರಬರುವಿರಿ.
ಕಟಕ
ನಿಮಗೆ ಸಂಬಂಽಸಿ ಕೆಲವು ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಿ. ತುಸು ಕಷ್ಟವಾದರೂ ಬಳಿಕ ಒಳಿತಾಗುವುದು.
ಸಿಂಹ
ದಿನವಿಡೀ ನಿಮಗೆ ಪ್ರತಿಕೂಲ ಪರಿಸ್ಥಿತಿ ಏರ್ಪಡಬಹುದು. ಸಹನೆ ಕೆಡಬಹುದು. ಚಿಂತಿಸದಿರಿ, ನಾಳೆ ಬೇರೆಯೇ ದಿನ ಎಂಬ ಆಶಾವಾದವಿರಲಿ.
ಕನ್ಯಾ
ನಿಮ್ಮ ಪಾಲಿಗಿಂದು ಕಳಾಹೀನ ದಿನ. ನೀವು ಯೋಜಿಸಿದ ಕಾರ್ಯ ನಡೆಯದು. ಎಲ್ಲರ ಜತೆ ಹೊಂದಾಣಿಕೆ ಇರಲಿ. ಪರಿಸ್ಥಿತಿ ಬದಲಾದೀತು.
ತುಲಾ
ದೊಡ್ಡ ಹೊಣೆ ಹೆಗಲೇರಲಿದೆ. ಅದನ್ನು ಸಮರ್ಥವಾಗಿ ನೆರವೇರಿಸುವಿರಿ. ಇತರರ ಸಹಕಾರ ಸಿಗಲಿದೆ. ಸಾಂಸಾರಿಕ ಮನಸ್ತಾಪ.
ವೃಶ್ಚಿಕ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಪ್ರತಿಕೂಲ ಪರಿಸ್ಥಿತಿ. ಸಮಾಧಾನದಿಂದ ನಿಭಾಯಿಸಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡದಿರಿ.
ಧನು
ನಿಮ್ಮನ್ನು ಕಾಡುತ್ತಿದ್ದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರುತ್ತಿದೆ. ನಿಮಗೆ ಒಳಿತಾಗುವ ಬೆಳವಣಿಗೆ ಉಂಟಾಗುವುದು. ಕೌಟುಂಬಿಕ ನೆಮ್ಮದಿ.
ಮಕರ
ಅಽಕ ಕೆಲಸದಿಂದ ದೈಹಿಕ ಹಾಗೂ ಮಾನಸಿಕ ಒತ್ತಡ. ಆಪ್ತರ ವರ್ತನೆ ಅಸಹನೀಯ ಎನಿಸಲಿದೆ. ಸಹನೆಯಿಂದ ವರ್ತಿಸಿರಿ. ಆತುರ ಸಲ್ಲದು.
ಕುಂಭ
ವೃತ್ತಿಯಲ್ಲಿ ತೊಂದರೆ ಉಂಟಾದೀತು.ನಿಮ್ಮಿಂದ ತಪ್ಪಾಗದಂತೆ ಎಚ್ಚರ ವಹಿಸಿ. ಪ್ರೀತಿಯ ವಿಷಯದಲ್ಲಿ ಅಹಿತಕರ ಬೆಳವಣಿಗೆ.
ಮೀನ
ಆತ್ಮೀಯರ ಜತೆಗೆ ಸಂಬಂಧ ಕೆಡಬಹುದು. ಸಂಗಾತಿಯೊಡನೆ ವಾಗ್ವಾದ. ಮಾತಿಗಿಂತ ಮೌನ ಸಾಽಸಿದರೆ ಒಳ್ಳೆಯದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ