ದಿನಭವಿಷ್ಯ: ಇಂದು ಸಂಗಾತಿಯ ಜೊತೆ ಹಣದ ವಿಚಾರದಲ್ಲಿ ವೈಮನಸ್ಯ ಸಾಧ್ಯತೆ, ಎಚ್ಚರದಿಂದಿರಿ!

ಮೇಷ
ಪ್ರಯತ್ನ ವಿಫಲ ವಾದರೆ ಹತಾಶೆ ಬೇಡ. ಮರಳಿ ಯತ್ನವ ಮಾಡಿ. ಯಶ ಸಿಗುವುದು ಖಚಿತ. ಹಳೆಯ ಸ್ನೇಹಿತರ ಭೇಟಿ. ಕೌಟುಂಬಿಕ ಸೌಹಾರ್ದ.
ವೃಷಭ
ಉದ್ಯೋಗದ ಜಾಗದಲ್ಲಿ ಬದಲಾವಣೆ. ಅದರಿಂದ ನಿಮಗೆ ಒಳಿತೇ ಆಗಲಿದೆ. ಹಣ ಹೂಡಿಕೆಯಿಂದ ಲಾಭ. ಆರೋಗ್ಯ ಕಾಳಜಿಯಿರಲಿ.
ಮಿಥುನ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಶಾಂತವಾಗಿ ನಿಭಾಯಿಸಿ. ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲ ಅವಶ್ಯ. ಸಣ್ಣ ವಿಷಯಕ್ಕೆ ರೇಗದಿರಿ.
ಕಟಕ
ವೃತ್ತಿಯಲ್ಲಿ ಹೊಸ ಸವಾಲು. ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸು ಸ್ಥಿತಿ ತೃಪ್ತಿಕರ. ಮನೆಯ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾದೀತು.
ಸಿಂಹ
ಬಿಡುವಿಲ್ಲದ ಕೆಲಸದ ಮಧ್ಯೆಯೂ ಕುಟುಂಬದ ಹಿತಾಸಕ್ತಿ ಮರೆಯದಿರಿ.  ಶಾಂತ ಮನಸ್ಥಿತಿಯಿಂದ ಪರಿಸ್ಥಿತಿ ನಿಭಾಯಿಸಿ. ಹಣದ ವಿಚಾರದಲ್ಲಿ ನಷ್ಟ.
ಕನ್ಯಾ
ಕುಟುಂಬಸ್ಥರ ಸಲಹೆಗೆ ಕಿವಿಗೊಡಿ. ತೀರಾ ನಿರ್ಲಕ್ಷಿಸಬೇಡಿ. ವೃತ್ತಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಿ. ಜಗಳದಿಂದ ದೂರವಿರಿ.
ತುಲಾ
ವೃತ್ತಿಯಲ್ಲಿ ಕೆಲವು ಸಮಸ್ಯೆ. ಬಳಿಕ ಅದು ಪರಿಹಾರ ಕಾಣುವುದು. ಕೌಟುಂಬಿಕ ಸೌಹಾರ್ದ. ಮಕ್ಕಳ ಅಧ್ಯಯನಕ್ಕೆ ಹೆಚ್ಚು ಗಮನ ಕೊಡಬೇಕು.
ವೃಶ್ಚಿಕ
ಅನವಶ್ಯ ಖರ್ಚು ನಿಯಂತ್ರಿಸಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಲಿದೆ. ಸಾಂಸಾರಿಕ ಬಿಕ್ಕಟ್ಟು ಪರಿಹಾರ. ಕೌಟುಂಬಿಕ ಸಾಮರಸ್ಯ.
ಧನು
ವ್ಯವಹಾರ ವಿಸ್ತರಿಸಲು ಬಯಸುವಿರಿ. ಸೂಕ್ತ ಯೋಜನೆ ರೂಪಿಸಿ. ಅವಸರದ ಕ್ರಮ ಹಾನಿ ತಂದೀತು. ಸಂಗಾತಿ ಜತೆಗೆ ಮುಚ್ಚುಮರೆ ಬೇಡ.
ಮಕರ
ಕೆಲಸದಲ್ಲಿ ಮುತುವರ್ಜಿ ವಹಿಸಿ. ತಪ್ಪುಗಳು ಆಗದಂತೆ ನೋಡಿಕೊಳ್ಳಿ.  ಮಾತಿನಲ್ಲಿ ಸಂಯಮವಿರಲಿ. ಸಂಬಂಧ ಕೆಡಿಸದಿರಲಿ.
ಕುಂಭ
ಮನೆಯ ಸದಸ್ಯರ ಮನೋಭಾವ ಪದೇಪದೇ ಬದಲಾದೀತು. ಅದರಿಂದ ನಿಮ್ಮ ಮನಶ್ಯಾಂತಿ ಕಲಕಬಹುದು. ದೃಢ ಮನಸ್ಸು ಪ್ರದರ್ಶಿಸಿ.
ಮೀನ
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ವಿಶ್ವಾಸವಿರಲಿ. ಕಠಿಣ ಕಾರ್ಯವನ್ನೂ ನೀವು ಸಾಽಸಬಲ್ಲಿರಿ. ಆಪ್ತರ ಸಂಗದಲ್ಲಿ ಸಂತೋಷ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!