ಮೇಷ
ಕೌಟುಂಬಿಕ ವಿಷಯ ಮುಖ್ಯವಾಗುತ್ತದೆ. ಕಳೆದು ಹೋದುದಕ್ಕೆ ಕೊರಗುತ್ತಾ ಕೂರದಿರಿ. ನಗುನಗುತ್ತಾ ನಿಮ್ಮ ಹೊಣೆ ನಿಭಾಯಿಸಿ. ಆರೋಗ್ಯ ಕಾಯ್ದುಕೊಳ್ಳಿ.
ವೃಷಭ
ಗತದಿನಗಳ ಬಗ್ಗೆ ಅತಿಯಾಗಿ ಚಿಂತಿಸದಿರಿ. ಈಗ ಮಾಡಬೇಕಾದ ಕೆಲಸಕ್ಕೆ ಆದ್ಯತೆ ಕೊಡಿ. ಕೆಲ ವಿಷಯಗಳಿಗೆ ಅತಿರೇಕದ ಪ್ರತಿಕ್ರಿಯೆ ತೋರದಿರಿ.
ಮಿಥುನ
ಕೆಲವರನ್ನು ಕುರುಡಾಗಿ ನಂಬದಿರಿ. ಅವರಿಂದಲೇ ಮೋಸ ಹೋಗುವಿರಿ. ಕೆಲಸದ ಒತ್ತಡದಿದಾಗಿ ವಿರಾಮಕ್ಕೆ ಆಸ್ಪದ ಸಿಗಲಾರದು.
ಕಟಕ
ಎಲ್ಲರೂ ನಿಮ್ಮಂತೆ ಚಿಂತಿಸಬೇಕು ಎಂದು ಬಯಸುವುದು ತಪ್ಪು. ಇತರರ ಭಾವನೆ ಗೌರವಿಸಿ. ಹೆತ್ತವರಿಗೆ ಅನಾರೋಗ್ಯ ಕಾಡಬಹುದು.
ಸಿಂಹ
ಕೌಟುಂಬಿಕ ಪರಿಸ್ಥಿತಿ ನೆಮ್ಮದಿ ತರಲಿದೆ. ಆತ್ಮೀಯರ ಒಡನಾಟದಲ್ಲಿ ಸಂತೋಷ ಕಾಣುವಿರಿ. ಹಣಗಳಿಕೆಗೆ ಸುಲಭ ದಾರಿ ಹಿಡಿಯದಿರಿ.
ಕನ್ಯಾ
ನಿಮ್ಮ ಜತೆ ಅತಿ ಸ್ನೇಹ ಸಾಧಿಸಲು ಯತ್ನಿಸುವವರ ಬಗ್ಗೆ ಒಂದು ಕಣ್ಣಿಡಿ. ಮನೆಯಲ್ಲಿ ಸೌಹಾರ್ದ ವಾತಾವರಣ, ನೆಮ್ಮದಿ.
ತುಲಾ
ಗುಣಾತ್ಮಕ ಸಂಕೇತಗಳಿಂದಲೇ ಇಂದಿನ ದಿನ ಆರಂಭ. ಆರ್ಥಿಕ ಚಿಂತೆಯೊಂದು ನಿವಾರಣೆ. ಆತ್ಮೀಯರ ಸಂಗ ಖುಷಿ ಪಡುವಿರಿ.
ವೃಶ್ಚಿಕ
ವಿರಾಮದ ಮಧ್ಯೆಯೂ ಕೆಲಸದ ಒತ್ತಡ ಬಾಧಿಸುವುದು. ಆಪ್ತರ ಸಂಗಡ ವಾಗ್ವಾದಕ್ಕೆ ಇಳಿಯಬೇಡಿ. ನೀವು ಮೌನವಾಗಿ ಉಳಿಯಿರಿ.
ಧನು
ವ್ಯವಹಾರದ ಬಗ್ಗೆ ಹೆಚ್ಚು ಗಮನ ಕೊಡಿ. ನಿರ್ಲಕ್ಷ್ಯ ತೋರಿದರೆ ನಷ್ಟ ಉಂಟಾದೀತು. ಹೆತ್ತವರು ಮಕ್ಕಳ ಜತೆ ಮೆದುವಾಗಿ ವರ್ತಿಸಬೇಕು.
ಮಕರ
ವ್ಯವಹಾರದಲ್ಲಿ ಮುಖ್ಯ ಬದಲಾವಣೆ ತೋರುವ ಪ್ರಸಂಗ ಒದಗಬಹುದು. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಸಹಕಾರಿಯಾದೀತು.
ಕುಂಭ
ಯೋಜನೆ ಹಾಕಿ ಕೆಲಸ ನಿರ್ವಹಿಸಿ. ಇಲ್ಲವಾದರೆ ಗೊಂದಲ ಎದುರಿಸುವಿರಿ. ಆರೋಗ್ಯ ಸ್ಥಿರ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಡ್ಡಿ.
ಮೀನ
ಜಡತ್ವ ಬಿಟ್ಟು ಕ್ರಿಯಾಶೀಲರಾಗಿ. ನಿಮ್ಮ ಹವ್ಯಾಸ ಬದಿಗಿಡಬೇಡಿ. ದೈಹಿಕ ಶ್ರಮದಿಂದ ಬಳಲುವಿರಿ. ಆಪ್ತರ ಜತೆ ಮಾತಿನ ಚಕಮಕಿ.



