ಮೇಷ
ಚಿಂತನೆಯಲ್ಲಿ ಸ್ಪಷ್ಟತೆ, ಗೊಂದಲ ಮಾಯ ಇಂದಿನ ಬೆಳವಣಿಗೆ. ಭವಿಷ್ಯದ ಯೋಜನೆ ಸಾಕಾರ. ಆರೋಗ್ಯ ಚಿಂತೆ ಪರಿಹಾರ.
ವೃಷಭ
ವ್ಯಕ್ತಿತ್ವ ವಿಕಸನದ ಉದ್ದೇಶ ಸಾರ್ಥಕ. ಕ್ಲಿಷ್ಟಕರ ಗುರಿ ಸಾಧನೆಯಿಂದ ಸ್ಪರ್ಧೆ ಗೆದ್ದ ಉತ್ಸಾಹ. ಆರ್ಥಿಕ ಪರಿಸ್ಥಿತಿಗೆ ಉತ್ತೇಜನ ದೊರಕಲಿದೆ.
ಮಿಥುನ
ವೃತ್ತಿಯಲ್ಲಿ ಹೊಸ ಅವಕಾಶ. ಕುಟುಂಬ ಸದಸ್ಯರ ಜತೆ ಭಾವನೆ ಹಂಚಿಕೊಳ್ಳಿ. ಅವರಿಂದ ನಿಮಗೆ ಸೂಕ್ತ ಬೆಂಬಲ ದೊರಕಲಿದೆ.
ಕಟಕ
ನಿಮ್ಮ ನಡೆನುಡಿ ಇತರರನ್ನು ಆಕರ್ಷಿಸಲಿದೆ. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿ-ಲ ಸಿಗಲಿದೆ. ಪ್ರೀತಿಪಾತ್ರರ ಜತೆ ಕಳೆಯುವ ಅವಕಾಶ.
ಸಿಂಹ
ಕುಟುಂಬಸ್ಥರು ನಿಮ್ಮಿಂದ ಹೆಚ್ಚು ಗಮನ ಅಪೇಕ್ಷಿಸುವರು. ಅವರಿಗೆ ಸ್ಪಂದಿಸಿರಿ. ಸಿಹಿತಿನಿಸು ಸೇವನೆ ಕಡಿಮೆ ಮಾಡಿ. ಆರೋಗ್ಯ ಕಾಯ್ದುಕೊಳ್ಳಿ.
ಕನ್ಯಾ
ದೀರ್ಘಾವಽ ಗುರಿ ಸಾಧನೆಗೆ ಈಗಲೇ ಗಮನ ಕೊಡಿ. ಅದಕ್ಕೆ ಸಿದ್ಧತೆ ನಡೆಸಿ. ಆಪ್ತರ ಸಂಗದಲ್ಲಿ ಹರ್ಷ ಕಾಣುವಿರಿ. ಬಂಧುಮಿತ್ರರ ಭೇಟಿ.
ತುಲಾ
ಕೈಗೆತ್ತಿಕೊಂಡ ಕಾರ್ಯ ಸಾಽಸಲು ಹೆಚ್ಚು ಶ್ರಮದ ಅವಶ್ಯವಿದೆ. ಅಡ್ಡಗಾಲು ಹಾಕುವವರೂ ಇದ್ದಾರೆ. ಎಚ್ಚರದಿಂದ ಮುನ್ನಡೆಯಿರಿ.
ವೃಶ್ಚಿಕ
ಕುಟುಂಬ ಸದಸ್ಯರ ಜತೆ ಹೆಚ್ಚು ಸಮಯ ಕಳೆಯುವಿರಿ. ಸಣ್ಣ ಮಾತುಗಳು ಜಗಳಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿರಿ. ಸಹನೆಯಿರಲಿ.
ಧನು
ಕೆಲಸದ ಬಗ್ಗೆ ಗಮನ ಕೊಡಿ. ಸಡಿಲ ಮಾತುಗಳು ಕೆಲಸ ಕೆಡಿಸಬಹುದು. ಮಾನಸಿಕ ಶಾಂತಿಗೆ ಉತ್ತಮ ಸಂಗೀತ ಕೇಳಿ. ಬಂಧು ಸಹಕಾರ.
ಮಕರ
ವೃತ್ತಿ ಕಾರ್ಯ ಬದಿಗಿಟ್ಟು ಮನೆಯವರ ಕಡೆ ಗಮನ ಕೊಡಿ. ಅವರು ಅದನ್ನು ಅಪೇಕ್ಷಿಸುತ್ತಾರೆ. ಭಾವುಕ ಒತ್ತಡ ಕಾಡಬಹುದು.
ಕುಂಭ
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ. ಭಾವುಕ ಏರುಪೇರು ಅನುಭವಿಸುವಿರಿ. ರಸ್ತೆಯಲ್ಲಿ ಎಚ್ಚರದಿಂದ ಚಲಿಸಿರಿ.
ಮೀನ
ಸಣ್ಣ ವೈ-ಲ್ಯಕ್ಕೆ ಕೈಚೆಲ್ಲಬೇಡಿ. ಮಾಡಬೇಕಾದ ಕಾರ್ಯ ಮುಗಿಸಲು ಗಮನ ಕೊಡಿ. ಆತ್ಮೀಯರ ಜತೆ ಕಾಲ ಕಳೆಯುವಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ