ಖಾಸಗಿ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಿ. ಸಣ್ಣದೆಂದು ಭಾವಿಸಿದ ಸಮಸ್ಯೆ ದೊಡ್ಡದಾದೀತು. ಅದಕ್ಕೆ ಅವಕಾಶ ಕೊಡದಿರಿ. ಕೌಟುಂಬಿಕ ಅಸಹಕಾರ.
ವೃಷಭ
ಹಳೆಯ ಶ್ರಮದ ಫಲ ಇಂದು ದೊರಕುವುದು. ಹಣದ ವಿಷಯದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಮುನಿಸಿ ದೂರವಾದವರು ಹತ್ತಿರವಾಗುವರು.
ಮಿಥುನ
ಸಮಸ್ಯೆ ಎದುರಿಸುವಿರಿ. ಕೆಲವರು ನಿಮ್ಮ ಸ್ಥೈರ್ಯ ಕೆಡಿಸಲು ಯತ್ನಿಸುವರು. ಅದಕ್ಕೆ ಗಮನ ಕೊಡದಿರಿ. ಸಮಸ್ಯೆ ನಿವಾರಣೆಗೆ ನಿಮ್ಮಲ್ಲೇ ದಾರಿಯಿದೆ.
ಕಟಕ
ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗಬಹುದು. ಆದರೆ ನಿಮ್ಮ ಹಳೆಯ ಆಪ್ತರನ್ನು ಮರೆಯದಿರಿ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಸಿಂಹ
ಸವಾಲಿಗೆ ಅಂಜಿ ಓಡದಿರಿ. ಅದನ್ನು ಧೈರ್ಯದಿಂದ ಎದುರಿಸಿ. ಯಶಸ್ಸು ನಿಮ್ಮದಾಗಲಿದೆ. ಸೂಕ್ತ ಸಹಾಯವೂ ದೊರಕುವುದು.
ಕನ್ಯಾ
ನಿಮ್ಮ ವಲಯದಲ್ಲಿರುವ ವ್ಯಕ್ತಿಯೊಬ್ಬರು ಇಂದು ವಿಚಿತ್ರವಾಗಿ ವರ್ತಿಸಬಹುದು. ನಿಮ್ಮ ಮೇಲೆ ಅದು ಪರಿಣಾಮ ಬೀರಬಹುದು. ಶಾಂತ ಮನಸ್ಥಿತಿ ಕಾಯ್ದುಕೊಳ್ಳಿ.
ತುಲಾ
ಉತ್ಸಾಹದ ದಿನ. ಮುಖ್ಯ ಕಾರ್ಯ ಸಫಲವಾದ ಸಂತೋಷ ಇತರರಿಗೆ ನೆರವು ನೀಡಿದ ತೃಪ್ತಿ
ಯನ್ನೂ ಅನುಭವಿ ಸುವಿರಿ. ಕೌಟುಂಬಿಕ ಉದ್ವಿಗ್ನತೆ ಶಮನ,
ವೃಶ್ಚಿಕ
ನಿಮ್ಮ ಸಮಸ್ಯೆ ಪರಿಹಾರಕ್ಕೆ ಹಲವರಿಂದ ಸಲಹೆ ಕೇಳಿಬಂದೀತು. ಎಲ್ಲವನ್ನೂ ತಿರಸ್ಕರಿಸದಿರಿ. ಕೆಲವು ನಿಮ್ಮ ನೆರವಿಗೆ ಬರಲೂಬಹುದು. ಧನ ಪ್ರಾಪ್ತಿ.
ಧನು
ನೆಗೆಟಿವ್ ಚಿಂತನೆ ಮನಸ್ಸನ್ನು ಬಾಧಿಸ ಬಹುದು. ಯಾವುದೋ ವಿಷಯ ಮನಸ್ಸು ಕೊರೆಯುವುದು. ಸಮಸ್ಯೆಗೆ ಪರಿಹಾರ ಮೊದಲು ಹುಡುಕಿರಿ.
ಮಕರ
ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಸಾಧ್ಯವಾದಷ್ಟು ಸಂತೋಷದಿಂದ ಇರಲು ಯತ್ನಿಸಿ. ಸಣ್ಣ ವಿಷಯ ಮನಸ್ಸು ಕಲಕಲು ಆಸ್ಪದ ಕೊಡದಿರಿ.
ಕುಂಭ
ವಿವಿಧ ವಿಷಯಗಳಲ್ಲಿ ಇಂದು ವ್ಯಸ್ತರಾಗುವಿರಿ. ಹಾಗಾಗಿ ಕೆಲವು ವಿಷಯಗಳಿಗೆ ಗಮನ ಕೊಡಲು ಸಾಧ್ಯವಾಗದು. ಹಾಗೆಂದು ಮುಖ್ಯ ವಿಷಯ ಕಡೆಗಣಿಸದಿರಿ.
ಮೀನ
ಒತ್ತಡ, ಉದ್ವಿಗ್ನತೆ ಇಂದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು. ಪ್ರೀತಿಯಲ್ಲಿ ವೈಫಲ್ಯ. ಮಾನಸಿಕ ಬೇಗುದಿ. ಆಪ್ತರಿಂದ ಸಾಂತ್ವನ.