ಮೇಷ
ಸ್ಥಗಿತಗೊಳಿಸಿದ್ದ ಕಾರ್ಯ ಮತ್ತೆ ಆರಂಭಿಸ ಬೇಕಾದ ಅನಿವಾರ್ಯತೆ. ಸಹೋದ್ಯೋಗಿಗಳ ಸಹಕಾರ. ಕೌಟುಂಬಿಕ ಉದ್ವಿಗ್ನತೆ ಶಮನ.
ವೃಷಭ
ದಿನದ ಜಂಜಡದಿಂದ ಮುಕ್ತಿ ಸಿಗಲಿದೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಆತ್ಮೀಯರ ಒಡನಾಟ. ಧನಪ್ರಾಪ್ತಿ ಸಾಧ್ಯತೆ.
ಮಿಥುನ
ನಿಮ್ಮ ಕಾರ್ಯತಂತ್ರ ಯಾರ ಜತೆಗೂ ಹೇಳದಿರಿ. ದೀರ್ಘಾವಧಿ ಯೋಜನೆಗೆ ಹಣ ಹಾಕಬೇಡಿ. ಲಾಭ ಸಿಗದು. ಹೆತ್ತವರ ಹಿತಾಸಕ್ತಿಗೆ ಗಮನ ಕೊಡಿ.
ಕಟಕ
ಆರೋಗ್ಯ ಕಾಳಜಿ ವಹಿಸಿ. ಆಹಾರ ಸೇವನೆ ಹಿತಮಿತವಾಗಿರಲಿ. ಸಂಗಾತಿ ಜತೆ ಭಿನ್ನಮತ ಸಂಭವ. ಅಧ್ಯಯನದಲ್ಲಿ ಯಶ. ಧನವ್ಯಯ ಅಧಿಕ.
ಸಿಂಹ
ಒತ್ತಡ. ಸಮಸ್ಯೆ. ಮನೆಯಲ್ಲಿ ಸಣ್ಣ ಜಗಳ ಆದೀತು. ಸಂಯಮ ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಹಿನ್ನಡೆ, ಧನಹಾನಿ ಸಂಭವ.
ಕನ್ಯಾ
ಕೌಟುಂಬಿಕ ಪರಿಸ್ಥಿತಿ ಆನಂದಕರ. ಆತ್ಮೀಯರ ಜತೆ ಕಾಲಕ್ಷೇಪ. ಆದಾಯದಲ್ಲಿ ಹೆಚ್ಚಳ. ಆರ್ಥಿಕ ಒತ್ತಡ ನಿವಾರಣೆ. ಆಪ್ತ ಬಂಧು ಭೇಟಿ.
ತುಲಾ
ಆರ್ಥಿಕ ಸ್ಥಿರತೆ. ಉಳಿತಾಯ ಹೆಚ್ಚಳ. ಸಂಜೆ ವೇಳೆಗೆ ವ್ಯವಹಾರದ ಒತ್ತಡದಿಂದ ದೂರವಾಗಿ ಕಾಲ ಕಳೆಯುವಿರಿ. ಆಪ್ತ ಹವ್ಯಾಸದಲ್ಲಿ ಖುಷಿ.
ವೃಶ್ಚಿಕ
ಸಂಗಾತಿ ಜತೆ ಅರಿತು ವ್ಯವಹರಿಸಿ. ಸಂಘರ್ಷಕ್ಕೆ ಆಸ್ಪದ ಕೊಡಬೇಡಿ. ಹೊಸ ವ್ಯವಹಾರ ಆರಂಭಕ್ಕೆ ಸಕಾಲ. ಸ್ವಂತ ಉದ್ದಿಮೆ ಹೊಂದಿದವರಿಗೆ ಲಾಭ.
ಧನು
ಕೋಪತಾಪ ನಿಯಂತ್ರಿಸಿ. ಇಲ್ಲವಾದರೆ ಜಗಳ ನಡೆದೀತು. ಮಾತಿಗೆ ಮಾತು ಕೂಡಿಸದಿರಿ. ವಿದ್ಯಾರ್ಥಿಗಳಿಗೆ ತುಸು ಹಿನ್ನಡೆ ಉಂಟಾದೀತು.
ಮಕರ
ನಿಮ್ಮ ಸುತ್ತ ಶಾಂತ ಪರಿಸ್ಥಿತಿ ಬೇಕಾದರೆ ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ. ಇತರರ ವರ್ತನೆ ಅಸಹನೀಯ ಅನಿಸಿದರೂ ಈ ದಿನ ಸುಮ್ಮಗುಳಿಯಿರಿ.
ಕುಂಭ
ಹೊಸ ಸವಾಲು ಎದುರಾಗಲಿದೆ. ಆದರೆ ಧೃತಿಗೆಡಬೇಡಿ. ಸೂಕ್ತ ಸಹಕಾರವೂ ಸಿಗಲಿದೆ. ಮನೆಯಲ್ಲಿ ವಿರಸ ಕಳೆದು ಸೌಹಾರ್ದತೆ ಮೂಡಲಿದೆ.
ಮೀನ
ಮನೆಯಲ್ಲಿ ಶಾಂತಿ ಬೇಕೆ? ನಿಮ್ಮ ನಡೆನುಡಿ ಪ್ರಾಮಾಣಿಕವಾಗಿರಲಿ. ವೃತ್ತಿಯಲ್ಲಿ ಸಣ್ಣ ಸಮಸ್ಯೆ. ದೊಡ್ಡ ಹಾನಿ ತರದಿದ್ದರೂ ಮನಸ್ಸಿಗೆ ಕಿರಿಕಿರಿ.
ದಿನಭವಿಷ್ಯ: ಇವತ್ತು ತುಂಬಾ ತಾಳ್ಮೆಯಿಂದ ಕೆಲಸ ಮಾಡಿ, ಜಾಸ್ತಿ ಕೋಪ ಮಾಡ್ಕೊಳ್ಬೇಡಿ
ಭವಿಷ್ಯ



