ಮೇಷ
ಕೌಟುಂಬಿಕ ಸಂಬಂಧ ಸುಧಾರಣೆ. ಮನಸ್ತಾಪ ನಿವಾರಣೆ. ಆಹಾರ ಹಿತಮಿತವಿರಲಿ.ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.
ವೃಷಭ
ಇತರರನ್ನು ಟೀಕಿಸಲು ಹೋಗದಿರಿ. ನೀವೇ ಟೀಕೆಗೆ ಗುರಿಯಾಗುವಿರಿ. ಸಣ್ಣ ಚಿಂತೆಯೊಂದು ಉಲ್ಬಣವಾದೀತು.
ಮಿಥುನ
ಎಲ್ಲರನ್ನು ಮೆಚ್ಚಿಸುವ ಪ್ರಯತ್ನ ಫಲ ನೀಡದು. ಕೆಲವರನ್ನು ಕಡೆಗಣಿಸಿ. ಕೌಟುಂಬಿಕ ಮನಸ್ತಾಪ ವಿಕೋಪಕ್ಕೆ ಕೊಂಡೊಯ್ಯದಿರಿ.
ಕಟಕ
ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ. ಬಿಗುಮಾನ ಬಿಟ್ಟು ವ್ಯವಹರಿಸಿ, ಸಂಧಾನ ಸಾಽಸಿ. ಆರ್ಥಿಕ ಒತ್ತಡ ಹೆಚ್ಚಲಿದೆ.
ಸಿಂಹ
ದೊಡ್ಡ ಸಮಸ್ಯೆ ಎದುರಾಗಲಿದೆ. ಪರಿಶ್ರಮ ಪಟ್ಟರೆ ಅದನ್ನು ಪರಿಹರಿಸಬಹುದು. ಕೈಚೆಲ್ಲಿ ಕೂರಬೇಡಿ. ಕೌಟುಂಬಿಕ ಸಹಕಾರ ಸಿಗಲಿದೆ.
ಕನ್ಯಾ
ವಿರೋಧಿಗಳಿಂದ ಅಪಪ್ರಚಾರ. ನೆಮ್ಮದಿ ಹಾಳಾದೀತು. ಸಮಾನ ಮನಸ್ಕರ ಸಂಗದಲ್ಲಿ ನೆಮ್ಮದಿ. ಪರೀಕ್ಷೆ ಎದುರಿಸುವವರಿಗೆ ಯಶ.
ತುಲಾ
ನಿಮಗೆ ಹಿತವೆನಿಸದ ಬೆಳವಣಿಗೆ. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ. ಮುನ್ನಡೆಯಿರಿ. ಅಸಹಕಾರ ಲೆಕ್ಕಿಸದಿರಿ.
ವೃಶ್ಚಿಕ
ಪ್ರಮುಖ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.
ಧನು
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಯೋಚಿಸಿ.
ಮಕರ
ಕೆಲವರ ವರ್ತನೆ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಧನಲಾಭ.
ಕುಂಭ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ನಿಮ್ಮ ಕಾರ್ಯ ಮಾಡಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು.
ಮೀನ
ವ್ಯವಹಾರ, ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಕೌಟುಂಬಿಕ ಕಲಹ ತಪ್ಪಿಸಿ. ಶೈಕ್ಷಣಿಕ ಅಭಿವೃದ್ಧಿ ಸಾಧನೆ. ಆರ್ಥಿಕ ಉನ್ನತಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ