ಮೇಷ.
ಹಿರಿಯರ ಜತೆ ವಿನಯದಿಂದ ವರ್ತಿಸಿ. ಕುಟುಂಬದ ಹಿತಾಸಕ್ತಿಗೆ ಗಮನ ಹರಿಸಿ. ಅನವಶ್ಯ ವೆಚ್ಚ ಹೆಚ್ಚಳ ಚಿಂತೆಗೆ ಕಾರಣವಾದೀತು.
ವೃಷಭ
ಇಂದು ಸಂತೋಷದ ಮನಸ್ಥಿತಿ. ನಿಮ್ಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ಆರ್ಥಿಕ ಪುರಸ್ಕಾರ. ಪ್ರೇಮಿಗಳ ಮಧ್ಯೆ ಅನವಶ್ಯ ವಿಷಯಕ್ಕೆ ಸಂಘರ್ಷವಾದೀತು.
ಮಿಥುನ
ಗ್ರಹಗತಿಯು ನಿಮಗೆ ಪ್ರತಿಕೂಲ ಪರಿಸ್ಥಿತಿ ಏರ್ಪಡುವುದನ್ನು ಸೂಚಿಸುತ್ತಿದೆ. ಹಾಗಾಗಿ ಎಚ್ಚರದಿಂದ ಕಾರ್ಯ ನಿರ್ವಹಿಸಿ, ಆತುರ ಬೇಡ.
ಕಟಕ
ಕ್ಷುಲ್ಲಕ ಕಲಹದಿಂದ ದೂರವಿರಿ. ನಿಮ್ಮ ಕೋಪತಾಪ ನಿಯಂತ್ರಿಸಿ. ಹಿನ್ನಡೆಗಳು ನಿಮ್ಮ ಎದೆಗುಂದಿಸದಿರಲಿ. ಆರ್ಥಿಕ ಒತ್ತಡ ಅಽಕ.
ಸಿಂಹ
ಇಂದು ನಿಮ್ಮ ಕೆಲಸಕ್ಕೆ ಅಡ್ಡಿ ಬರಲಿದೆ. ತಪ್ಪುಗಳಿಂದ ಪಾಠ ಕಲಿಯಿರಿ. ಹಠಮಾರಿ ಧೋರಣೆ ಬಿಟ್ಟಬಿಡಿ. ಕೌಟುಂಬಿಕ ವಾಗ್ವಾದ.
ಕನ್ಯಾ
ಏನೋ ಪ್ರಮುಖ ಕಾರ್ಯ ಕಣ್ಣ ಮುಂದಿದೆ. ಆದರೆ ಅದು ಸರಿಯಾಗಿ ಅನುಷ್ಠಾನಕ್ಕೆ ಬರದೆ ನಿರಾಶೆ. ಬಂಧುಗಳ ಸಹಕಾರ ಪಡೆಯಿರಿ.
ತುಲಾ
ಕೌಟುಂಬಿಕ ಒತ್ತಡ ಮನಸ್ಥಿತಿ ಶಾಂತಿಯನ್ನು ಕೆಡಿಸಬಹುದು. ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಲು ಯತ್ನಿಸಿ. ವ್ಯವಹಾರದಲ್ಲಿ ತೊಡಕು ನಿವಾರಣೆ, ಸಮಾಧಾನ.
ವೃಶ್ಚಿಕ
ಹಣದ ವಿಷಯದಲ್ಲಿ ಆತುರದ ಕ್ರಮ ತೆಗೆದು ಕೊಳ್ಳಬೇಡಿ. ಆಪ್ತರ ಹಿತವಚನಕ್ಕೆ ಕಿವಿಗೊಡಿ. ಆರೋಗ್ಯ ಸಮಸ್ಯೆಯಿಂದ ದೈಹಿಕ ಉದಾಸೀನತೆ.
ಧನು
ಆಪ್ತರ ಜತೆಗಿನ ಭಿನ್ನಮತ ಸೌಹಾರ್ದದಿಂದ ಪರಿಹರಿಸಿ. ಹಠ ಹಿಡಿಯಬೇಡಿ. ಆರೋಗ್ಯ ಸುಸ್ಥಿರ. ಆರ್ಥಿಕ ಸಮಸ್ಯೆ ನಿವಾರಣೆ.
ಮಕರ
ಮಾತಿನ ಮೇಲೆ ಹಿಡಿತವಿರಲಿ. ಕಟುಮಾತು ಸಂಬಂಧದ ಮೇಲೆ ಶಾಶ್ವತ ಪರಿಣಾಮ ಬೀರಬಹುದು.
ಕುಂಭ
ಪ್ರತಿಕೂಲ ಪರಿಸ್ಥಿತಿಗೆ ಭಾವಾವೇಶದ ಪ್ರತಿಕ್ರಿಯೆ ತೋರಬೇಡಿ. ಅದು ಕೋಲಾಹಲ ಸೃಷ್ಟಿಸಬಹುದು. ಸಂಯಮ ಅಗತ್ಯ.
ಮೀನ
ಕೆಲವು ನೆನಪು ನೋವು ತರಬಹುದು. ಹಳೆಯದನ್ನು ಮರೆತು ಮುಂದೆ ಸಾಗುವುದು ಹಿತಕರ. ಕುಟುಂಬಸ್ಥರ ಬೆಂಬಲ ಪಡೆಯಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ