ಮೇಷ
ನಿಮ್ಮ ಕ್ರಿಯಾಶೀಲತೆ ಮೆಚ್ಚುಗೆ ಪಡೆಯಲಿದೆ. ಮನೆಯಲ್ಲಿ ಉತ್ತಮ ಹೊಂದಾಣಿಕೆ. ಹಳೆಯ ಕಹಿ ತೊಲಗಲಿದೆ. ಹಣದ ಕೊರತೆ ನಿವಾರಣೆ.
ವೃಷಭ
ನೀವು ಬಯಸಿದ ಕಾರ್ಯ ಆಗಲಿದೆ. ಆದರೂ ಏನೋ ಕೊರತೆ ಬಾಧಿಸುವುದು. ಕೆಲವರ ಅಸಹಕಾರದಿಂದ ಅಸಹನೆ. ಮನೆಯಲ್ಲಿ ಅಶಾಂತಿ.
ಮಿಥುನ
ಎಲ್ಲವೂ ಸುಗಮ. ವೃತ್ತಿ ಕಾರ್ಯಕ್ಕೆ ಮೆಚ್ಚುಗೆ. ಅಪೇಕ್ಷಿತರಿಗೆ ವಿವಾಹ ಸಂಬಂಧ ಕೂಡಿಬರಬಹುದು. ಬಂಧು ಜತೆ ವಿರಸ.
ಕಟಕ
ವೃತ್ತಿಕ್ಷೇತ್ರದಲ್ಲಿ ಸೌಹಾರ್ದ ಪರಿಸರ. ಉದ್ವಿಗ್ನತೆ ನಿವಾರಣೆ. ಸಂಜೆ ವೇಳೆಗೆ ಆರ್ಥಿಕ ಲಾಭ ಪಡೆಯುವಿರಿ. ಆರೋಗ್ಯ ಸಮಸ್ಯೆ ಪರಿಹಾರ.
ಸಿಂಹ
ನಿಮಗೆ ಪೂರಕ ಬೆಳವಣಿಗೆ ಕಾಣುವಿರಿ. ಹಳೆಯ ಹೂಡಿಕೆ ಲಾಭ ತರಲಿದೆ. ಪ್ರೀತಿಯ ಅಹವಾಲಿಗೆ ಪೂರಕ ಸ್ಪಂದನೆ ಸಿಗುವುದು.
ಕನ್ಯಾ
ವೃತ್ತಿಯಲ್ಲಿ ಉನ್ನತಿ. ನಿಮ್ಮ ನೆಗೆಟಿವ್ ಮನಸ್ಥಿತಿ ಬದಲಿಸುವ ಬೆಳವಣಿಗೆ ಉಂಟಾಗಲಿದೆ. ಆರ್ಥಿಕ ಪರಿಸ್ಥಿತಿ ಮೇಲೆ ಪೂರ್ಣ ನಿಯಂತ್ರಣ ಸಿಗುವುದು.
ತುಲಾ
ತೃಪ್ತಿಕರ ದಿನ. ಅವಿಸ್ಮರಣೀಯ ಕ್ಷಣ ದಾಖಲಾಗಬಹುದು. ಅನವಶ್ಯ ವಸ್ತು ಖರೀದಿಗೆ ಹೋಗದಿರಿ. ವೆಚ್ಚಕ್ಕೆ ಕಡಿವಾಣ ಹಾಕಿರಿ.
ವೃಶ್ಚಿಕ
ವೃತ್ತಿಯಲ್ಲಿ ಪ್ರಸಿದ್ಧಿ ಪಡೆಯುವಿರಿ. ನಿಮ್ಮೊಡನೆ ಮುನಿದವರು ಪ್ರಿಯರಾಗುವರು. ಆರ್ಥಿಕ ವಿಚಾರದಲ್ಲಿ ಅದೃಷ್ಟ ನಿಮ್ಮೊಂದಿಗಿದೆ.
ಧನು
ಕೌಟುಂಬಿಕ ಪರಿಸರದಲ್ಲಿ ಉದ್ನಿಗ್ನತೆ. ಅದನ್ನು ತಣ್ಣಗಾಗಿಸಲು ಆದ್ಯತೆ ಕೊಡಿ. ನಿಮ್ಮ ಕಠಿಣ ನಿಲುವು ಸಡಿಲಿಸಿ. ವೃತ್ತಿಯಲ್ಲಿ ಏರುಪೇರು.
ಮಕರ
ಈ ದಿನ ನಿಮಗೆ ಪೂರಕವಾಗಿಲ್ಲ. ಹಿನ್ನಡೆ ಅನುಭವಿಸುವಿರಿ. ಹೂಡಿಕೆಯಲ್ಲಿ ನಷ್ಟ ಉಂಟಾದೀತು. ಹೆಚ್ಚು ಕಾರ್ಯವೆಸಗದಿರಿ.
ಕುಂಭ
ವೃತ್ತಿಯ ಒತ್ತಡ, ಕೌಟುಂಬಿಕ ಜವಾಬ್ದಾರಿ ಹೊರೆ ಅನಿಸಬಹುದು. ಸಮಾಧಾನದಿಂದ ವರ್ತಿಸಿ. ಕ್ಷುಲ್ಲಕ ಕಾರಣಕ್ಕೆ ಹೆಚ್ಚು ಚಿಂತಿಸಲು ಹೋಗಬೇಡಿ.
ಮೀನ
ಖುಷಿ ಪಡಲು ಕಲಿಯಿರಿ. ಸಣ್ಣ ವಿಷಯಕ್ಕೂ ಅತಿಯಾಗಿ ಚಿಂತಿಸಿ ಸಂತೋಷ ಹಾಳು ಮಾಡಿಕೊಳ್ಳುವಿರಿ. ದೈಹಿಕ ನೋವು ಸಂಭವ.



