ಮೇಷ
ನಿಮ್ಮ ಉದ್ದೇಶ ಈಡೇರಲಿದೆ. ಉತ್ಸಾಹದ ದಿನ. ದೀರ್ಘ ಕಾಲದಿಂದ ಕಾಯುತ್ತಿದ್ದ ಧನ ಪ್ರಾಪ್ತಿ ಆಗಲಿದೆ. ಆರೋಗ್ಯ ಸಮಸ್ಯೆ ನಿವಾರಣೆ.
ವೃಷಭ
ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಸಂಗಾತಿ ಜತೆ ಹೊಂದಾಣಿಕೆ. ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಜತೆಗೇ ಖರ್ಚೂ ಹೆಚ್ಚಬಹುದು.
ಮಿಥುನ
ವಿರಾಮ ಪಡೆಯ ಬಯಸಿದರೂ ಕೆಲಸದ ಒತ್ತಡ ಕಡಿಮೆಯಾಗದು. ಸಂಗಾತಿ ಜತೆಗೆ ಭಿನ್ನಮತ ಸಂಭವ. ಆರ್ಥಿಕವಾಗಿ ತೃಪ್ತಿಕರ ಬೆಳವಣಿಗೆ.
ಕಟಕ
ಸರಿಯಾದ ದಿಕ್ಕಿನಲ್ಲಿ ನಿಮ್ಮ ಶ್ರಮ ವಹಿಸಿ. ಇಲ್ಲವಾದರೆ ಪ್ರಯತ್ನ ವ್ಯರ್ಥವಾದೀತು. ಕೌಟುಂಬಿಕ ವಾಗ್ವಾದ ಸಂಭವ. ಸಹನೆಯಿರಲಿ.
ಸಿಂಹ
ನಿಮ್ಮ ಕಾರ್ಯಶೈಲಿ ಪ್ರಶ್ನಿಸಲ್ಪಡಬಹುದು. ತಪ್ಪಿದ್ದರೆ ತಿದ್ದಿಕೊಳ್ಳಿ. ನೆರೆಯವರ ಜತೆ ಸಂಘರ್ಷಕ್ಕೆ ಇಳಿಯದಿರಿ. ಅಽಕ ವ್ಯಯ.
ಕನ್ಯಾ
ಉದ್ದೇಶಿತ ಕಾರ್ಯ ಇಂದು ಪೂರ್ಣಗೊಳ್ಳದು. ಅನುಚಿತ ಮಾತು ಜಗಳಕ್ಕೆ ಕಾರಣವಾದೀತು. ನಡೆನುಡಿಯಲ್ಲಿ ಎಚ್ಚರ ವಹಿಸಿ. ಧನಪ್ರಾಪ್ತಿಯಿದೆ.
ತುಲಾ
ಅಽಕ ಕೆಲಸದ ಒತ್ತಡ. ಅಽಕ ವ್ಯಯ. ಆದರೆ ಅದು ಉಪಯುಕ್ತ ಕಾರ್ಯಕ್ಕೆ ಆಗಿರುವುದರಿಂದ ಚಿಂತೆ ತಾರದು.
ವೃಶ್ಚಿಕ
ಯಶಸ್ವಿ ದಿನ. ಕಾರ್ಯದಲ್ಲಿ ಸಫಲತೆ. ಮನೆಯಲ್ಲಿ ಕಠಿಣ ಮಾತು ಆಡದಿರಿ. ವಾತಾವರಣ ಹಾಳಾದೀತು. ಆರ್ಥಿಕ ಪರಿಸ್ಥಿತಿ ಉತ್ತಮ.
ಧನು
ಆಪ್ತರ ಜತೆ ಮೂಡಿದ್ದ ವಿರಸ ಸರಿಪಡಿಸಲು ಯತ್ನಿಸಿ. ವ್ಯವಹಾರದಲ್ಲಿ ಲಾಭ. ಧನಪ್ರಾಪ್ತಿ. ಆರೋಗ್ಯ ಪರಿಸ್ಥಿತಿ ಸುಸ್ಥಿರ.
ಮಕರ
ನಿಮ್ಮ ಕೌಶಲಕ್ಕೆ ಮನ್ನಣೆ ದೊರಕಲಿದೆ. ವೃತ್ತಿ ಸಂಬಂಧ ಪಯಣ ಸಂಭವ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಧನವ್ಯಯ ಹೆಚ್ಚು.
ಕುಂಭ
ಇತರರ ಮೆಚ್ಚುಗೆಗೆ ಕಾಯದೆ ನಿಮ್ಮ ಕೆಲಸ ಮಾಡಿರಿ. ನಿಮ್ಮ ಕಾರ್ಯ ಗುರುತಿಸುತ್ತಿಲ್ಲ ಎಂಬ ಚಿಂತೆ ಬಿಡಿ. ಮುಂದೆ ನಿಮಗೆ ಒಳಿತು ಕಾದಿದೆ.
ಮೀನ
ನಿಮ್ಮ ಅಭಿಪ್ರಾಯ ಮಂಡನೆಗೆ ಮನ್ನಣೆ ಸಿಗಲಿದೆ. ಕೆಲವು ಬೆಳವಣಿಗೆ ಮಾನಸಿಕ ಒತ್ತಡ, ಅಶಾಂತಿಗೆ ಕಾರಣವಾದೀತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ