September 21, 2026
Monday, September 21, 2026
spot_img

ದಿನಭವಿಷ್ಯ: ಸಹನೆಯೇ ನಿಮ್ಮ ನಿಜವಾದ ಶಕ್ತಿ, ಧೈರ್ಯಗೆಡದಿರಿ ದೈವಬಲ ನಿಮ್ಮೊಂದಿಗಿದೆ

ಮೇಷ
ವ್ಯವಹಾರದಲ್ಲಿ ತೊಡಕು. ನಿಮ್ಮ ಪ್ರಗತಿಗೆ ಹೆಚ್ಚಿನ ಅವಕಾಶ ಸಿಗದು. ಕೆಲವರ ಜತೆ ಸಂಘರ್ಷ. ಸಹನೆ ಕಾಯ್ದುಕೊಳ್ಳಿ. ಕೌಟುಂಬಿಕ ಸಮಾಧಾನ.
ವೃಷಭ
ಧೈರ್ಯಗೆಡಬೇಡಿ. ಎಂತಹ ಪ್ರತಿಕೂಲ ಪರಿಸ್ಥಿತಿ ಎದುರಾದರೂ ದೇವರ ಕೃಪೆ ನಿಮಗಿದೆ. ಶಾಂತಿ, ಸಹನೆ ಕಾಯ್ದುಕೊಳ್ಳಿ. ಎಲ್ಲ ಸರಿಯಾಗಲಿದೆ.
ಮಿಥುನ
ತುಸು ಕ್ಲಿಷ್ಟಕರ ದಿನ. ವೃತ್ತಿ ಒತ್ತಡ ದೈಹಿಕ ಸುಸ್ತಿಗೂ ಕಾರಣ ವಾದೀತು. ಕೆಲ ವಿಷಯ ಮಾನಸಿಕ ಗೊಂದಲ ಸೃಷ್ಟಿಸುವುದು.
ಕಟಕ
ನಿಮ್ಮ ಕಾರ್ಯ ಸಾಧಿಸಲ್ಪಡಲಿದೆ ಆದರೆ ವಿಳಂಬವಾಗಿ. ಸಂಬಂಧದಲ್ಲಿ ಒಡಕು. ತೈಲಖಾದ್ಯ ಆರೋಗ್ಯ ಕೆಡಿಸಬಹುದು.
ಸಿಂಹ
ವೃತ್ತಿಯಲ್ಲಿ ಏರಿಳಿತ ಎದುರಿಸುವಿರಿ. ಲಕ್ಷ್ಯ ಕಡಿಮೆ ಮಾಡದಿರಿ. ಧಾರ್ಮಿಕ ಕ್ಷೇತ್ರ ಭೇಟಿ ನಿರಾಳತೆ ತರುವುದು. ಆರ್ಥಿಕ ಹಿನ್ನಡೆ.
ಕನ್ಯಾ
ಕಠಿಣ ದಿನ. ಹೆಚ್ಚು ಹೊಣೆಗಾರಿಕೆ. ಉತ್ಸಾಹ ತರುವ ಇತರ ಕಾರ್ಯದಲ್ಲಿ ತೊಡಗಿ. ಆರ್ಥಿಕ ಪ್ರಗತಿ ನಿರೀಕ್ಷಿಸಿದಷ್ಟು ಆಗದು.
ತುಲಾ
ಉತ್ಸಾಹಪೂರ್ಣ ದಿನ. ಕಾರ್ಯ ಸಫಲತೆ. ಸಂಗಾತಿ ಜತೆಗಿನ ಭಿನ್ನಮತ ಬಗೆಹರಿಸಿ. ವ್ಯವಹಾರ ಉನ್ನತಿಗೆ ಹೊಸ ಯೋಜನೆ ಹಾಕಿಕೊಳ್ಳಿ.
ವೃಶ್ಚಿಕ
ದೈನಂದಿನ ವ್ಯವಹಾರದಲ್ಲಿ ಬದಲಾವಣೆ ಸಂಭವ. ನಿರೀಕ್ಷೆಗಿಂತ ಹೆಚ್ಚು ಕೆಲಸದ ಒತ್ತಡ. ಸಂಜೆ ವೇಳೆಗೆ ಎಲ್ಲ ಸುಸೂತ್ರವಾಗಲಿದೆ.
ಧನು
ವೃತ್ತಿ ಕಾರ್ಯದಲ್ಲಿ ಪೂರ್ಣ ಮಗ್ನರು. ಇತರ ವಿಷಯಕ್ಕೆ ಗಮನ ಹರಿಯದು. ಕುಟುಂಬದ ಸಮಸ್ಯೆಗೂ ಗಮನ ಕೊಡಿ. ಆರ್ಥಿಕ ಒತ್ತಡ.
ಮಕರ
ವೃತ್ತಿಯಲ್ಲಿ ಮತ್ತು ಮನೆಯಲ್ಲಿ ಕಠಿಣ ದಿನ. ಸುಗಮವಾಗಿ ಸಾಗದು. ಅನಿರೀಕ್ಷಿತ ಪಯಣ. ಕ್ಲಪ್ತ ಕಾಲದಲ್ಲಿ ಆಹಾರ ಸೇವಿಸಿ. ಆರೋಗ್ಯ ಕಾಯ್ದುಕೊಳ್ಳಿ.
ಕುಂಭ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಒತ್ತಡಕ್ಕೆ ಸಿಲುಕುವಿರಿ. ಸಣ್ಣಪುಟ್ಟ ಚಿಂತೆ ಸದಾ ಕಾಡುತ್ತಿರುತ್ತದೆ. ಆಂಜನೇಯನ ಭಜಿಸಿ.
ಮೀನ
ಹೆಚ್ಚು ಪರಿಶ್ರಮ ಪಟ್ಟು ನಿಮ್ಮ ಸಾಮರ್ಥ್ಯ ತೋರ್ಪಡಿಸಿ. ಟೀಕೆಗಳಿಗೆ ಉತ್ತರ ಕೊಡಿ. ಕೆಲವರಿಗೆ ಕಾಲು, ಸೊಂಟ ನೋವು ಕಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !