August 8, 2026
Saturday, August 8, 2026
spot_img

ದಿನಭವಿಷ್ಯ: ತಾಳ್ಮೆಯೇ ನಿಮ್ಮ ನಿಜವಾದ ಶಕ್ತಿ, ಒಳ್ಳೆಯ ದಿನಗಳು ಶೀಘ್ರದಲ್ಲೇ ಬರಲಿವೆ

ಮೇಷ
ತಾಳ್ಮೆಯೇ ಇಂದು ನಿಮಗೆ ಶಕ್ತಿದಾಯಕ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕದಿರಬಹುದು. ಅಸಹನೆ, ಹತಾಶೆ ಬೇಡ. ಒಳ್ಳೆ ದಿನ ಬರಲಿದೆ.
ವೃಷಭ
ನಿಮ್ಮ ಸಾಮರ್ಥ್ಯ ಸರಿಯಾಗಿ ಬಳಸುತ್ತಿಲ್ಲ. ಅದರಿಂದ ಹಿನ್ನಡೆ. ಆಶಾವಾದದಿಂದ ಕಾರ್ಯ ಎಸಗಿ. ದೈವಬಲ ನಿಮಗಿದೆ. ಒಳಿತಾಗಲಿದೆ.
ಮಿಥುನ
ನಿಮ್ಮ ಸಂಕಟ ಕಾಲದಲ್ಲಿ ಅನಿರೀಕ್ಷಿತ ನೆರವು ಒದಗಲಿದೆ. ಉತ್ತಮ ಮಾರ್ಗದರ್ಶನ ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು.
ಕಟಕ
ಶಿಕ್ಷಣ, ವೃತ್ತಿ ಅಥವಾ ವೃತ್ತಿಯಲ್ಲಿ ಹೊಸ ಅವಕಾಶ. ಯೋಚಿಸಿ ಮುಂದೆ ಹೆಜ್ಜೆ ಇಡಿ. ಮನೆಯವರ ಜತೆ ಭಾವನಾತ್ಮಕ ತಾಕಲಾಟ.
ಸಿಂಹ
ಭಾವುಕರಾಗಿ ನಿರ್ಧಾರ ತಾಳದಿರಿ. ನಿಮ್ಮ ವಿವೇಕ ಮರೆಸಬಹುದು. ಪ್ರಾಕ್ಟಿಕಲ್ ಆಗಿ ಯೋಚಿಸಿರಿ. ಬಂಧು ಜತೆ ನಿಷ್ಟುರವಾದೀತು.
ಕನ್ಯಾ
ಸ್ಥಿರತೆ, ಭದ್ರತೆ, ಮಾನಸಿಕ ನಿರಾಳತೆ ಇವು ಇಂದಿನ ನಿಮ್ಮ ಸ್ಥಿತಿ. ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸದು. ಸಾಂಸಾರಿಕ ತಾಪತ್ರಯ ಅಂತ್ಯ.
ತುಲಾ
ಒತ್ತಡದ ಅಧ್ಯಾಯ ಮುಗಿದು ನೆಮ್ಮದಿಯ ಅಧ್ಯಾಯ ಆರಂಭ. ದೊಡ್ಡ ಕಿರಿಕಿರಿಯೊಂದು ಪರಿಹಾರ. ಆತ್ಮೀಯರ ಸಹಕಾರ, ನೆರವು.
ವೃಶ್ಚಿಕ
ಸಂತೋಷ ಪಡುವ ಸನ್ನಿವೇಶ ನಿರ್ಮಾಣ. ಅದಕ್ಕೆ ಸ್ಪಂದಿಸಿ. ಸಮಸ್ಯೆಗೆ ಮುದುರುತ್ತಾ ಕೂರದಿರಿ. ಅವಶ್ಯ ಬೆಂಬಲ ಸಿಗಲಿದೆ. ಕೌಟುಂಬಿಕ ಸಹಕಾರ.
ಧನು
ಸಮಸ್ಯೆಯನ್ನು ಎದುರಿಸದೆ ಓಡಿ ಹೋಗಬೇಡಿ. ಅದನ್ನು ದಿಟ್ಟವಾಗಿ ಎದುರಿಸಿ. ಈ ದಿನ ನಿಮ್ಮ ಪ್ರಯತ್ನಕ್ಕೆ ಸಫಲತೆ ಸಿಗಲಿದೆ.
ಮಕರ
ಸಂಘರ್ಷಕ್ಕೆ ಸಂಧಾನಾತ್ಮಕ ಪರಿಹಾರ ಹುಡುಕಿ. ಉಳಿದ ಕ್ರಮ ಫಲ ನೀಡಲಾರದು. ಸತ್ಯ ಹೇಳುವವರನ್ನು ಖಂಡಿಸಬೇಡಿ.
ಕುಂಭ
ಯಾವುದೇ ವಿಚಾರ ಸರಿಯಾಗಿ ಪರಾಮರ್ಶೆ ನಡೆಸಿ. ನಿಮ್ಮ ಪರಿಸ್ಥಿತಿ ಹೊಸ ಆಯಾಮದಲ್ಲಿ ಕಾಣಿಸೀತು. ಆತುರದ ನಿರ್ಣಯ ಬೇಡ.
ಮೀನ
ಆಶಾವಾದ, ವಿಶ್ವಾಸ ಇವು ಇಂದಿನ ಮನಸ್ಥಿತಿ. ವೈಯಕ್ತಿಕ ಸಾಧನೆಯ ತೃಪ್ತಿ. ಇತರರ ಸಂಕಟಕ್ಕೆ ಮರುಗುವಿರಿ. ಕೌಟುಂಬಿಕ ಸಮಾಧಾನ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !