ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಡೆನುಡಿಯಲ್ಲಿ ಎಚ್ಚರ ವಹಿಸಿ. ಕೆಲವರು ನಿಮ್ಮ ಹಸ್ತಕ್ಷೇಪ ಸಹಿಸಲಾರರು. ಬಂಧುಗಳ ಅಸಮಾಧಾನ. ಹಳೆಯ ಸ್ನೇಹಿತರ ಭೇಟಿ ಸಂಭವ.
ವೃಷಭ
ಮನಶ್ಯಾಂತಿ ಹಾಳು ಮಾಡುವ ಪ್ರಸಂಗ ಎದುರಿಸುವಿರಿ. ಆಪ್ತರ ಅಸಹಕಾರ, ವಾಗ್ಯುದ್ಧ. ಸಹನೆಯ ವರ್ತನೆ ನಿಮ್ಮಿಂದ ಅವಶ್ಯ.
ಮಿಥುನ
ಭಾವನಾತ್ಮಕ ಏರುಪೇರು. ಆಪ್ತರ ಜತೆಗೆ ವಾಗ್ಯುದ್ಧ. ವ್ಯವಹಾರದಲ್ಲಿ  ನಿಮಗೆ ಪ್ರತಿಕೂಲ ಬೆಳವಣಿಗೆ. ಸಹನೆಯಿಂದ ವ್ಯವಹರಿಸಿರಿ.
ಕಟಕ
ಆರ್ಥಿಕ ಸಂಕಷ್ಟ ಬಂದರೂ ಅದು ಕ್ಷಿಪ್ರ ನಿವಾರಣೆಯಾಗಲಿದೆ.  ಕೌಟುಂಬಿಕ ಸಮಾಧಾನ.ಮಕ್ಕಳಿಂದ ಸಂತೋಷ. ಬಂಧು ಭೇಟಿ.
ಸಿಂಹ
ಸಣ್ಣದೊಂದು ಸಮಸ್ಯೆ ಮನಸ್ಸು ಹಾಳು ಮಾಡುವುದು. ಅದಕ್ಕೆ ಪರಿಹಾರ ಕಷ್ಟವಲ್ಲ. ನೀವು ಮುಂದುವರಿಯುವ ಧೈರ್ಯ ತೋರಬೇಕು.
ಕನ್ಯಾ
ಗ್ರಹಗತಿ ತುಂಬ ಪೂರಕವಾಗಿಲ್ಲ. ಹಾಗಾಗಿ ಇಲ್ಲದ ಸಮಸ್ಯೆ ತಾನಾಗಿ ಸೃಷ್ಟಿಯಾದೀತು. ಪ್ರಮುಖ ಕಾರ್ಯಕ್ಕೆ ಕೈಹಾಕಬೇಡಿ.
ತುಲಾ
ಹಲವು ಬಗೆಯ ಒತ್ತಡ. ಯಾವ ರೀತಿ ಕಾರ್ಯಾಚರಿಸಬೇಕು ಎಂದು ಅರಿಯದ ಗೊಂದಲ. ಚಿಂತೆ ಬೇಡ, ಇದೆಲ್ಲ ತಾತ್ಕಾಲಿಕ.
ವೃಶ್ಚಿಕ
ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ. ಸಮಸ್ಯೆಯೊಂದು  ಪರಿಹಾರ ಕಾಣುವುದು. ಸಾಂಸಾರಿಕ ಬಿಕ್ಕಟ್ಟು ನಿವಾರಣೆ.
ಧನು
ನಿಮ್ಮ ವಿರೋಧಗಳು ನಿಮಗೆ ಬಗ್ಗುವ  ಪ್ರಸಂಗ ಬರಲಿದೆ. ಕಠಿಣ ಕಾರ್ಯದಲ್ಲಿ ಸಫಲತೆ.ಹಣದ ಒತ್ತಡ ನಿವಾರಣೆ.  ಬಂಧುಗಳ ಸಹಕಾರ.
ಮಕರ
ವಾದವಿವಾದದಿಂದ ಇಂದು ದೂರವಿರಿ. ಇತರರ ವಿಷಯದಲ್ಲಿ ಮೂಗು ತೂರಿಸದಿರಿ. ನಿಮ್ಮ ವ್ಯವಹಾರ ಮಾತ್ರ ನೋಡಿಕೊಳ್ಳಿ.
ಕುಂಭ
ಬಾಕಿ ಉಳಿದ ಕಾರ್ಯ ಪೂರ್ಣಗೊಳಿಸಿ. ಅನವಶ್ಯ ವಿಳಂಬ ಸಲ್ಲದು. ಮಕ್ಕಳು ಹೆಮ್ಮೆ ತರುವ ಕಾರ್ಯ ಎಸಗುವರು. ಉದ್ಯಮದಲ್ಲಿ ಯಶಸ್ಸು.
ಮೀನ
ಆತ್ಮೀಯರೊಂದಿಗೆ ಹೊಣೆಯರಿತು ವರ್ತಿಸಿ. ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ಎಚ್ಚರ ವಹಿಸಿ.  ಅಽಕ ಖರ್ಚಿನ ಹೊರೆ. ಬಂಧುಗಳ ಸಮ್ಮಿಲನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!