ಮೇಷ
ಕುಟುಂಬದ ಬಂಧುತ್ವ ಬಲಗೊಳ್ಳಲಿದೆ. ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆರೋಗ್ಯಕ್ಕೆ ಗಮನ ಕೊಡಿ.
ವೃಷಭ
ಬದಲಾವಣೆ ವಿರೋಽಸುವುದಕ್ಕಿಂತ ಅದಕ್ಕೆ ಹೊಂದಿಕೊಳ್ಳು ವುದು ಒಳ್ಳೆಯದು. ಪ್ರಭಾವಿ ವ್ಯಕ್ತಿಯ ಸಂರ್ಪಕ ಸಾಧ್ಯತೆ.
ಮಿಥುನ
ಮೇಲುಗೈ ಸಾಽಸಲು ಅನ್ಯರ ಜತೆ ಪೈಪೋಟಿ ನಡೆಯಲಿದೆ. ವೃತ್ತಿಪರವಾಗಿ ಪರಿಸ್ಥಿತಿ ನಿಭಾಯಿಸಿ. ಹಳೆಯ ತಪ್ಪು ಮತ್ತೆ ಎಸಗಬೇಡಿ.
ಕಟಕ
ಭಾವನಾತ್ಮಕ ಏರುಪೇರು. ನಿಮ್ಮ ಹಿತ ಕಾಯ್ದುಕೊಳ್ಳಿ. ಕೆಲವರ ಪ್ರಚೋದನೆಗೆ ಬಲಿಯಾಗದಿರಿ. ಕೌಟುಂಬಿಕ ವಾಗ್ವಾದ.
ಸಿಂಹ
ಹೆತ್ತವರು ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಖರ್ಚು ಹೆಚ್ಚಲಿದೆ. ಆತ್ಮೀಯರ ಜತೆ ಕಾಲ ಕಳೆಯಲು ಮೀನಮೇಷ ಎಣಿಸದಿರಿ.
ಕನ್ಯಾ
ಉತ್ಸಾಹದ ದಿನ. ಎಲ್ಲ ಕಾರ್ಯ ಸುಗಮ. ನಿಮ್ಮ ಹಾಸ್ಯಪ್ರಜ್ಞೆ ಬಿಕ್ಕಟ್ಟು ನಿವಾರಿಸಲು ನೆರವಾಗಲಿದೆ. ಕೌಟುಂಬಿಕ ಸಮರಸತೆ.
ತುಲಾ
ಸ್ನೇಹಕ್ಕೆ ಆದ್ಯತೆ ನೀಡುವಿರಿ. ಆದರೆ ನೆನಪಿಡಿ, ಎಲ್ಲರೂ ಶುದ್ಧ ಹೃದಯದವರಲ್ಲ. ಹಿರಿಯರ ಜತೆ ಹೆಚ್ಚು ಕಾಲ ಕಳೆಯಿರಿ.
ವೃಶ್ಚಿಕ
ಆಂತರಿಕ ತುಮುಲ. ದಿನವಿಡೀ ಅಸಹನೀಯತೆ.ದಿನದ ಅಂತ್ಯಕ್ಕೆ ಮನಸ್ಸು ತಹಬಂದಿಗೆ ಬರುವುದು. ದೇವರ ಪ್ರಾರ್ಥನೆ ಮಾಡಿ.
ಧನು
ನಿಮ್ಮ ಸತ್ಕಾರ್ಯ ಎಲ್ಲರ ಗಮನಕ್ಕೆ ಬರಲಿದೆ. ಇತರರ ಪ್ರಚೋದನೆಗೆ ಒಳಗಾಗಿ ದುಂದುವೆಚ್ಚ ಮಾಡಬೇಡಿ. ಕೌಟುಂಬಿಕ ಉದ್ವಿಗ್ನತೆ ಶಮನ.
ಮಕರ
ಆರ್ಥಿಕ ಉನ್ನತಿ. ವ್ಯವಹಾರದಲ್ಲಿ ಯಶಸ್ಸು. ಕಾಡುತ್ತಿದ್ದ ದೈಹಿಕ ನೋವು ನಿವಾರಣೆ. ಕೌಟುಂಬಿಕ ವ್ಯವಹಾರದಲ್ಲಿ ಸಹನೆಯಿಂದ ವರ್ತಿಸಿ.
ಕುಂಭ
ನಿಮ್ಮ ಉದ್ದೇಶ ಸಾಽಸಲು ಕಠಿಣ ಪರಿಶ್ರಮ ಅವಶ್ಯ. ಸಂಗಾತಿ ಜತೆಗಿನ ಭಿನ್ನಮತ ಶಮನ, ಸಹಕಾರ ವೃದ್ಧಿ. ಖರೀದಿ ಹುಮ್ಮಸ್ಸು, ಧನವ್ಯಯ.
ಮೀನ
ಗ್ರಹಗತಿಯು ಕೌಟುಂಬಿಕ ಸಾಮರಸ್ಯಕ್ಕೆ ಕಾರಣವಾಗಲಿದೆ. ಹಿರಿಯರಿಂದ ಮೆಚ್ಚುಗೆ. ಸ್ನೇಹಿತರ ಸಹಕಾರ, ಕಠಿಣ ಕಾರ್ಯ ಪೂರೈಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ