ಮೇಷ
ಕಾರ್‍ಯಗತವಾಗುವ ಕೆಲಸಕ್ಕಷ್ಟೆ ಗಮನ ಕೊಡಿ. ವೃಥಾ ಶ್ರಮ ವ್ಯಯಿಸಬೇಡಿ. ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿ.
ವೃಷಭ
ಭವಿಷ್ಯದ ಬಗ್ಗೆ ಚಿಂತೆ. ನೀವಾಗಿ ಒತ್ತಡ ಸೃಷ್ಟಿಸಿಕೊಳ್ಳುವಿರಿ. ಹರ್ಷಚಿತ್ತ ವ್ಯಕ್ತಿಗಳ ಜತೆ ಕಾಲ ಕಳೆಯಿರಿ. ತೊಡೆ ನೋವು ಕಾಡಬಹುದು.
ಮಿಥುನ
ಸಮಸ್ಯೆ ಇಲ್ಲದ ಸಹಜ ದಿನ. ಆಪ್ತರ ಜತೆ ಬೆರೆಯುವ ಅವಕಾಶ. ಸಾಮೂಹಿಕ ಕಾರ್ಯ ಸಂತೋಷ ತರುವುದು. ಬಂಧು ಭೇಟಿ.
ಕಟಕ
ಜೀವನದ ಸುಂದರ ವಿಷಯಗಳತ್ತ ಗಮನ ಹರಿಸಿ. ಚಿಂತೆ ತಾನಾಗಿ ತೊಲಗುವುದು. ಆಹಾರ ಸೇವನೆಯಲ್ಲಿ ಹಿತಮಿತವಿರಲಿ.
ಸಿಂಹ
ಉದ್ದೇಶಿಸಿದ ಕಾರ್ಯ ಕೈಗೂಡದು. ಹಾಗೆಂದು ನಿರಾಶೆ ಬೇಡ. ಮತ್ತೊಮ್ಮೆ ಪ್ರಯತ್ನಿಸಿ. ಅಡ್ಡಿಗಳನ್ನು ಮೊದಲು ನಿವಾರಿಸಿಕೊಳ್ಳಿ.
ಕನ್ಯಾ
ಆರಂಭಿಸಿದ ಕಾರ್ಯ ಮುಗಿಸಿಕೊಳ್ಳಿ. ಬಾಕಿ ಇಡಬೇಡಿ. ಭಾವುಕತೆ ನಿಯಂತ್ರಿಸಿ, ವಿವೇಕ ಪ್ರದರ್ಶಿಸಿ. ಆಪ್ತರಿಂದ ನೋವು.
ತುಲಾ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಬಂಧುಗಳ ಜತೆ ವ್ಯವಹಾರ ಸರಿಯಾಗಿ ಸಾಗದು. ಅಜೀರ್ಣ ಸಮಸ್ಯೆ ಕಾಡಲಿದೆ. ಸೊತ್ತು ನಷ್ಟ ಸಂಭವ.
ವೃಶ್ಚಿಕ
ಭಾವನಾತ್ಮಕ ಏರುಪೇರು. ಕೆಲ ವಿಚಾರ ಮನಸ್ಸು ಕೊರೆಯುವುದು. ವಾಸ್ತವದಲ್ಲಿ ಚಿಂತೆ ಅನಗತ್ಯ. ನಿಮಗೆ ಪೂರಕ ಪರಿಸ್ಥಿತಿ ಉದ್ಭವಿಸಲಿದೆ.
ಧನು
ಪ್ರತಿಕೂಲ ಸನ್ನಿವೇಶ ಎದುರಾದರೆ ಸ್ಥೈರ್ಯ ಕಳಕೊಳ್ಳದಿರಿ. ಶೀಘ್ರವೇ ಎಲ್ಲ ಸರಿಯಾಗಲಿದೆ. ವಿರೋಽಗಳು ನಿಮ್ಮ ದಾರಿಗೆ ಬರುವರು.
ಮಕರ
ವ್ಯವಹಾರದಲ್ಲಿ ಉಂಟಾಗಿದ್ದ ಅಡ್ಡಿ ನಿವಾರಣೆ. ಕುಟುಂಬ ಸದಸ್ಯರ ಜತೆ ಆತ್ಮೀಯ ಒಡನಾಟ. ಬಂಧುಗಳ ಭೇಟಿಯಿಂದ ಖುಷಿ.
ಕುಂಭ
ಭಾವನಾತ್ಮಕ ಸನ್ನಿವೇಶ ಎದುರಿಸುವಿರಿ. ಪ್ರೀತಿಪಾತ್ರರ ಜತೆ ಸಂಭ್ರಮ ಆಚರಣೆ. ಕೌಟುಂಬಿಕ ಒತ್ತಡ ನಿವಾರಣೆ, ನಿರಾಳತೆ.
ಮೀನ
ಸವಾಲಿನ ದಿನ. ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿ. ಸಂಗಾತಿ ಜತೆ ವಾಗ್ಯುದ್ಧ ಆದೀತು. ವೃತ್ತಿ ಸಂಬಂಧ ಪ್ರಯಾಣ ಸಂಭವ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ