ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಹಿಂದಿನ ತಪ್ಪು ಒಪ್ಪಿಕೊಳ್ಳುವ ಸಮಯ. ಆಪ್ತರ ಮನಸ್ಸು ನೋಯಿಸಲು ಇಷ್ಟ ಪಡಲಾರಿರಿ. ಸಂಜೆಯ ವೇಳೆ ಮನಸ್ಸು ಶಾಂತ.
ವೃಷಭ
ಉತ್ಸಾಹದ ದಿನ. ಇತರರಲ್ಲೂ ಉತ್ಸಾಹ ತುಂಬುವಿರಿ. ಸಂಬಂಧದಲ್ಲಿ ಅಪಸ್ವರ ಏಳಬಹುದು. ಕೂಡಲೇ ಸರಿಪಡಿಸಿಕೊಳ್ಳಿ.
ಮಿಥುನ
ಸಂಗಾತಿಯ ಒತ್ತಡ ಕಡಿಮೆ ಮಾಡಲು ಗಮನ ಕೊಡಿ. ನಿಮ್ಮೊಳಗಿನ ಭಿನ್ನಮತ ನಿವಾರಿಸಿ. ಹೊಸ ವ್ಯವಹಾರದಲ್ಲಿ ಹಣ ಹೂಡಲು ಹೋಗದಿರಿ.
ಕಟಕ
ಬಿಡುವಿಲ್ಲದ ದಿನ. ನಿಮಗಂತೂ ಉದಾಸೀನ ಕಾಡಲಿದೆ. ಹಾಗಾಗಿ ಕೆಲಸ ಅಪೂರ್ಣವಾದೀತು. ಆಹಾರದಲ್ಲಿ ಆರೋಗ್ಯಕರ ಪಥ್ಯ ಸಾಽಸಿರಿ.
ಸಿಂಹ
ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ. ಮೋಸ ಹೋಗುವ ಸಾಧ್ಯತೆ. ಮನೆಯವರ ಜತೆ ಕಾಲ ಕಳೆಯಿರಿ. ಅವರ ಬೇಸರ ನಿವಾರಿಸಿ.
ಕನ್ಯಾ
ಆದ್ಯತೆ ತಕ್ಕಂತೆ ಕಾರ್ಯವೆಸಗಿ. ಅನವಶ್ಯ ಕಾರ್ಯಕ್ಕೆ ಶ್ರಮ ವ್ಯಯ ಮಾಡಬೇಡಿ. ವೃತ್ತಿ ರಾಜಕೀಯ ನಿಮಗೆ ಹಾನಿ ತರಬಹುದು.
ತುಲಾ
ಗೊಂದಲದ ಮನಸ್ಥಿತಿ. ಪ್ರತಿಕೂಲ ಸನ್ನಿವೇಶ ದಿಟ್ಟವಾಗಿ ಎದುರಿಸಿ. ಒತ್ತಡಕ್ಕೆ ಮಣಿಯಬೇಡಿ. ಭಾವನೆ ನಿಯಂತ್ರಿಸಿಕೊಳ್ಳಿ.
ವೃಶ್ಚಿಕ
ಜೂಜಿನಂತಹ ಊಹಾತ್ಮಕ ಕಾರ್ಯದಿಂದ ದೂರವಿರಿ. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ಅನವಶ್ಯ ಚಿಂತೆಯಿಂದ ಮನಸ್ಸು ಹಾಳಾದೀತು.
ಧನು
ಉದ್ಯೋಗ ಬದಲಾವಣೆಯ ಯೋಜನೆ ಸ-ಲತೆ ಕಾಣಬಹುದು. ಮನೆಯ ಹೊಣೆಗಾರಿಕೆಯಿಂದ ಜಾರಿಕೊಳ್ಳಬೇಡಿ.
ಮಕರ
ತಪ್ಪು ಭಾವನೆ ಸಂಬಂಧ ಕೆಡಿಸಬಹುದು. ಆತುರದ ನಿರ್ಧಾರ ತಾಳಬೇಡಿ. ನಿಮ್ಮ ನಿಲುವಿನಲ್ಲಿ ಬದಲಾವಣೆ ತರಬೇಕಾದೀತು.
ಕುಂಭ
ಹಣದ ಬಿಕ್ಕಟ್ಟು ಕಾಡಲಿದೆ. ಆತ್ಮೀಯರೇ ನಯ ಮಾತಿನಿಂದ ಮೋಸ ಮಾಡಬಹುದು. ನಿಮ್ಮ ಎಚ್ಚರಿಕೆಯಲ್ಲಿ ಇರಬೇಕು. ಕೌಟುಂಬಿಕ ಅಶಾಂತಿ.
ಮೀನ
ನಿಮ್ಮ ಬೆನ್ನ ಹಿಂದೆ ಮಾತನಾಡುವವರಿಂದ ದೂರ ಇರಿ. ಕೆಲಸದಲ್ಲಿ ಪರಿಪೂರ್ಣತೆ ಸಾಽಸುವಿರಿ. ಏಕಾಂಗಿತನ ಕಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!