Saturday, August 30, 2025

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಅನವಶ್ಯ ಚಿಂತೆ ತಲೆಗೆ ಹಚ್ಚಿಕೊಳ್ಳದಿರಿ. ಸ್ವಹಿತಾಸಕ್ತಿಗೆ ಆದ್ಯತೆ ಕೊಡಿ. ವೃತ್ತಿ ಕ್ಷೇತ್ರದಲ್ಲಿ ವಾಗ್ವಾದ ನಡೆಸಬೇಡಿ. ಕೌಟುಂಬಿಕ ನೆಮ್ಮದಿ ಕಾಪಾಡಿ.
ವೃಷಭ
ಕೆಲದಿನಗಳ ಒತ್ತಡ ಇಂದು ನಿವಾರಣೆ. ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ನಿಮ್ಮ ಗುರಿಯೊಂದು ಬೇಗನೆ ಈಡೇರಲಿದೆ.
ಮಿಥುನ
ಹಳೆಯ ತಪ್ಪಿನಿಂದ ಪಾಠ ಕಲಿಯಿರಿ. ಇತ್ತೀಚಿನ ನಿರಾಶೆ ಮರೆತು ಹೊಸತನಕ್ಕೆ ಕಾಲಿಡಿ. ಅತಿವೇಗದ ಚಾಲನೆ ತರವಲ್ಲ. ಆಹಾರ ದಲ್ಲಿ ಹಿತಮಿತವಿರಲಿ.
ಕಟಕ
ವೃತ್ತಿಯ ಒತ್ತಡ, ಸಮಸ್ಯೆ. ಮಧ್ಯಾಹ್ನದ ವೇಳೆ ಸುಸೂತ್ರ, ನಿರಾಳತೆ. ಆರೋಗ್ಯ ಕಾಳಜಿಯಿರಲಿ. ಸಣ್ಣ ವಿಷಯಕ್ಕೂ ಅತಿ ಚಿಂತೆ ಮಾಡದಿರಿ.
ಸಿಂಹ
ನಿಮ್ಮ ಸುತ್ತ ಉತ್ಸಾಹದ ವಾತಾವರಣ. ಸಂಗಾತಿಯಿಂದ ಅಚ್ಚರಿಯ ಕೊಡುಗೆ. ಮಾನಸಿಕ ನೆಮ್ಮದಿ ಕಾಯಲು ಗಮನ ಕೊಡಿ.
ಕನ್ಯಾ
ಆತ್ಮೀಯ ಸಂಬಂಧ ಹಾಳಾಗಲು ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ. ಆಶಾವಾದಿಯಾಗಿರಿ.
ತುಲಾ
ಸವಾಲು ನಿಮ್ಮ ಮುಂದಿದೆಯೆ? ಹೃದಯದ ಮಾತು ಕೇಳಿ. ಆಪ್ತರ ಜತೆ ಭಿನ್ನಮತಕ್ಕೆ ಆಸ್ಪದ ನೀಡದಿರಿ. ಹಣದ ಕೊರತೆ ಕಾಡಬಹುದು.
ವೃಶ್ಚಿಕ
ವೃತ್ತಿಯಲ್ಲಿ ಫಲಪ್ರದ ದಿನ. ಸಂಗಾತಿ ಜತೆಗಿನ ಭಿನ್ನಮತ ಪರಿಹಾರ. ಬಂಧುಗಳ ಭೇಟಿ. ಖರ್ಚು ನಿಯಂತ್ರಣದಲ್ಲಿ ಸ-ಲತೆ ಸಾಽಸುವಿರಿ.
ಧನು
ಸಂಬಂಧದಲ್ಲಿ ಅಪಸ್ವರ ಏಳದಂತೆ ಎಚ್ಚರ ವಹಿಸಿ. ಹೊಸ ವ್ಯವಹಾರ ಆರಂಭಿಸುವ ಮುನ್ನ ಯೋಚಿಸಿರಿ. ದೈಹಿಕ ನೋವು ಬಾಧಿಸಬಹುದು.
ಮಕರ
ಮನೆಯಲ್ಲಿ ಮೂಡಿದ್ದ ಉದ್ವಿಗ್ನತೆ ಶಮನ. ವಿರಸ ಮಾಯ. ವಿವಾಹಾಕಾಂಕ್ಷಿಗಳಿಗೆ ಪೂರಕ ಸುದ್ದಿ. ಉದ್ಯೋಗ ದಲ್ಲಿ ಉನ್ನತಿ.
ಕುಂಭ
ಬಿಡುವಿಲ್ಲದ ದಿನ. ಏನಾದರೊಂದು ಕೆಲಸ ಬೆನ್ನು ಬಿಡದು. ಆತ್ಮೀಯ ಮಿತ್ರರ ಜತೆ ಕಾಲಕ್ಷೇಪ. ಕೌಟುಂಬಿಕ ಸಮಸ್ಯೆ ಮರೆಯುವಿರಿ.
ಮೀನ
ವೃತ್ತಿ ಮತ್ತು ಕುಟುಂಬದ ಮಧ್ಯೆ ಹೊಂದಾಣಿಕೆ ಮಾಡಲು ಸ-ಲರಾಗುವಿರಿ. ಆಪ್ತರ ವಿರೋಧ ಕಟ್ಟಿಕೊಳ್ಳದಿರಿ.

ಇದನ್ನೂ ಓದಿ