ಮೇಷ.
ತಾಳ್ಮೆಯಿಂದ ಕಾದರೆ ಫಲವಿದೆ. ಇದರ ಮಧ್ಯೆ ಖಾಸಗಿ ಬದುಕನ್ನು ಕಡೆಗಣಿಸಬೇಡಿ.
ವೃಷಭ
ವೃತ್ತಿಯಲ್ಲೂ ಕೌಟುಂಬಿಕ ಬದುಕಲ್ಲೂ ನಿಮಗೆ ಪೂರಕ ಪರಿಸರ. ಸವಾಲನ್ನು ದಿಟ್ಟವಾಗಿ ಎದುರಿಸಿ. ಜಯ ಸಾಽಸುವಿರಿ.
ಮಿಥುನ
ವ್ಯವಹಾರದಲ್ಲಿ ಸಫಲತೆಗೆ ಹೆಚ್ಚುವರಿ ಶ್ರಮ ಬೇಕು. ಬೇಕಾಬಿಟ್ಟಿ ಧೋರಣೆಯಿಂದ -ಲ ಸಿಗದು. ಮನೆಯಲ್ಲಿ ಸೌಹಾರ್ದ ಪರಿಸರ.
ಕಟಕ
ಹೊಸ ಅವಕಾಶಕ್ಕೆ ಹುಡುಕಾಟ ನಡೆಸುವಿರಿ. ಕೆಲದಿನಗಳಲ್ಲಿ ನಿಮ್ಮ ಉದ್ದೇಶ ಈಡೇರಲಿದೆ. ಸ್ನೇಹಿತರಿಂದ ಧನ ಮರಳುವ ಸಾಧ್ಯತೆ.
ಸಿಂಹ
ಮನಸ್ಸಿನಲ್ಲಿ ತಾಕಲಾಟ. ಅನಿರೀಕ್ಷಿತ ಸಮಸ್ಯೆ ಉದ್ಭವ. ಸವಾಲಿಗೆ ಹೆದರಿ ಓಡದಿರಿ. ಆತ್ಮೀಯರ ಸಹಕಾರ ಪಡೆದು ಮುನ್ನಡಿಯಿಡಿ.
ಕನ್ಯಾ
ಆತ್ಮೀಯರ ಜತೆಗಿನ ಭಿನ್ನಮತ ಬಗೆಹರಿಸಿ. ನೀವೇ ತುಸು ಬಗ್ಗಿದರೂ ಪರವಾಗಿಲ್ಲ. ಸಹೋದ್ಯೋಗಿ ಜತೆ ವಾಗ್ವಾದ ಬೇಡ.
ತುಲಾ
ಕೌಟುಂಬಿಕ ವಿಷಯ ಪರಿಹಾರಕ್ಕೇ ದಿನ ಸವೆಯಲಿದೆ. ಕೆಲವರ ಅಸಹಕಾರ. ವೃತ್ತಿಯಲ್ಲಿ ಅತ್ಯುತ್ಸಾಹ. ಆರ್ಥಿಕ ಸ್ಥಿತಿ ಸುಧಾರಣೆ.
ವೃಶ್ಚಿಕ
ನೀವಿರುವ ಪರಿಸರ ಸಂತೋಷದಿಂದ ತುಂಬಲಿದೆ. ಬಂಧುಗಳ ಸಹಕಾರ. ಕೌಟುಂಬಿಕ ಬದ್ಧತೆ ಈಡೇರಿಕೆ. ಧನಪ್ರಾಪ್ತಿ ಹೆಚ್ಚಳ.
ಧನು
ಪ್ರಮುಖ ಕಾರ್ಯ ಸಾಽಸುವಿರಿ. ಅದರಿಂದ ಮಾನಸಿಕ ನಿರಾಳತೆ. ಬಿಡುವಿಲ್ಲದ ಕಾರ್ಯ. ವಿರಾಮ ಪಡೆಯಲು ಮನಸ್ಸು ಮಾಡಿ.
ಮಕರ
ಕೆಲವರ ಜತೆ ವಾಗ್ವಾದ ನಡೆದೀತು. ತಾಳ್ಮೆ ಕಳಕೊಳ್ಳದಿರಿ. ಬಹುಮುಖ್ಯ ಗುರಿ ಸಾಽತವಾಗಲಿದೆ. ಆರ್ಥಿಕ ಉನ್ನತಿ.
ಕುಂಭ
ವೈಯಕ್ತಿಕವಾಗಿ ಯಾರನ್ನೂ ನಿಂದಿಸಬೇಡಿ. ಬಳಿಕ ಪಶ್ಚಾತ್ತಾಪ ಉಂಟಾದೀತು. ಆರ್ಥಿಕ ನಷ್ಟ ಸಂಭವ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.
ಮೀನ
ಬಹುಮುಖ್ಯ ಗುರಿ ಸಾಧನೆ. ಯೋಚಿಸಿ ಕಾರ್ಯ ಎಸಗಿ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ. ಮನಸ್ತಾಪಕ್ಕೆ ಅವಕಾಶ ಕೊಡದಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ