August 2, 2026
Sunday, August 2, 2026
spot_img

ದಿನ ಭವಿಷ್ಯ | ಇಂದು ಈ ರಾಶಿಯವರಿಗೆ ಮನೆಯ ಸಮಸ್ಯೆಗಳು ಮಂಜಿನಂತೆ ಕರಗುವ ಕಾಲ; ಉತ್ತಮ ಆರೋಗ್ಯದ ಭಾಗ್ಯ!

ಮೇಷ
ಸತತ ಪ್ರಯತ್ನದಿಂದ ಇಷ್ಟಾರ್ಥ ಸಿದ್ಧಿ. ಆರೋಗ್ಯ ಸ್ಥಿತಿ ಉತ್ತಮ. ಮನೆಯ ಸಮಸ್ಯೆ ಪರಿಹಾರದ ಸಂಕೇತ ತೋರುತ್ತಿದೆ. ನಿರಾಳವಾಗಿರಿ.  
ವೃಷಭ
ಕಳೆದುದರ ಕುರಿತು ಕೊರಗುತ್ತಾ ಕೂರದಿರಿ. ಭವಿಷ್ಯದ ಬಗ್ಗೆ ಗಮನ ಹರಿಸಿ. ಜೀವನಶೈಲಿ, ಆಹಾರದಲ್ಲಿ ಬದಲಾವಣೆ ತರಲು ಯತ್ನಿಸಿರಿ.      
ಮಿಥುನ
ಖಾಸಗಿ ಬದುಕಲ್ಲಿ  ಪೂರಕ ಬೆಳವಣಿಗೆ. ಕಾರ್ಯಸಿದ್ಧಿ. ಆರ್ಥಿಕ ಸ್ಥಿತಿ ತೃಪ್ತಿಕರ.  ಕೌಟುಂಬಿಕ ವಿರಸ ಶಮನ, ಸೌಹಾರ್ದ ವಾತಾವರಣ.
ಕಟಕ
ಕುಟುಂಬವು ನಿಮ್ಮ ಸಂತೋಷದ ಕೇಂದ್ರ. ಹಾಗಾಗಿ ಕೌಟುಂಬಿಕ ಹಿತಾಸಕ್ತಿಗೆ ಆದ್ಯತೆ ಕೊಡಿ. ಉದ್ಯಮದಲ್ಲಿ ತುಸು ಹಿನ್ನಡೆ ಸಂಭವ.    
ಸಿಂಹ
 ಕೆಲಸದಲ್ಲಿ ಮೂಡಿದ್ದ ಸಂಕಷ್ಟ ಪರಿಹಾರ. ಕುಟುಂಬ ಮತ್ತು ಸ್ನೇಹಿತರ ಜತೆ ಸಂಪರ್ಕವಿರಲಿ. ಉದ್ಯೋಗ ಬದಲಾವಣೆ ಒಳಿತು ತಾರದು.
ಕನ್ಯಾ
ಜೀವನಶೈಲಿ ಸುಧಾರಿಸಬೇಕು. ಯೋಗ, ಧ್ಯಾನ ಉತ್ತಮ. ಕೆಲಸದಲ್ಲಿ ಒತ್ತಡ ಹೆಚ್ಚು. ಹಳೆಯ ಸ್ನೇಹಿತರ ಭೇಟಿ. ಆರ್ಥಿಕ ಸ್ಥಿತಿ ಉತ್ತಮ.  
 ತುಲಾ
ಇದ್ದುದರಲ್ಲೇ ತೃಪ್ತಿ ಪಡುವ ಜಾಯಮಾನ ನಿಮ್ಮದಲ್ಲ.  ಹೊಸತನಕ್ಕೆ ತುಡಿಯುವಿರಿ. ವೃತ್ತಿ ಕ್ಷೇತ್ರದಲ್ಲಿ ವಾಗ್ವಾದ. ಸಹನೆ ಕಾಯ್ದುಕೊಳ್ಳಿ.
ವೃಶ್ಚಿಕ
 ನೀವು ಬಯಸಿದ ಬೆಳವಣಿಗೆ ಆಗಲಿದೆ. ಖಾಸಗಿ ಬದುಕಲ್ಲಿ ಹೊಂದಾಣಿಕೆ ಸುಗಮ ವಾಗಲಿದೆ. ಹಣಕಾಸು ಪರಿಸ್ಥಿತಿ ತೃಪ್ತಿಕರ.  
ಧನು
ಯಾವುದೋ ವಿಷಯ ದ್ವಂದ್ವದಲ್ಲಿ ಕೆಡವಲಿದೆ. ಪರಿಸ್ಥಿತಿಗೆ ತಕ್ಕಂತೆ ವರ್ತಿಸಿ. ದುಡುಕು ಬೇಡ.  ಕೌಟುಂಬಿಕ ಸೌಹಾರ್ದ ಹೆಚ್ಚಲಿದೆ.      
ಮಕರ
ಆರ್ಥಿಕ ಉನ್ನತಿ, ಉದ್ಯಮದಲ್ಲಿ ಯಶಸ್ಸು. ಅತಿಯಾದ ದೈಹಿಕ ಶ್ರಮ ಮೈನೋವಿಗೆ ಕಾರಣವಾದೀತು. ಶಾಂತ ಕೌಟುಂಬಿಕ ಪರಿಸರ.    
ಕುಂಭ
ನಿಮ್ಮ ಕೆಲಸದ ಮೇಲೆ ಹೆಚ್ಚು ಆಸ್ಥೆ ಇರಲಿ. ಇತರ ವಿಷಯಗಳತ್ತ ಗಮನ ಹರಿದು ನಿಮ್ಮ ಗುರಿ ತಪ್ಪದಿರಲಿ.  ಆಹಾರ ಸೇವನೆ ಹಿತಮಿತವಿರಲಿ.
ಮೀನ
ಮಾನಸಿಕ ಒತ್ತಡ ದಿಂದಾಗಿ ನಿದ್ರಾಹೀನತೆ. ಸಂಗಾತಿ ಜತೆಗೆ ವಿರಸ. ತಾಳ್ಮೆ ಕಳಕೊಳ್ಳದಿರಿ. ವೃತ್ತಿಯಲ್ಲಿ ಗುರಿ ಸಾಧನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !