ಮೇಷ
ಹೊಸ ಬದುಕಿಗೆ ತುಡಿಯವಿರಿ. ಉದಾತ್ತ ಉದ್ದೇಶ ಇರಿಸಿಕೊಳ್ಳಿ. ನಿಮಗೆ ಪೂರಕ ಬೆಳವಣಿಗೆ ನಡೆಯಲಿದೆ. ಮನೆಮಂದಿ ಜತೆ ಹರ್ಷೋಲ್ಲಾಸ.
ವೃಷಭ
ಈ ದಿನ ನಿಮ್ಮ ಪಾಲಿಗೆ ಶುಭದಾಯಕ. ಹಳೆ ಚಿಂತೆ ನಿವಾರಣೆ. ಹೊಸ ಭರವಸೆ ಕಾಣಲಿದೆ. ಬಂಧುಮಿತ್ರರ ಜತೆ ಆತ್ಮೀಯ ಕಾಲಕ್ಷೇಪ.
ಮಿಥುನ
ಈ ದಿನದ ಉದ್ದೇಶ ಈಡೇರಲಿದೆ. ಹೊಸ ಗುರಿ ಹಾಕಿಕೊಂಡರೆ ಅದೂ ಸಫಲತೆ ಕಾಣುವುದು. ಇಂದು ವೈರ, ಮನಸ್ತಾಪ ಮರೆತು ವ್ಯವಹರಿಸಿ.
ಕಟಕ
ಹದಗೆಟ್ಟ ಸಂಬಂಧ ಸುಧಾರಿಸಲು ಆದ್ಯತೆ ಕೊಡಿ. ಜೀವನೋತ್ಸಾಹ ಹೆಚ್ಚಳ. ಮನೆಮಂದಿಯ ಸಹಕಾರ ಸಿಗಲಿದೆ. ಆರ್ಥಿಕ ಸಂತೃಪ್ತಿ.
ಸಿಂಹ
ಸಮಸ್ಯೆ ಮರೆತು ಈ ದಿನ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ. ಸಣ್ಣ ವಿಷಯದಲ್ಲೂ ಸಂತೋಷ ಕಾಣಿರಿ. ಕೌಟುಂಬಿಕ ಮನಸ್ತಾಪ ತಣಿಸಿರಿ.
ಕನ್ಯಾ
ಸಾಂಸಾರಿಕ ಸಮಸ್ಯೆ ಇಂದು ನಿವಾರಣೆ. ಹೊಸ ಬಿಕ್ಕಟ್ಟಿಗೆ ಅವಕಾಶ ಕೊಡಬೇಡಿ. ಆರ್ಥಿಕ ಫಲ ಸಂತೋಷ ತರಲಿದೆ. ಬಂಧುಗಳ ಸಮಾಗಮ.
ತುಲಾ
ಹೊಸ ಯೋಜನೆಗೆ, ವ್ಯವಹಾರಕ್ಕೆ ಕಾಲ ಪಕ್ವವಾಗಿದೆ. ಶುಭ ನಿರೀಕ್ಷೆ ಮಾಡಿ. ಬಂಧುಗಳ ಜತೆ ಹಿತಕರ ಕಾಲಕ್ಷೇಪ. ಧನಾಗಮದಿಂದ ತೃಪ್ತಿ.
ವೃಶ್ಚಿಕ
ಮನೆಯಲ್ಲಿ ನಲಿವಿನ ವಾತಾವರಣ. ಸಣ್ಣ ವಿಷಯ ಈ ಸಂತೋಷ ಹಾಳು ಮಾಡಲು ಅವಕಾಶ ಕೊಡಬೇಡಿ. ಹೊಂದಾಣಿಕೆ ಮುಖ್ಯ.
ಧನು
ಮನೆಯಲ್ಲಿ ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ದುಡುಕಿನ ವರ್ತನೆ ತೋರದಿರಿ. ಹೊಂದಿಕೊಂಡು ಬಾಳಿ. ಆರ್ಥಿಕ ಉನ್ನತಿ.
ಮಕರ
ಹೊಸ ಕಾರ್ಯ, ವ್ಯವಹಾರದ ಯೋಜನೆ ಹಾಕಿಕೊಳ್ಳಿ. ಭರವಸೆಯ ಬೆಳಕು ಕಾಣುತ್ತಿದೆ. ಕೌಟುಂಬಿಕ ವಿರಸ ತಣ್ಣಗಾದೀತು.
ಕುಂಭ
ಕಾಡುತ್ತಿದ್ದ ಸಮಸ್ಯೆ ಪರಿಹಾರ ಕಾಣಲಿದೆ. ಇತರರ ಸಹಕಾರ ಅದಕ್ಕೆ ಕಾರಣ. ಸಾಂಸಾರಿಕ ವ್ಯವಹಾರದಲ್ಲಿ ಹೆಚ್ಚು ವಿವೇಕ ಪ್ರದರ್ಶಿಸಿ.
ಮೀನ
ಕೆಲದಿನಗಳಿಂದ ಬಾಕಿ ಇದ್ದ ಕೆಲಸ ಮುಗಿದ ನಿರಾಳತೆ. ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡದಿರಿ. ಶಾಂತವಾಗಿರಲು ಯತ್ನಿಸಿ.