ಮೇಷ
ಕೆಲಸದ ಒತ್ತಡ ಅಧಿಕ. ನಿಮ್ಮಿಂದ ಪ್ರಮಾದ ಘಟಿಸಬಹುದು. ಅನ್ಯರ ಜತೆ ವ್ಯವಹರಿಸುವಾಗ ವಿನಯವಿರಲಿ. ದುಡುಕಿನ ನಡೆ ನಿಮಗೇ ಹಾನಿಕರ.
ವೃಷಭ
ವೃತ್ತಿಯಲ್ಲಿ ಹೊಸ ಹೊಣೆಗಾರಿಕೆ ಹೆಗಲೇರುವುದು. ಸಹೋದ್ಯೋಗಿಗಳ ನಿಭಾವಣೆ ಸಂಕಷ್ಟ ತರುವುದು. ಉತ್ಸಾಹ ಕುಂದದಿರಲಿ.
ಮಿಥುನ
ಈ ದಿನ ನಿರಾಶಾಜನಕ. ಉದ್ದೇಶಿತ ಕಾರ್ಯ ಸಾಧನೆಯಾಗದು. ಸ್ನೇಹಿತರ ಭೇಟಿ ಮುಂದೂಡಿ. ಏಕಾಂಗಿತನದಲ್ಲಿ ನೆಮ್ಮದಿ ಕಾಣುವಿರಿ.
ಕಟಕ
ನಿರೀಕ್ಷಿತ ಫಲಿತಾಂಶ. ಹಣಗಳಿಕೆ. ಸಂಸಾರಿಗಳು ಕೌಟುಂಬಿಕ ಪರಿಸರದಲ್ಲಿ ಕುಷಿ ಕಾಣುವಿರಿ. ಖರೀದಿ ಉತ್ಸಾಹದಲ್ಲಿ ಜೇಬು ಬರಿದಾದೀತು, ಎಚ್ಚರವಿರಲಿ.
ಸಿಂಹ
ಮಾತಿನಲ್ಲಿ ನಯವಿರಲಿ. ಇಲ್ಲವಾದರೆ ವಾಗ್ಯುದ್ಧ ನಡೆದೀತು. ಹಣ ಗಳಿಕೆಯ ಆಸೆ ಒಳ್ಳೆಯದೆ, ಆದರೆ ಅದನ್ನು ಸಾಧಿಸಲು ಪ್ರಯತ್ನವೂ ಬೇಕು.
ಕನ್ಯಾ
ನಿಮ್ಮ ಪ್ರಗತಿಗೆ ಹೆಚ್ಚು ಆದ್ಯತೆ ಕೊಡಿ. ನಿಮ್ಮ ಹಾದಿಯಲ್ಲಿ ಅಡೆತಡೆ ತೋರುವುದು. ಬೆನ್ನು ನೋವು ಕಾಡಬಹುದು. ಯೋಗ, ಧ್ಯಾ ನ ಸಹಕಾರಿಯಾದೀತು.
ತುಲಾ
ಮಿಶ್ರಫಲದ ದಿನ. ಒಳಿತು ಕೆಡುಕು ಎರಡೂ ಅನುಭವಿಸುವಿರಿ. ಹೆತ್ತವರ ಜತೆ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕವಾಗಿ ಸಮಾಧಾನಕರ ಸ್ಥಿತಿ.
ವೃಶ್ಚಿಕ
ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಗೊಂದಲ, ವಿಘ್ನಗಳು ನಿವಾರಣೆ. ಕೆಲವು ಪ್ರಸಂಗಗಳಲ್ಲಿ ಭಾವನೆ ನಿಯಂತ್ರಿಸಿ. ಇಲ್ಲವಾದರೆ ಮುಜುಗರಕ್ಕೆ ಈಡಾಗುವಿರಿ.
ಧನು
ಕೌಟುಂಬಿಕ ವಿಷಯ ಅಸಮಾಧಾನಕ್ಕೆ ಕಾರಣವಾಗುವುದು. ಕೆಲವರ ಚರ್ಯೆ ಅಸಹನೀಯ ಎನಿಸುವುದು. ಹೊಂದಾಣಿಕೆ ಮುಖ್ಯ.
ಮಕರ
ಯಶಸ್ವಿ ದಿನ. ವಿಶ್ವಾಸ ವೃದ್ಧಿ. ನೀವು ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡುವುದು. ವಿವಾಹಿತ ದಂಪತಿಗೆ ಸಂತೋಷದ ಬೆಳವಣಿಗೆ.
ಕುಂಭ
ಖಾಸಗಿ ಬದುಕಿನಲ್ಲಿ ಸಂತೋಷದ ಪ್ರಸಂಗ. ಆತ್ಮೀಯರಿಂದ ಸಹಕಾರ. ಕಾಡುವ ಸಮಸ್ಯೆ ಪರಿಹಾರ ಕಾಣುವ ಸಂಕೇತ. ಆರ್ಥಿಕ ಗಳಿಕೆ.
ಮೀನ
ನಿಮ್ಮ ಸಂವೇದನಾಶೀಲ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ. ಬದುಕಿನಲ್ಲಿ ಸ್ಥಿರತೆ ಕಂಡ ಸಮಾಧಾನ. ಆರೋಗ್ಯದ ಕುರಿತ ಚಿಂತೆ ಪರಿಹಾರ.